ಸಾವು-ಬದುಕಿನ ನಡುವೆ ನರಳಾಟ; ಮಗನ ಗುಣಪಡಿಸಿದ ಕೊರಗಜ್ಜನಿಗೆ ಉಕ್ರೇನ್ ದಂಪತಿಯಿಂದ ಅಗೇಲು ಸೇವೆ!

ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜನಿಗೆ ಉಕ್ರೇನ್ ಮೂಲದ ದಂಪತಿಗಳು ಅಗೇಲು ಸೇವೆ ಮಾಡುವ ಮೂಲಕ ಹರಕೆ ತೀರಿಸಿದ್ದಾರೆ.
ಕೊರಗಜ್ಜನಿಗೆ ಉಕ್ರೇನ್ ದಂಪತಿಯಿಂದ ಅಗೇಲು ಸೇವೆ
ಕೊರಗಜ್ಜನಿಗೆ ಉಕ್ರೇನ್ ದಂಪತಿಯಿಂದ ಅಗೇಲು ಸೇವೆ

ಮಂಗಳೂರು: ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜನಿಗೆ ಉಕ್ರೇನ್ ಮೂಲದ ದಂಪತಿಗಳು ಅಗೇಲು ಸೇವೆ ಮಾಡುವ ಮೂಲಕ ಹರಕೆ ತೀರಿಸಿದ್ದಾರೆ.

ತಮ್ಮ ಕುಟುಂದ ಕಷ್ಟವನ್ನು ನೀಗಿಸಿದ್ದಕ್ಕೆ ಉಕ್ರೇನ್ ದೇಶದ ಕುಟುಂಬವೊಂದು ದಕ್ಷಿಣ ಕನ್ನಡಕ್ಕೆ ಬಂದು ಕೊರಗಜ್ಜನಿಗೆ ಅಗೇಲು ಸೇವೆ ಮಾಡುವ ಮೂಲಕ ಹರಕೆ ತೀರಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಉಕ್ರೇನ್ ಪ್ರಜೆ ಆ್ಯಂಡ್ರೋ, ಪತ್ನಿ ಎಲೆನಾ ಮತ್ತು ಮಗ ಮ್ಯಾಕ್ಸಿಂ ಭಾರತಕ್ಕೆ ಪ್ರವಾಸ ಬಂದಿದ್ದರು. ಉಕ್ರೇನ್ ದಂಪತಿ ತನ್ನ ಮಗನ ಮ್ಯಾಕ್ಸಿಂ ನರದ ಸಮಸ್ಯೆಯ ಚಿಕಿತ್ಸೆಗಾಗಿ ನಾಡಿ ನೋಡಿ ಔಷದಿ ಕೊಡುವ ಭಕ್ತಿಭೂಷಣ್ ಪ್ರಭೂಜಿ ಅವರನ್ನು ಭೇಟಿ ಮಾಡಿದ್ದರು. ಇಸ್ಕಾನ್‌ನಲ್ಲಿದ್ದ ರಷ್ಯಾದ ಆಂಡ್ರ್ಯೂ ಅವರ ಸ್ನೇಹಿತ ಮತ್ತು ನಮ್ಮ ಗೋಮಂದಿರದಿಂದ ಔಷಧಿಯನ್ನು ಸೂಚಿಸಿದ್ದರು. ಭಕ್ತಿಭೂಷಣ್ ಪ್ರಭೂಜಿ ಇಸ್ಕಾನ್ ನ ಸದಸ್ಯರೂ ಕೂಡ ಆಗಿದ್ದಾರೆ. ಮಾಕ್ಸಿಂಗೆ ಚಿಕಿತ್ಸೆಯ ಭಾಗವಾಗಿ ದೇಸಿ ದನದ ವಿಹಾರದ ಜೊತೆಗೆ ನಾಟಿ ಚಿಕಿತ್ಸೆಯನ್ನು ಪ್ರಭೂಜಿ ಆರಂಭಿಸಿದ್ದರು. ಈ ಚಿಕಿತ್ಸೆಗಾಗಿ ಕಳೆದ ಮೂರು ತಿಂಗಳಿಂದ ಬಂಟ್ವಾಳದ ಕುಮ್ಡೇಲುವಿನ ಶ್ರೀ ರಾಧಾ ಸುರಭೀ ಗೋ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದರು.

