ಬಳ್ಳಾರಿ ಪಾಲಿಕೆಗೆ ಹಿಡಿಶಾಪ ಹಾಕಿ ತಾವೇ ರಸ್ತೆ ಗುಂಡಿ ಮುಚ್ಚಿ ನಾಗರೀಕರ ಪ್ರತಿಭಟನೆ!

ರಾಜ್ಯಾದ್ಯಂತ ರಸ್ತೆಗಳ ಸ್ಥಿತಿ ಹದಗೆಟ್ಟಿದ್ದು, ಬಳ್ಳಾರಿಯೂ ಇದರಿಂದ ಹೊರತಾಗಿಲ್ಲ. ಹದಗೆಟ್ಟ ರಸ್ತೆಗಳ ದುರಸ್ತಿ ಕಾರ್ಯಕ್ಕೆ ಸ್ಥಳೀಯ ನಗರಸಭೆಯವರು ಮುಂದಾಗ ಹಿನ್ನೆಲೆಯಲ್ಲಿ ಬೇಸತ್ತು ಸ್ಥಳೀಯ ನಿವಾಸಿಗಳೇ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ ಗುಂಡಿಗಳ ಮುಚ್ಚುವ ಕೆಲಸ ಮಾಡುತ್ತಿದ್ದಾರೆ.
ಹುಬ್ಬಳ್ಳಿಯ ಗೋಪನಕೊಪ್ಪದ ಮಹಿಳೆಯರು ತುಳಸಿ ಪೂಜೆ ನೆರವೇರಿಸಿ ರಸ್ತೆ ಗುಂಡಿಗಳ ವಿರುದ್ಧ ಪ್ರತಿಭಟಿಸಿದರು.
ಹುಬ್ಬಳ್ಳಿಯ ಗೋಪನಕೊಪ್ಪದ ಮಹಿಳೆಯರು ತುಳಸಿ ಪೂಜೆ ನೆರವೇರಿಸಿ ರಸ್ತೆ ಗುಂಡಿಗಳ ವಿರುದ್ಧ ಪ್ರತಿಭಟಿಸಿದರು.

ಬಳ್ಳಾರಿ/ಹುಬ್ಬಳ್ಳಿ: ರಾಜ್ಯಾದ್ಯಂತ ರಸ್ತೆಗಳ ಸ್ಥಿತಿ ಹದಗೆಟ್ಟಿದ್ದು, ಬಳ್ಳಾರಿಯೂ ಇದರಿಂದ ಹೊರತಾಗಿಲ್ಲ. ಹದಗೆಟ್ಟ ರಸ್ತೆಗಳ ದುರಸ್ತಿ ಕಾರ್ಯಕ್ಕೆ ಸ್ಥಳೀಯ ನಗರಸಭೆಯವರು ಮುಂದಾಗ ಹಿನ್ನೆಲೆಯಲ್ಲಿ ಬೇಸತ್ತು ಸ್ಥಳೀಯ ನಿವಾಸಿಗಳೇ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ ಗುಂಡಿಗಳ ಮುಚ್ಚುವ ಕೆಲಸ ಮಾಡುತ್ತಿದ್ದಾರೆ.

ರಸ್ತೆ ತುಂಬಾ ಧೂಳು, ಜನರ ಆರೋಗ್ಯ ಹಾಳು, ರಸ್ತೆ ನಿರ್ಮಿಸಿ ಅಪಘಾತ ತಪ್ಪಿಸಿ, ತಗ್ಗು ಗುಂಡಿ ಮುಚ್ಚೋಣ ಜನರ ಪ್ರಾಣ ಉಳಿಸೋಣ ಎಂಬಿತ್ಯಾದಿ ಘೋಷಣೆಗಳನ್ನು ಬರೆದಿರುವ ಭಿತ್ತಪತ್ರಗಳನ್ನ ಹಿಡಿದು ಹಿಡಿಶಾಪ ಹಾಕುತ್ತಿದ್ದಾರೆ. ಈ ಹೋರಾಟದಲ್ಲಿ ಮಕ್ಕಳು, ವೈದ್ಯರು, ಇಂಜನೀಯರ್​ಗಳು ಸೇರಿದಂತೆ ಪಕ್ಷಾತೀತವಾಗಿ ತೊಡಗಿಕೊಂಡಿದ್ದಾರೆ.

