ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹಿರಿಯರ ಬಗ್ಗೆ ಕಾಳಜಿ ವಹಿಸುವ ಉದ್ದೇಶದಿಂದ 'Feel at Home': ಡಾ.ಬಿಎಸ್ ತ್ರಿವೇಣಿ

ಹಿರಿಯ ನಾಗರಿಕರಿಗಾಗಿ ಮನೆಯ ವಾತಾವರಣ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಆರಂಭವಾಗಿರುವ 'Feel at Home' ಕೇಂದ್ರ, ಸಮಾಜದಲ್ಲಿ ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹಿರಿಯರ ಬಗ್ಗೆ ಕಾಳಜಿ ವಹಿಸುವ ಉದ್ದೇಶದಿಂದ ಸ್ಥಾಪಿಸಿದ್ದಾಗಿದೆ ಎಂದು ಬಿ.ಸಿ. ಶಿವಣ್ಣ ಪ್ರತಿಷ್ಠಾನದ ಸಹಸಂಸ್ಥಾಪಕಿ ಡಾ. ತ್ರಿವೇಣಿ ಬಿ.ಎಸ್‌ ಹೇಳಿದ್ದಾರೆ.
ಫೀಲ್ ಅಟ್ ಹೋಮ್
ಫೀಲ್ ಅಟ್ ಹೋಮ್

ಬೆಂಗಳೂರು: ಹಿರಿಯ ನಾಗರಿಕರಿಗಾಗಿ ಮನೆಯ ವಾತಾವರಣ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಆರಂಭವಾಗಿರುವ 'Feel at Home' ಕೇಂದ್ರ, ಸಮಾಜದಲ್ಲಿ ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹಿರಿಯರ ಬಗ್ಗೆ ಕಾಳಜಿ ವಹಿಸುವ ಉದ್ದೇಶದಿಂದ ಸ್ಥಾಪಿಸಿದ್ದಾಗಿದೆ ಎಂದು ಬಿ.ಸಿ. ಶಿವಣ್ಣ ಪ್ರತಿಷ್ಠಾನದ ಸಹಸಂಸ್ಥಾಪಕಿ ಡಾ. ತ್ರಿವೇಣಿ ಬಿ.ಎಸ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಫೀಲ್ ಅಟ್ ಹೋಮ್ ಸೀನಿಯರ್ ಕೇರ್ ಸೆಂಟರ್ ನ ಎರಡನೇ ಕೇಂದ್ರ ಪ್ರಾರಂಭದ ಕುರಿತು ಮಾತನಾಡಿದ ಅವರು, ಸಮಾಜದಲ್ಲಿ ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹಿರಿಯರ ಬಗ್ಗೆ ಕಾಳಜಿ ವಹಿಸುವ ಉದ್ದೇಶದಿಂದ ನಾವು ನಮ್ಮ ಮೊದಲ ಕೇಂದ್ರವನ್ನು 2019ರಲ್ಲಿ ಬನಶಂಕರಿಯಲ್ಲಿ ಆರಂಭಿಸಿದ್ದೆವು. ಈ ಕೇಂದ್ರಕ್ಕೆ ವ್ಯಾಪಕ ಮನ್ನಣೆ ಮತ್ತು ಮೆಚ್ಚುಗೆ ವ್ಯಕ್ತವಾಗಿದ್ದು ನಮ್ಮ ಬೆಂಗಳೂರಿನಲ್ಲಿ ಮತ್ತೊಂದು ಕೇಂದ್ರ ತೆರೆಯಲು ನಮ್ಮನ್ನು ಪ್ರೇರೇಪಿಸಿತು ಎಂದು ಹೇಳಿದ್ದಾರೆ.

ಬೆಂಗಳೂರಿನ ಪ್ರಮುಖ ಹಿರಿಯರ ಆರೈಕೆ ಕೇಂದ್ರಗಳಲ್ಲಿ ಒಂದಾದ ಫೀಲ್‌ ಅಟ್‌ ಹೋಮ್‌ ಸೀನಿಯರ್‌ ಕೇರ್‌ ಸೆಂಟರ್‌ ತನ್ನ ಎರಡನೇ ಕೇಂದ್ರವನ್ನು ಪ್ರಾರಂಭಿಸುವುದಾಗಿ ಘೋಷಣೆ ಮಾಡಿದ್ದು, ಅಲಮಾನ್ಸ್‌ ಐಟಿ ಸೊಲ್ಯೂಷನ್‌ ಸಹಯೋಗದಲ್ಲಿ ಇತರ ದಾನಿಗಳೊಂದಿಗೆ ಬಿ. ಸಿ. ಶಿವಣ್ಣ ಫೌಂಡೇಶನ್‌ (ಬಿಸಿಎಸ್‌ಎಫ್‌) ಸ್ಥಾಪಿಸಿರುವ ಈ ನೂತನ ಕೇಂದ್ರವು ಕನಕಪುರ ರಸ್ತೆಯ ತಲಘಟ್ಟಪುರ ಬಳಿಯ ಲಿಂಗದೀರನಹಳ್ಳಿಯಲ್ಲಿ 2ನೇ ಕೇಂದ್ರವಿದೆ.