ಇದೇ ಸಂದರ್ಭದಲ್ಲಿ ಜನ್ಮಾಷ್ಠಮಿಯ ಸಂದರ್ಭದಲ್ಲಿ ನಡೆದ ಕೊರಗಜ್ಜನ ಕೋಲವೊಂದರಲ್ಲಿ ಪಾಲ್ಗೊಂಡಿದ್ದ ಉಕ್ರೇನ್ ಮೂಲದ ದಂಪತಿಗಳು ಮಗನ ಆನಾರೋಗ್ಯ ಸಮಸ್ಯೆ ಪರಿಹಾರವಾಗಲಿ ಎಂದು ಕೋರಿಕೊಂಡಿದ್ದಾರೆ. ಮಗ ಹುಷಾರದಾರೆ ಕೊರಗಜ್ಜನಿಗೆ ಅಗೇಲು ಸೇವೆ ನೀಡುವುದಾಗಿ ಹರಕೆ ಹೊತ್ತಿದ್ದಾರೆ. ಇದೀಗ ಮಗ ಮಾಕ್ಸಿಂ ಗುಣಮುಖನಾಗಿದ್ದು, ಉಕ್ರೇನ್ ದಂಪತಿ ಪುದು ಗ್ರಾಮದ ಕೊಡ್ಮಣ್ಣು ಎಂಬಲ್ಲಿ ಕೊರಗಜ್ಜನಿಗೆ ಅಗೇಲು ಸೇವೆಯನ್ನು ಅರ್ಪಿಸಿದ್ದಾರೆ. ಕೊರಗಜ್ಜನಿಗೆ ಅಗೆಲು ಕೊಡುವ ಸಂದರ್ಭದಲ್ಲಿ ಭಕ್ತಿಭೂಷಣ್ ದಾಸ್ ಪ್ರಭುಜಿ, ಪದ್ಮನಾಭ ಗೋವಿನ ತೋಟ, ನವೀನ್ ಮಾರ್ಲ, ಯಾದವ ಕೊಡಂಗೆ ಮೊದಲಾದವರು ಉಪಸ್ಥಿತರಿದ್ದರು.

ಇನ್ನೆರಡು ದಿನಗಳಲ್ಲಿ ಕುಟುಂಬ ಮತ್ತೆ ಉಕ್ರೇನ್‌ಗೆ ಮರಳಲಿದೆ. ಕೊರಗಜ್ಜನ ದಯೆಯಿಂದ ಮಗ ಹುಷಾರಾದ ಸಂತೃಪ್ತ ಭಾವ ವಿದೇಶೀ ಕುಟುಂಬದಲ್ಲಿ ಮೂಡಿದೆ. ಈ ಕುರಿತು ಮಾತನಾಡಿರುವ ಆಂಡ್ರ್ಯೂ ಅವರು, 'ನಾನು ಗೋಮಂದಿರಕ್ಕೆ ಕೃತಜ್ಞನಾಗಿದ್ದೇನೆ ಮತ್ತು ನನ್ನ ಮಗ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದಾನೆ. ನಾನು ಮತ್ತೆ ನನ್ನ ಕೆಲವು ಸ್ನೇಹಿತರೊಂದಿಗೆ ಚಿಕಿತ್ಸೆಗಾಗಿ ಆರು ತಿಂಗಳೊಳಗೆ ಇಲ್ಲಿಗೆ ಭೇಟಿ ನೀಡುತ್ತೇನೆ" ಎಂದು ಹೇಳಿದ್ದಾರೆ.

ಕೊರಗಜ್ಜ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿ ಜನಪ್ರಿಯ ದೈವವಾಗಿದ್ದು, ಯಾವುದೇ ಬೆಲೆಬಾಳುವ ವಸ್ತು ಕಳೆದು ಹೋದರೆ, ಆರೋಗ್ಯ ಸಮಸ್ಯೆ ಎದುರಾದರೆ ಅಲ್ಲಿನ ಜನರು ಕೊರಗಜ್ಜನಿಗೆ ಹರಕೆ ಹೊತ್ತುಕೊಳ್ಳುತ್ತಾರೆ. ಬಹುಪಾಲು ಬೇಡಿಕೆಗಳು ಈಡೇರಿವೆ ಎನ್ನುತ್ತಾರೆ ತುಳುನಾಡಿ ಕೊರಗಜ್ಜನ ನಂಬಿರುವ ಭಕ್ತರು. ಕೊರಗಜ್ಜನ ವವಾಡಕ್ಕೆ ಹಲವು ನಿದರ್ಶನಗಳಿವೆ. ಉಡುಪಿಯಲ್ಲಿ ವೈದ್ಯರೇ ಪೋಷಕರಿಗೆ ನಿಮ್ಮ ಬದುಕುವುದು ಕಷ್ಟ ಎಂದು ತಿಳಿಸಿದ್ದರು. ನಾಲ್ಕು ತಿಂಗಳ ಅಸುಳೆಯನ್ನು ಕೊರಗಜ್ಜನ ಗಂಧ ಪ್ರಸಾದವನ್ನು ಪಡೆದು ಮಗುವಿಗೆ ಹಚ್ಚಿದ್ದರು. ನಂತರ ವೈದ್ಯರ ಪ್ರಯತ್ನ ಕೊರಗಜ್ಜನ ಕೃಪೆಯಿಂದ ಎರಡೂ ವಾರಗಳಲ್ಲಿ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಪಡೆದುಕೊಂಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com