ಕರ್ನಾಟಕದಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಳ: ಇಲ್ಲಿದೆ ಮಾಹಿತಿ...

ನಿನ್ನೆ ಪ್ರಕಟವಾದ ಸಮಗ್ರ ಕರಡು ಮತದಾರರ ಪಟ್ಟಿ-2023ರಲ್ಲಿ, ರಾಜ್ಯದಲ್ಲಿ ಯುವ ಮತದಾರರ ಸಂಖ್ಯೆ (18-19 ವರ್ಷ ವಯಸ್ಸಿನವರು) 6,97,784 ಕ್ಕೆ ಏರಿದೆ, 2022ಕ್ಕೆ ಹೋಲಿಸಿದರೆ 2,95,860 ಹೆಚ್ಚಳವಾಗಿದೆ. ಕಳೆದ ವರ್ಷ ಯುವ ಮತದಾರರ ಸಂಖ್ಯೆ 4,01,924 ಆಗಿದ್ದವು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಿನ್ನೆ ಪ್ರಕಟವಾದ ಸಮಗ್ರ ಕರಡು ಮತದಾರರ ಪಟ್ಟಿ-2023ರಲ್ಲಿ, ರಾಜ್ಯದಲ್ಲಿ ಯುವ ಮತದಾರರ ಸಂಖ್ಯೆ (18-19 ವರ್ಷ ವಯಸ್ಸಿನವರು) 6,97,784 ಕ್ಕೆ ಏರಿದೆ, 2022ಕ್ಕೆ ಹೋಲಿಸಿದರೆ 2,95,860 ಹೆಚ್ಚಳವಾಗಿದೆ. ಕಳೆದ ವರ್ಷ ಯುವ ಮತದಾರರ ಸಂಖ್ಯೆ 4,01,924 ಆಗಿದ್ದವು. 

ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, 17 ವರ್ಷ ದಾಟಿದವರು ನೋಂದಣಿಗೆ ಮುಂಚಿತವಾಗಿ ಅರ್ಜಿಗಳನ್ನು ಸಲ್ಲಿಸಬಹುದು. ನೋಂದಣಿಗೆ ವರ್ಷದಲ್ಲಿ ನಾಲ್ಕು ಅರ್ಹತಾ ದಿನಾಂಕಗಳಿವೆ - ಜನವರಿ 1, ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1. ಅರ್ಜಿದಾರರ ವಯಸ್ಸು 18ನ್ನು ಯಾವುದೇ ಅರ್ಹತಾ ದಿನಾಂಕದಂದು ದಾಟಿದಾಗ, ಹೆಸರನ್ನು ನೋಂದಾಯಿಸಲಾಗುವುದು ಎಂದು ಹೇಳಿದರು. ಅರ್ಹ ಮತದಾರರು ತಮ್ಮ ಅರ್ಜಿಗಳನ್ನು ಸಲ್ಲಿಸಲು ಮತದಾರರ ಸಹಾಯವಾಣಿ ಅಪ್ಲಿಕೇಶನ್ ನ್ನು ಡೌನ್‌ಲೋಡ್ ಮಾಡಬಹುದು ಅಥವಾ www.nvsp.in ಗೆ ಭೇಟಿ ನೀಡಬಹುದು.

ಮತದಾರರ ಜನಸಂಖ್ಯೆಯು ಒಟ್ಟು ಜನಸಂಖ್ಯೆಯ ಶೇಕಡಾ 67.22 ರಷ್ಟಿದೆ. ಫೋಟೋ-ಐಡಿ ಕಾರ್ಡ್‌ಗಳ ವ್ಯಾಪ್ತಿಯು ಶೇಕಡಾ 99.99 ರಷ್ಟಿದೆ. ಒಟ್ಟು ಮತದಾರರ ಸಂಖ್ಯೆ 5,09,01,662. ಅವರಲ್ಲಿ 2,56,39,736 ಪುರುಷರು, 2,52,09,619 ಮಹಿಳೆಯರು ಮತ್ತು 4,490 ಇತರರಾಗಿದ್ದಾರೆ. 

ಒಟ್ಟು 11,13,063 ಮತದಾರರು ಸೇರ್ಪಡೆಯಾಗಿದ್ದು, ಪೂರ್ವ ಪರಿಷ್ಕರಣೆ ಸಂದರ್ಭದಲ್ಲಿ 27,08,947 ಮತದಾರರನ್ನು ಪಟ್ಟಿಯಿಂದ ಅಳಿಸಲಾಗಿದೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ನಗರದಲ್ಲಿ ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು 6,41,466 ಮತದಾರರಿದ್ದರೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಕನಿಷ್ಠ 1,65,485 ಮತದಾರರಿದ್ದಾರೆ.

ಶೇಕಡಾ 67 ಮಂದಿ ತಮ್ಮ ಆಧಾರ್ ಲಿಂಕ್ ಮಾಡಿದ್ದಾರೆ
ಶೇಕಡಾ 67 ರಷ್ಟು ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಚುನಾವಣಾ ಪಟ್ಟಿಯೊಂದಿಗೆ ಲಿಂಕ್ ಮಾಡಿದ್ದಾರೆ. ಸಿರಾದಲ್ಲಿ ಶೇಕಡಾ 99ರಷ್ಟು ಮತದಾನವಾಗಿದ್ದರೆ, ಗೋವಿಂದರಾಜನಗರ ಕ್ಷೇತ್ರದಲ್ಲಿ ಅತಿ ಕಡಿಮೆ ಶೇಕಡಾ 13ರಷ್ಟು ಮತದಾನವಾಗಿದೆ. 2023ರ ಮಾರ್ಚ್ 31ರೊಳಗೆ ಶೇಕಡಾ 100ರಷ್ಟು ಸಾಧನೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮೀನಾ ತಿಳಿಸಿದರು. 2022 ರಲ್ಲಿ 58,179 ಮತಗಟ್ಟೆಗಳಿಗೆ ಹೋಲಿಸಿದರೆ ಮುಂದಿನ ವರ್ಷ 58,282 ಮತಗಟ್ಟೆಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com