ಬೆಂಗಳೂರು: ಮತ್ತೊಂದು ಹನಿಟ್ರ್ಯಾಪ್ ಪ್ರಕರಣ; ಐಪಿಎಸ್ ಅಧಿಕಾರಿ ಹೆಸರು ಹೇಳಿ 15 ಲಕ್ಷ ರೂಪಾಯಿ ಸುಲಿಗೆ!

ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಹನಿ ಟ್ರ್ಯಾಪ್ ಜಾಲ ಪ್ರಕರಣ ವರದಿಯಾಗಿದೆ. ಬಲೆಗೆ ಸಿಲುಕಿದ್ದ ಯುವಕ 15.6 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಹನಿ ಟ್ರ್ಯಾಪ್ ಜಾಲ ಪ್ರಕರಣ ವರದಿಯಾಗಿದೆ. ಬಲೆಗೆ ಸಿಲುಕಿದ್ದ ಯುವಕ 15.6 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.

ಚಾಮರಾಜನಗರದ ನಿವಾಸಿಗೆ ಇನ್ ಸ್ಟಾ ಗ್ರಾಂ ನಲ್ಲಿ ಯುವತಿಯೊಬ್ಬಳ ಪರಿಚಯವಾಗಿತ್ತು. ಯುವತಿ ತನ್ನನ್ನು ಚಾಂದಿನಿ ಎಂದು ಪರಿಚಯಮಾಡಿಕೊಂಡಿದ್ದಳು ಪರಿಚಯವಾದ ಬಳಿಕ ಅತ್ಯಂತ ಸಲುಗೆಯಿಂದ ದೂರವಾಣಿ ಮಾತುಕತೆ ನಡೆಸುತ್ತಿದ್ದರು.

ಬೆತ್ತಲಾಗಿ ಮಾತುಕತೆ ನಡೆಸುವಂತೆ ಯುವತಿ ಪ್ರಚೋದಿಸುತ್ತಿದ್ದಳು. ಅದರಂತೆ ಯುವಕ ಬೆತ್ತಲಾಗಿ ಮಾತುಕತೆ ಕೂಡ ನಡೆಸಿದ್ದ. ಇದನ್ನು ಯುವತಿ ವಿಡಿಯೋ ರೆಕಾರ್ಡ್ ಮಾಡಿದ್ದಳು. ಎರಡು ದಿನಗಳ ಬಳಿಕ ಯುವತಿಯ ಸ್ನೇಹಿತನೊಬ್ಬ ತಾನು ಐಪಿಎಸ್ ಅಧಿಕಾರಿ ಎಂದು ಆತನಿಗೆ ಕರೆ ಮಾಡಿದ್ದಾನೆ, ಬೆತ್ತಲೆ ವಿಡಿಯೋ ವಿಚಾರವನ್ನು ಪ್ರಸ್ತಾಪಿಸಿ 15.6 ಲಕ್ಷ ರು ಹಣ ಸುಲಿಗೆ ಮಾಡಿದ್ದಾನೆ. ನಂತರ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ಭಯಗೊಂಡ ವ್ಯಕ್ತಿ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದ.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಬ್ಯಾಂಕ್ ಖಾತೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ವಿಡಿಯೋ ಕಾಲ್ ಮಾಡುವಾಗ ಚಾಂದಿನಿ ಸಂತ್ರಸ್ತ ವ್ಯಕ್ತಿಗೆ ಮುಖ ತೋರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ಕು ದಿನಗಳ ಹಿಂದೆ ಸುದ್ದಗುಂಟೆಪಾಳ್ಯ ಪೊಲೀಸರು ಹನಿ ಟ್ರ್ಯಾಪಿಂಗ್ ಆರೋಪದ ಮೇಲೆ 23 ವರ್ಷದ ಯುವತಿಯನ್ನು ಬಂಧಿಸಿದ್ದರು. ನಾಲ್ವರು ಸೇರಿ ಹಾಲಿನ ಬೂತ್ ಮಾಲೀಕನ ಮೇಲೆ ಹಲ್ಲೆ ನಡೆಸಿ ಹಣ, ಕಾರು ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com