ನಿಗದಿತ ಮೊತ್ತಕ್ಕಿಂತ ಹೆಚ್ಚು ಶುಲ್ಕ: ಬೆಂಗಳೂರು ನಾಗರಿಕರೇ ಈ ಬಾರಿ ಆನ್ ಲೈನ್ ಲ್ಲಿ ವಿದ್ಯುತ್ ಬಿಲ್ ಪಾವತಿಸಬೇಡಿ
ನ್‌ಲೈನ್ ಮೂಲಕ ಬಿಲ್ ಪಾವತಿ ಮಾಡುವುದರ ಬದಲಾಗಿ ಖುದ್ದಾಗಿ ಹೋಗಿ ಶುಲ್ಕ ಪಾವತಿ ಮಾಡುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ನಾಗರಿಕರಿಗೆ ತಿಳಿಸಿದೆ.
Published: 10th November 2022 08:32 AM | Last Updated: 10th November 2022 07:15 PM | A+A A-

ಸಾಂಕೇತಿಕ ಚಿತ್ರ
ಬೆಂಗಳೂರು: ಆನ್‌ಲೈನ್ ಮೂಲಕ ಬಿಲ್ ಪಾವತಿ ಮಾಡುವುದರ ಬದಲಾಗಿ ಖುದ್ದಾಗಿ ಹೋಗಿ ಶುಲ್ಕ ಪಾವತಿ ಮಾಡುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ನಾಗರಿಕರಿಗೆ ತಿಳಿಸಿದೆ. ಅನೇಕ ಗ್ರಾಹಕರ ವಿದ್ಯುತ್ ಬಿಲ್‌ಗಳಲ್ಲಿ ತಾಂತ್ರಿಕ ದೋಷಗಳು ಕಂಡುಬಂದು ಇ-ಪಾವತಿಗಳನ್ನು ಮಾಡುವಾಗ ಅವರ ಬಿಲ್‌ಗಳಲ್ಲಿ ನಮೂದಿಸಿದ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ಪಾವತಿಸಬೇಕಾಗಿ ಬಂದಿದೆ.
ಅನೇಕ ಗ್ರಾಹಕರಿಗೆ ತಮ್ಮ ಬಿಲ್‌ಗಳಲ್ಲಿ ನಮೂದಿಸಲಾದ ನಿಜವಾದ ಮೊತ್ತಕ್ಕಿಂತ ನಾಲ್ಕರಿಂದ ಐದು ಪಟ್ಟು ಹೆಚ್ಚಿನ ಮೊತ್ತವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಾಗಿ ಬಂದಿದೆ. ಇದು ನಾಗರಿಕರಲ್ಲಿ ಗೊಂದಲ ಸೃಷ್ಟಿಸಿತು. ಬೆಸ್ಕಾಂ ಇ-ಪಾವತಿ ಸೇರಿದಂತೆ ಬಹು ಇ-ಪಾವತಿ ಪೋರ್ಟಲ್‌ಗಳಲ್ಲಿ ಮೊತ್ತದಲ್ಲಿ ವ್ಯತ್ಯಾಸ ಕಂಡುಬಂದಿದೆ.
ಮನೆಗೆ ಬಂದ ಮುದ್ರಿತ ಬೆಸ್ಕಾಂ ಬಿಲ್ 1,800 ರೂಪಾಯಿಗಳಾಗಿದ್ದವು. ಆದರೆ ನಾನು ಅದನ್ನು ಆನ್‌ಲೈನ್‌ನಲ್ಲಿ ಪಾವತಿಸಲು ಪ್ರಯತ್ನಿಸಿದಾಗ 5,400 ರೂಪಾಯಿಗಳಾಗಿದ್ದವು. ನಾನು ಇದುವರೆಗೆ ಶುಲ್ಕ ಪಾವತಿಯಲ್ಲಿ ಬಾಕಿ ಉಳಿಸಿಕೊಂಡಿರಲಿಲ್ಲ ಎಂದಿದ್ದಾರೆ.