ರಸ್ತೆ ಗುಂಡಿಗಳಿಂದಾಗಿ ಹಲವಾರು ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇದೆ, ಆದರೆ, ಈ ಸಂಬಂಧ ಸ್ಥಳೀಯ ಆಡಳಿತಕ್ಕೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿ ವೆಂಕಟೇಶ್ ರೆಡ್ಡಿ ಹೇಳಿದ್ದಾರೆ.

ಅಧಿಕಾರಿಗಳು ಕೆಲಸ ಆರಂಭಿಸುವ ಹೊತ್ತಿಗೆ ಇನ್ನಷ್ಟು ಜನರನ್ನು ಕಳೆದುಕೊಳ್ಳುತ್ತೇವೆ. ಹೀಗಾಗಿ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳುವವರೆಗೆ ಕಾಯಲು ಸಾಧ್ಯವಿಲ್ಲ. ಹೀಗಾಗಿ ಸ್ಥಳೀಯರಿಂದ ಹಣ ಸಂಗ್ರಹಿಸಿ ರಾಯಲ್ ವೃತ್ತ, ಎಸ್ಪಿ ಕಚೇರಿ ರಸ್ತೆ ಮತ್ತು ಮೋತಿ ವೃತ್ತದ ಬಳಿಯಿರುವ ದೊಡ್ಡ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.

ಮತ್ತೊಬ್ಬ ನಿವಾಸಿ ಪ್ರಭಾಕರ ನಾಗಲದಿನ್ನಿ ಮಾತನಾಡಿ, ನಗರದ ಬಹುತೇಕ ರಸ್ತೆಗಳು ಆರು ತಿಂಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತಿಲ್ಲ. ಗುತ್ತಿಗೆದಾರರ ವಿರುದ್ಧ ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನಾವು ಅಣಕು ಪ್ರತಿಭಟನೆ ಮಾಡಲಿಲ್ಲ. ಸಿಮೆಂಟ್ ಮತ್ತು ಪುಡಿಮಾಡಿದ ಕಲ್ಲುಗಳನ್ನು ಖರೀದಿಸಿ, ಅವುಗಳನ್ನು ಮಿಶ್ರಣ ಮಾಡಿ ನಂತರ ರಸ್ತೆ ಗುಂಡಿಗಳ ಮುಚ್ಚುವ ಕೆಲಸ ಮಾಡಿದೆವು. ಇದು ತಾತ್ಕಾಲಿಕ ಪರಿಹಾರವಾಗಿದ್ದು, ಅಧಿಕಾರಿಗಳು ಶೀಘ್ರಗತಿಯಲ್ಲಿ ತಮ್ಮ ಕರ್ತವ್ಯ ನಿಭಾಯಿಸುತ್ತಾರೆಂದು ಭಾವಿಸುತ್ತೇನೆಂದು ತಿಳಿಸಿದ್ದಾರೆ.

ಹುಬ್ಬಳ್ಳಿ ಹಾಗೂ ಧಾರವಾಡದಲ್ಲೂ ಇದೇ ರೀತಿಯ ಪ್ರತಿಭಟನೆಗಳು ನಡೆದಿತ್ತು. ಮಹಿಳೆಯರ ಗುಂಪೊಂದು ತುಳಸಿ ಪೂಜೆ ಮಾಡಿ ರಸ್ತೆ ಗುಂಡಿಗಳ ಮುಂದೆ ನಿಂತು ಪ್ರತಿಭಟನೆ ನಡೆಸಿದ್ದರು.

ರಸ್ತೆ ದುರಸ್ತಿ ಮಾಡುವಂತೆ ಸ್ಥಳೀಯ ಮುಖಂಡರಿಗೆ ಹಲವು ತಿಂಗಳಿಂದ ಮನವಿ ಸಲ್ಲಿಸುತ್ತಿದ್ದರೂ ಯಾರೂ ಸ್ಪಂದಿಸುತ್ತಿಲ್ಲ. ರಸ್ತೆಗಳು ಹದಗೆಟ್ಟಿದ್ದು, ನೂರಾರು ವಾಹನ ಸವಾರರು ದೂರು ನೀಡದೆ ಸಂಚರಿಸುತ್ತಾರೆ. ಪ್ರತಿಭಟನೆಯ ಸಂಕೇತವಾಗಿ ಪೂಜೆ ಮಾಡಿ, ರಸ್ತೆ ದುರಸ್ತಿ ಮಾಡಲು ನಿರ್ಧರಿಸಿದೆವು ಎಂದು ಮಹಿಳೆಯರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com