ಅಪಾರ ಸಂಖ್ಯೆಯಲ್ಲಿ ವೀಕ್ಷಕರು, ದಾಖಲೆಯ ಮಾರಾಟ: 'ಕೃಷಿ ಮೇಳ'ಕ್ಕೆ ಯಶಸ್ವಿ ತೆರೆ

ನಾಲ್ಕು ದಿನಗಳ ಕೃಷಿ ಮೇಳಕ್ಕೆ ತೆರೆ ಬಿದ್ದಿದೆ. ಇತ್ತೀಚಿನ ವರ್ಷಗಳಲ್ಲಿ ರೈತರು ಕೃಷಿಯ ಜೊತೆಗೆ ಹೆಚ್ಚುವರಿ ಆದಾಯದ ಮೂಲವಾಗಿ ಪಶುಪಾಲನೆಯಲ್ಲಿ ಆಸಕ್ತಿ ತೋರಿಸುವುದು ಕೃಷಿ ಮೇಳದಲ್ಲಿ ಎದ್ದುಕಂಡಿತು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳಕ್ಕೆ ತೆರೆ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳಕ್ಕೆ ತೆರೆ

ಬೆಂಗಳೂರು: ನಾಲ್ಕು ದಿನಗಳ ಕೃಷಿ ಮೇಳಕ್ಕೆ(Krishi Mela) ತೆರೆ ಬಿದ್ದಿದೆ. ಇತ್ತೀಚಿನ ವರ್ಷಗಳಲ್ಲಿ ರೈತರು ಕೃಷಿಯ ಜೊತೆಗೆ ಹೆಚ್ಚುವರಿ ಆದಾಯದ ಮೂಲವಾಗಿ ಪಶುಪಾಲನೆಯಲ್ಲಿ ಆಸಕ್ತಿ ತೋರಿಸುವುದು ಕೃಷಿ ಮೇಳದಲ್ಲಿ ಎದ್ದುಕಂಡಿತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೃಷಿ ಮೇಳದಲ್ಲಿ ಪಕ್ಷಿಗಳು ಮತ್ತು ಪ್ರಾಣಿಗಳ ಬಗ್ಗೆ ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವಿಚಾರಿಸುತ್ತಿದ್ದರು. ಪ್ರಾಣಿ-ಪಕ್ಷಿಗಳ ಬುಕ್ಕಿಂಗ್ ಮತ್ತು ಮಾರಾಟದ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.

ಕೃಷಿ ಮೇಳಕ್ಕೆ ಈ ಬಾರಿ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿನ್ನೆ ಕೊನೆಯ ದಿನ ಭಾನುವಾರ ಕೃಷಿ ಮೇಳಕ್ಕೆ(Bengaluru agriculture university) ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಕೃಷಿ ಕ್ಷೇತ್ರದಲ್ಲಿ ಆವಿಷ್ಕಾರಗಳು ಮತ್ತು ಇತ್ತೀಚಿನ ತಂತ್ರಜ್ಞಾನಗಳ ಒಂದು ನೋಟವನ್ನು ಸೆರೆಹಿಡಿಯುವಲ್ಲಿ ಮೇಳ ಯಶಸ್ವಿಯಾಯಿತು. ರೈತರಿಗೆ ಆದಾಯದ ಪರ್ಯಾಯ ವಿಧಾನಗಳ ಬಗ್ಗೆಯೂ ಅರಿವು ಮೂಡಿಸಲಾಯಿತು. 

ಆಡು, ಕುರಿ ಮತ್ತು ಕೋಳಿ ಉತ್ಪನ್ನಗಳಿಗೆ ಪ್ರಾಣಿ ಸಾಕಣೆ ಕೇಂದ್ರವನ್ನು ಹೇಗೆ ಪ್ರಾರಂಭಿಸುವುದು ಎಂದು ಕೇಳಲು ಹೆಚ್ಚಿನ ಜನರು ತಮ್ಮ ಬಳಿಗೆ ಬಂದಿದ್ದಾರೆ ಎಂದು ತೋಟದ ಮಾಲೀಕರು ಮತ್ತು ಮಾರಾಟಗಾರರು ಹೇಳಿದರು. ಕೇಂದ್ರೀಯ ಕೋಳಿ ಅಭಿವೃದ್ಧಿ ಸಂಸ್ಥೆಯ ಫಾರಂ ವ್ಯವಸ್ಥಾಪಕ ಡಾ.ಎಸ್.ಬಾಲರಾಜ್, ನಾಲ್ಕು ದಿನಗಳ ಅವಧಿಯಲ್ಲಿ ಸುಮಾರು 2 ಸಾವಿರ ಕೋಳಿಗಳನ್ನು ಮಾರಾಟ ಮಾಡಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಮಾರಾಟದಲ್ಲಿ ಏರಿಕೆ ಕಂಡುಬಂದಿದೆ. ಜನರ ಪ್ರತಿಕ್ರಿಯೆ ಉತ್ತಮವಾಗಿದೆ ಎಂದು ಹೇಳಿದರು.