ಹೊಸದಾಗಿ ಪ್ರಾರಂಭಿಸಲಾದ ಈ ಕೇಂದ್ರದಲ್ಲಿ 48 ಹಿರಿಯ ನಾಗರಿಕರು ತಂಗಬಹುದಾದಷ್ಟು ವಿಶಾಲವಾಗಿದ್ದು, ವೃದ್ಧಾಪ್ಯ ಸಹಾಯ ಒದಗಿಸುವ ವೃತ್ತಿಪರ ಆರೈಕೆದಾರರನ್ನು ಹೊಂದಿದೆ. ಬನಶಂಕರಿ ಎರಡನೇ ಹಂತದಲ್ಲಿರುವ ತನ್ನ ಮೊದಲ ಕೇಂದ್ರದಂತೆಯೇ, ಈ ಹೊಸ ಕೇಂದ್ರವು ಮನೆಯ ವಾತಾವರಣದಿಂದ ಕೂಡಿದ್ದು, ದಿನದ 24 ಗಂಟೆಯೂ ಕ್ಲಿನಿಕಲ್‌ ಬೆಡ್‌ ಮತ್ತು ಇತರೆ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆ. ಅಲ್ಫಾವಧಿ ಮತ್ತು ದೀರ್ಫಾವಧಿಯ ವಾಸ್ತವ್ಯವನ್ನು ಒದಗಿಸುವ ಈ ಕೇಂದ್ರದಲ್ಲಿ 'ಫೀಲ್‌ ಅಟ್‌ ಹೋಮ್‌" ಹೆಸರಿಗೆ ತಕ್ಕಂತೆ ಹಿರಿಯರು ತಮಗೆ ಬೇಕಾದ ಆಹಾರ ಇತರೆ ಸೇವೆಯನ್ನು ಪಡೆಯಬಹುದಾಗಿದೆ. ಅಲ್ಲದೆ, ಡೇ ಕೇರ್‌ ಸೇವೆಯನ್ನು ಸಹ ಇಲ್ಲಿ ಒದಗಿಸಲಾಗುತ್ತದೆ ಎಂದು ಡಾ. ತ್ರಿವೇಣಿ ಹೇಳಿದ್ದಾರೆ.

ಬ್ಲ್ಯಾಕ್‌ಕಾಂಬ್‌ನ (ಆಕ್ಸೆಂಚರ್‌ ಕಂಪನಿ) ಸಹ ನಿರ್ದೇಶಕರಾದ ಸತೀಶ್‌ ಪೈ ಮಾತನಾಡಿ, "ಇಂದಿನ ಜಂಜಾಟದ ಬದುಕು ಮತ್ತು ವೇಗದ ಜಗತ್ತಿನಲ್ಲಿ ಬಹುತೇಕ ಹಿರಿಯರು ತಾವು ಕಳೆದುಹೋಗಿದ್ದೇವೆ ಎಂಬ ಭಾವನೆಯನ್ನು ಹೊಂದಿದ್ದಾರೆ. ಹಿರಿಯರ ಆರೈಕೆ ಕೇಂದ್ರಗಳು ತನ್ನ ನಿವಾಸಿಗಳು ಸ್ನೇಹಿತರ ಜೊತೆಗೂಡಿ ಆನಂದಿಸಲು ಮತ್ತು ಸಂಜೆಗಳನ್ನು ಪ್ರಶಾಂತವಾಗಿ ಸಂತಸದಿಂದ ಕಳೆಯಲು ಅನುವು ಮಾಡಿಕೊಡುತ್ತವೆ. ದೇಶದಲ್ಲಿ ಇಂತಹ ಹೆಚ್ಚಿನ ಕೇಂದ್ರಗಳ ಅಗತ್ಯವಿದೆ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com