ವೈದ್ಯರ ಅಮಾನತು ಹಿಂಪಡೆಯಿರಿ: ಗರ್ಭಿಣಿ-ಅವಳಿ ಶಿಶುಗಳ ಸಾವಿನ ಪ್ರಕರಣ ಸಂಬಂಧ ವೈದ್ಯಾಧಿಕಾರಿಗಳ ಸಂಘ ಒತ್ತಾಯ

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿ ಗರ್ಭಿಣಿ ಹಾಗೂ ಆಕೆಯ ಅವಳಿ ಶಿಶುಗಳು ಸಾವಿಗೀಡಾದ ಪ್ರಕರಣ ಹಿನ್ನೆಲೆಯಲ್ಲಿ ಅಮಾನತಿಗೆ ಒಳಗಾಗಿದ್ದ ಕರ್ತವ್ಯ ನಿರತ ವೈದ್ಯೆ ಡಾ.ಉಷಾ ಎ.ಆರ್ ಅವರ ಬೆಂಬಲಕ್ಕೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ನಿಂತಿದೆ. ಸಂಘದ ನಿಯೋಗ ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ಭೇಟಿ ಮಾಡಿ ಅಮಾನತು ಹ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿ ಗರ್ಭಿಣಿ ಹಾಗೂ ಆಕೆಯ ಅವಳಿ ಶಿಶುಗಳು ಸಾವಿಗೀಡಾದ ಪ್ರಕರಣ ಹಿನ್ನೆಲೆಯಲ್ಲಿ ಅಮಾನತಿಗೆ ಒಳಗಾಗಿದ್ದ ಕರ್ತವ್ಯ ನಿರತ ವೈದ್ಯೆ ಡಾ. ಉಷಾ ಎ.ಆರ್ ಅವರ ಬೆಂಬಲಕ್ಕೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ನಿಂತಿದೆ. ಸಂಘದ ನಿಯೋಗ ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ಭೇಟಿ ಮಾಡಿ ಅಮಾನತು ಹಿಂಪಡೆಯುವಂತೆ ಮನವಿ ಮಾಡಿದ್ದು, ಸಾವಿಗೆ ಡಾ.ಉಷಾ ಹೊಣೆಯಲ್ಲ ಎಂದು ಹೇಳಿದ್ದಾರೆ. 

ಮರಣಕ್ಕೀಡಾದ 30 ವರ್ಷದ ಗರ್ಭಿಣಿ ಕಸ್ತೂರಿ ತನ್ನ ನೆರೆಮನೆಯ ಸರೋಜಮ್ಮ ಅವರೊಂದಿಗೆ ಆಸ್ಪತ್ರೆಗೆ ಬಂದಾಗ ವೈದ್ಯರು ಆಪರೇಷನ್ ಥಿಯೇಟರ್ (OT) ನಲ್ಲಿದ್ದಾರೆ ಎಂದು ಹೇಳಿದ್ದರು. ಕಾರ್ಯನಿರತ ಗೃಹ ಶಸ್ತ್ರಚಿಕಿತ್ಸಕರೊಬ್ಬರು ಉಷಾ ಅವರಿಗೆ ಮಾಹಿತಿ ನೀಡಿದ ನಂತರ, ಅವರು ಮಹಿಳೆಯನ್ನು ಪರೀಕ್ಷೆ ಮಾಡಲು ಬಂದರು. ಕೆಲವು ಪರೀಕ್ಷೆಗಳಿಗೆ ಒಳಗಾಗುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ಮಹಿಳೆಯೇ ಮನೆಗೆ ಹೋಗುತ್ತೇನೆ ಎಂದು ಹಠಮಾಡಿದ್ದಳು ಎಂದು ಸಂಘದ ಅಧ್ಯಕ್ಷ ಚೇತನ್ ಎಂ ಆರೋಗ್ಯ ಸಚಿವರಿಗೆ ಹೇಳಿದ್ದಾರೆ.

ಅಮಾನತುಗೊಂಡ ವೈದ್ಯೆ ಸಂಘಕ್ಕೆ ಪತ್ರ ಬರೆದಿದ್ದು ಅದನ್ನು ಆರೋಗ್ಯ ಸಚಿವರಿಗೆ ನೀಡಿದ್ದಾರೆ. ಪತ್ರದಲ್ಲಿ ವೈದ್ಯೆ, ನಾನು ನವೆಂಬರ್ 2ರಂದು ಸಂಜೆ 5ರಿಂದ ರಾತ್ರಿ 9.30ರ ಮಧ್ಯೆ 8 ಸರ್ಜರಿಗಳನ್ನು ಮಾಡಿದ್ದೆ. ಈ ಮಧ್ಯೆ ತೀರಿಹೋದ ಮಹಿಳೆ ಇನ್ನೊಬ್ಬರ ಜೊತೆ ಕಾರಿಡಾರ್ ನಲ್ಲಿ ನಿಂತಿರುವುದನ್ನು ನೋಡಿದ್ದೆ. ಆಕೆ ದಾಖಲೆಗಳನ್ನು ಕೊಡಲು ನಿರಾಕರಿಸಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾಳೆ ಎಂದು ಸ್ನಾತಕೋತ್ತರ ವೈದ್ಯೆ ಮತ್ತು ನರ್ಸ್ ಒಬ್ಬರಿಂದ ತಿಳಿಯಿತು. ನವೆಂಬರ್ 4ರಂದು ಸಚಿವರು ಮತ್ತು ಆಯುಕ್ತರು ನನ್ನನ್ನು ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತು ಮಾಡಿದರು ಎಂದು ವಿವರಿಸಿದ್ದಾರೆ.

ಈ ಬಗ್ಗೆ DHO ಡಾ ಮಂಜುನಾಥ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿ, ಇಲಾಖಾ ವಿಚಾರಣೆ ಪ್ರಗತಿಯಲ್ಲಿದೆ. ಸಂಬಂಧಪಟ್ಟ ಪ್ರಾಧಿಕಾರವು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ಆಗಿರುವ ಘಟನೆ, ಸತ್ಯಾಸತ್ಯತೆ ಹೊರಬರಲಿದೆ ಎಂದರು.ಈ ಮಧ್ಯೆ, ಕರ್ತವ್ಯನಿರತ ವೈದ್ಯರು ಮತ್ತು ಮೂವರು ಸ್ಟಾಫ್ ನರ್ಸ್‌ಗಳನ್ನು ವಜಾಗೊಳಿಸುವಂತೆ ಒತ್ತಾಯಿಸಿ ನಾಗರಿಕ ಸಮಾಜದ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ಈ ಘಟನೆಯ ಬಳಿಕ ರಾಜ್ಯ ಸರ್ಕಾರ ನವೆಂಬರ್ 4ರಂದು ಸುತ್ತೋಲೆ ಹೊರಡಿಸಿದ್ದು, ಸರ್ಕಾರಿ ಆಸ್ಪತ್ರೆಗಳಿಗೆ ರೋಗಿಗಳು ಯಾವುದೇ ದಾಖಲೆ ಇಲ್ಲದೆ ಹೋದರೂ ಸಹ ತುರ್ತು ಚಿಕಿತ್ಸೆ ನೀಡಬೇಕು ಇಲ್ಲವಾದಲ್ಲಿ ಕೆಲಸ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com