ಬ್ರಾಯ್ಲರ್‌ಗಳಿಗೆ ಹೋಲಿಸಿದರೆ ಕಡಿಮೆ ಬಂಡವಾಳದೊಂದಿಗೆ ಹೆಚ್ಚಿನ ಆದಾಯದೊಂದಿಗೆ ಕೋಳಿಗಳನ್ನು ಸಾಕುವುದರ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು ಇದರ ಉದ್ದೇಶವಾಗಿತ್ತು. ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಜಯನಾಯಕ್ , ಈ ವರ್ಷ ಕೋಳಿಗಳ ಮಾರಾಟದಲ್ಲಿ ಶೇಕಡಾ 20ರಷ್ಟು ಏರಿಕೆಯಾಗಿದ್ದು, ಗಿರಿರಾಜ ತಳಿ ಅತಿ ಹೆಚ್ಚು ಮಾರಾಟವಾಗಿದೆ.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಜಾರಿಗೆ ಬಂದ ನಂತರ ಮೀನು ಸಾಕಾಣಿಕೆ ಜನಪ್ರಿಯವಾಗುತ್ತಿದೆ, ರೈತರಿಗೆ ಸಬ್ಸಿಡಿ ದರದಲ್ಲಿ ಸಿಗುವಂತೆ ಮಾಡಿದೆ ಎಂದು ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಕೆ.ಬಿ.ರಾಜಣ್ಣ ಹೇಳಿದರು. ಮೀನು ಸಾಕಾಣಿಕೆಯ ಪರಿಕಲ್ಪನೆಯನ್ನು ಉತ್ತೇಜಿಸಲು ವಿವಿಧ ತಳಿಯ ಮೀನುಗಳನ್ನು ಸುಮಾರು 1,000-1,500 ಗ್ರಾಹಕರಿಗೆ ಅಗ್ಗದ ದರದಲ್ಲಿ ಮಾರಾಟ ಮಾಡಲಾಯಿತು.

ದಕ್ಷಿಣ ಭಾರತದಲ್ಲಿ ಮ್ಯಾಪಿಂಗ್, ಸಮೀಕ್ಷೆ ಮತ್ತು ಚಿತ್ರ ಸಂಸ್ಕರಣೆ, ಬೆಳೆ ಆರೋಗ್ಯ, ಬೆಳೆ ಎಣಿಕೆ ಮತ್ತು ಇಳುವರಿಯನ್ನು ವಿಶ್ಲೇಷಿಸಲು ಡ್ರೋನ್ ನ್ನು ಬಾಡಿಗೆಗೆ ಪಡೆದ ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಬೀಗಲ್ ಅಗ್ರಿಟೆಕ್‌ನಂತಹ ವ್ಯಾಪಾರ ಮಾಲೀಕರು, ಅಸ್ಸಾಂನಿಂದ ತಮ್ಮ ಚಹಾ ತೋಟಗಳನ್ನು ನೆಡುವ ಮೊದಲು ಸಮೀಕ್ಷೆ ಮತ್ತು ಮ್ಯಾಪಿಂಗ್ ಮಾಡುವ ಬಗ್ಗೆ ಮೇಳದಲ್ಲಿ ಮಾಹಿತಿ ಪಡೆದುಕೊಂಡರು. 

ಮಂಡ್ಯ ಜಿಲ್ಲೆಯ ಫಾರ್ಮ್ ಮಾಲೀಕ ಗೌತಮ್ ಚಂದ್ ಗತಿಯಾ ಅವರಿಗೆ ಒಂದು ಲಕ್ಷಕ್ಕೂ ಹೆಚ್ಚು ಮಾರಾಟವಾಗಿದೆ. ತಮಗೆ ಸಿಕ್ಕಿದ ಅದ್ಭುತ ಪ್ರತಿಕ್ರಿಯೆಗೆ ಅವರು ಖುಷಿಯಾಗಿದ್ದಾರೆ. ಸ್ಟಾಲ್ ಮಾಲೀಕರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ವೇದಿಕೆ ಮತ್ತು ಹೊಸ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶವನ್ನು ಒದಗಿಸಲು ಇಂತಹ ಮೇಳಗಳು ಆಗಾಗ ನಡೆಯುವುದು ಉತ್ತಮ ಎಂದು ಅವರು ಹೇಳುತ್ತಾರೆ. 

ದಕ್ಷಿಣ ಆಫ್ರಿಕಾದ ಡಾರ್ಪರ್ ಕುರಿ 5 ಲಕ್ಷಕ್ಕೆ ಮಾರಾಟ
ಮೊನ್ನೆ ಶುಕ್ರವಾರ ಕೃಷಿ ಮೇಳದಲ್ಲಿ ದಕ್ಷಿಣ ಆಫ್ರಿಕಾದ ದೇಶೀಯ ಕುರಿ ಡೋರ್ಪರ್ 5 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಮಾರೇನಹಳ್ಳಿಯ ಸಿಂಚನ ಮೇಕೆ ಮತ್ತು ಕುರಿ ಫಾರಂನ ಜಿ ಸತೀಶ್ ಅವರು ಶುಕ್ರವಾರ ಕುರಬೂರು ಚಿಂತಾಮಣಿಯಿಂದ ರಾಘವೇಂದ್ರ ಜಿ ಎಂಬುವವರಿಗೆ 100 ಕೆಜಿ ತೂಕದ ಕಪ್ಪು ತಲೆಯ ವಿಶಿಷ್ಟವಾದ ಗಂಡು ಡೋರ್ಪರ್ ನ್ನು ಮಾರಾಟ ಮಾಡಿದರು. ಮುಂದಿನ ಕೆಲವು ತಿಂಗಳುಗಳಲ್ಲಿ ಇದು ಸುಮಾರು 150 ಕೆಜಿ ತೂಗುವ ನಿರೀಕ್ಷೆಯಿದೆ. ಕುಲಾಂತರಿ ತಳಿಗಾಗಿ ಈ ಕುರಿಗಾಗಿ ಇನ್ನೂ 100 ಬುಕ್ಕಿಂಗ್ ಮಾಡಿದ್ದೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com