ನಿಜವಾದ ಮೊತ್ತವನ್ನು ಪಾವತಿಸಲು ಪ್ರಯತ್ನಿಸಿದಾಗ ಸಾಧ್ಯವಾಗಲಿಲ್ಲ. ಸಹಾಯಕ್ಕಾಗಿ ಬೆಸ್ಕಾಂ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ, ಆದರೆ ಯಾರೂ ಸಿಗುತ್ತಿಲ್ಲ ಎನ್ನುತ್ತಾರೆ ರೋಹಿಣಿ ಬಿ. (ಹೆಸರು ಬದಲಿಸಲಾಗಿದೆ)
ಆನ್‌ಲೈನ್ ಬಿಲ್ ಜನರೇಟ್ ಮಾಡಲಾದ ಮ್ಯಾನ್ಯುವಲ್ ಬಿಲ್‌ಗಿಂತ ಹೆಚ್ಚಿರುವುದನ್ನು ಕಂಡುಹಿಡಿದ ಇನ್ನೊಬ್ಬ ನಿವಾಸಿ ಊರ್ವಶಿ ಎಂ(ಹೆಸರು ಬದಲಿಸಲಾಗಿದೆ) ಅವರ ಸ್ಥಿತಿಯೂ ಇದೇ ಈಗಿದೆ. ಅವರ ಮ್ಯಾನ್ಯುವಲ್ ಬಿಲ್ 1,900 ರೂಪಾಯಿಗಳು ಆದರೆ ಆನ್‌ಲೈನ್ ಬಿಲ್ 6,000 ರೂಪಾಯಿ ತೋರಿಸುತ್ತಿದೆ.
ಬಿಲ್ ನಲ್ಲಿ ದೋಷವಿದೆ: ಆಗಿರುವ ದೋಷವನ್ನು ಒಪ್ಪಿಕೊಂಡ ಬೆಸ್ಕಾಂ ಎಂಡಿ ಮಹಾಂತೇಶ ಬಿಳಗಿ, ಈ ಬಗ್ಗೆ ಅನೇಕ ನಾಗರಿಕರಿಂದ ದೂರು ಬರುತ್ತಿದೆ. ಸಾಫ್ಟ್‌ವೇರ್‌ನಲ್ಲಿನ ತಾಂತ್ರಿಕ ದೋಷಗಳಿಂದಾಗಿ ಹೀಗೆ ಆಗಿದೆ. ಇನ್ಫೋಸಿಸ್‌ನಿಂದ ಇನ್ಫೈನೈಟ್ ಸೊಲ್ಯೂಷನ್ಸ್‌ಗೆ ಕಾರ್ಯಾಚರಣೆಯ ಸೇವೆಗಳ ಬದಲಾವಣೆಯು ಸುಗಮ ಪ್ರಕ್ರಿಯೆಯಾಗಬೇಕಿತ್ತು, ಹೀಗಾಗಿ ನಾಗರಿಕರು ತಮ್ಮ ಬಿಲ್ ಮೊತ್ತದಲ್ಲಿ ದೋಷಗಳನ್ನು ಕಂಡುಕೊಳ್ಳುತ್ತಿದ್ದಾರೆ. ಹೆಚ್ಚುವರಿ ಶುಲ್ಕಗಳನ್ನು ಪಾವತಿಸದೆ ಈ ಬಾರಿ ವೈಯಕ್ತಿಕವಾಗಿ ಬೆಸ್ಕಾಂ ಕಚೇರಿಗೆ ಅಥವಾ ಬೆಂಗಳೂರು ಒನ್ ಗೆ ಹೋಗಿ ಶುಲ್ಕ ಪಾವತಿಸುವಂತೆ ಕೋರುತ್ತೇವೆ ಎನ್ನುತ್ತಾರೆ.