ಸೀಮೆಎಣ್ಣೆ ಚಾಲಿತ ದೋಣಿಗಳ ಇಂಜಿನ್ ಪೆಟ್ರೋಲ್ ಗೆ ಪರಿವರ್ತನೆ: ಮೀನುಗಾರಿಕೆ ಇಲಾಖೆ ಪ್ರಸ್ತಾವನೆ

ರಾಜ್ಯದಲ್ಲಿ ಸಾಂಪ್ರದಾಯಿಕ ನಾಡದೋಣಿಗಳಿಗೆ ಇಂಧನದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸೀಮೆ ಎಣ್ಣೆ ಚಾಲಿತ ಇಂಜಿನ್  ನ್ನು ಪೆಟ್ರೋಲ್ ಗೆ ಬದಲಾಯಿಸಲು ಅನುಮತಿ ಕೋರಿ ಮೀನುಗಾರಿಕೆ ಇಲಾಖೆ ರಾಜ್ಯ ಸರ್ಕಾರದ ಮುಂದೆ ನಾಲ್ಕನೇ ಬಾರಿಗೆ ಪ್ರಸ್ತಾವನೆ ಸಲ್ಲಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಸಾಂಪ್ರದಾಯಿಕ ನಾಡದೋಣಿಗಳಿಗೆ ಇಂಧನದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸೀಮೆ ಎಣ್ಣೆ ಚಾಲಿತ ಇಂಜಿನ್  ನ್ನು ಪೆಟ್ರೋಲ್ ಗೆ ಬದಲಾಯಿಸಲು ಅನುಮತಿ ಕೋರಿ ಮೀನುಗಾರಿಕೆ ಇಲಾಖೆ ರಾಜ್ಯ ಸರ್ಕಾರದ ಮುಂದೆ ನಾಲ್ಕನೇ ಬಾರಿಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವ ಕೇಂದ್ರ ಸರ್ಕಾರದ ಎಲ್ ಪಿಜಿ ಅಭಿಯಾನಕ್ಕೆ ವಿರುದ್ದವಾಗಿದೆ. 

ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್ ) ಅಡಿ ಸಬ್ಸಿಡಿ ರಹಿತರಿಗೆ 3,000 ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು  ನವೆಂಬರ್ 2 ರಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪತ್ರವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸ್ವೀಕರಿಸಿದ ನಂತರ ಮೀನುಗಾರಿಕೆ ಇಲಾಖೆ ಬೇಡಿಕೆ ತೀವ್ರವಾಗಿದೆ.  2022-23ರ ಆರ್ಥಿಕ ವರ್ಷದಲ್ಲಿ ಒಟ್ಟಾರೇ ಹಂಚಿಕೆಯನ್ನು 5,472 KL ಗೆ ಹೆಚ್ಚಿಸಬೇಕೆಂಬ ಒತ್ತಾಯವಿದೆ.

ಹೆಚ್ಚುವರಿ ಪೂರೈಕೆ ಅಗತ್ಯಕ್ಕಿಂತಲೂ ಕಡಿಮೆಯಿದೆ. 8,030 ಬೋಟ್‌ಗಳಿಗೆ ವಾರ್ಷಿಕ 24,900 ಕೆ.ಎಲ್. ಸೀಮೆ ಎಣ್ಣೆ ಬೇಕಾಗುತ್ತದೆ. ಪ್ರತಿ ಬೋಟುಗಳಿಗೆ ತಿಂಗಳಿಗೆ 300 ಲೀಟರ್ ಇಂಧನದ ಅಗತ್ಯವಿದೆ.  ಕಳೆದ ವರ್ಷ 10 ಸಾವಿರ ಕೆ.ಎಲ್‌ ಸೀಮೆ ಎಣ್ಣೆ ಮಂಜೂರಾಗಿದೆ  ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಮೀನುಗಾರಿಕೆ ಇಲಾಖೆ ನಿರ್ದೇಶಕ ರಾಮಚಾರ್ಯ ಪುರಾಣಿಕ್, ಸೀಮೆ ಎಣ್ಣೆ ಇಂಜಿನ್ ನಿಂದ ಪೆಟ್ರೋಲ್ ಇಂಜಿನ್ ಗೆ ಪರಿವರ್ತನೆಗೆ ಸುಮಾರು 1.30 ಲಕ್ಷ ವೆಚ್ಚವಾಗಲಿದೆ. ಆದಕ್ಕಾಗಿ ಸರ್ಕಾರದಿಂದ ಶೇ. 50 ರಷ್ಟು ಸಹಾಯಧನ ನೀಡಲು ಪ್ರಸ್ತಾಪಿಸಲಾಗಿದೆ. ಆದರೆ, ಇಡೀ ಪ್ರಕ್ರಿಯೆಗಾಗಿ ರೂ. 62 ಕೋಟಿಯ ಅಗತ್ಯವಿದೆ ಎಂದು ಅವರು ತಿಳಿಸಿದರು. 

ಗೋವಾ ಮಾದರಿಯನ್ನು ಅನುಸರಿಸಲು ಇಲಾಖೆ ಎದುರು ನೋಡುತ್ತಿದೆ. ಅಲ್ಲಿ ಶೇ. 90 ರಷ್ಟು ಮೀನುಗಾರರು ಪೆಟ್ರೋಲ್ ಬಳಸುತ್ತಿದ್ದಾರೆ. ಪೆಟ್ರೋಲ್ ಸುಲಭವಾಗಿ ದೊರೆಯಲಿದೆ ಮತ್ತು ಮತ್ತು ಸೀಮೆ ಎಣ್ಣೆಗೆ ಅದೇ ಸಬ್ಸಿಡಿ ಸೂತ್ರವನ್ನು ಅನ್ವಯಿಸಬಹುದಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com