ಹುಬ್ಬಳ್ಳಿ-ದೆಹಲಿ ನಡುವೆ ನೇರ ವಿಮಾನ ಸೇವೆ ಆರಂಭ

ಬಹುದಿನಗಳ ಬೇಡಿಕೆಯಾದ ಹುಬ್ಬಳ್ಳಿಯಿಂದ ದೆಹಲಿಗೆ ಇಂಡಿಗೋ ವಿಮಾನಯಾನ ಸೇವೆ ಸೋಮವಾರದಿಂದ ಆರಂಭವಾಗಿದ್ದು, ಇನ್ನು ಮುಂದೆ ಹುಬ್ಬಳ್ಳಿ ಹಾಗೂ ನೆರೆಯ ಜಿಲ್ಲೆಗಳ ಜನರು ನೇರವಾಗಿ ದೆಹಲಿಗೆ ಹಾರಬಹುದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹುಬ್ಬಳ್ಳಿ: ಬಹುದಿನಗಳ ಬೇಡಿಕೆಯಾದ ಹುಬ್ಬಳ್ಳಿಯಿಂದ ದೆಹಲಿಗೆ ಇಂಡಿಗೋ ವಿಮಾನಯಾನ ಸೇವೆ ಸೋಮವಾರದಿಂದ ಆರಂಭವಾಗಿದ್ದು, ಇನ್ನು ಮುಂದೆ ಹುಬ್ಬಳ್ಳಿ ಹಾಗೂ ನೆರೆಯ ಜಿಲ್ಲೆಗಳ ಜನರು ನೇರವಾಗಿ ದೆಹಲಿಗೆ ಹಾರಬಹುದಾಗಿದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ವರ್ಚುವಲ್ ಸಭೆಯ ಮೂಲಕ ಭಾಗಿಯಾಗಿ ಹುಬ್ಬಳ್ಳಿ-ದೆಹಲಿ ವಿಮಾನಯಾನಕ್ಕೆ ಹಸಿರು ನಿಶಾನೆ ತೋರಿಸಿದರು.

179 ಪ್ರಯಾಣಿಕರಿದ್ದ ಏರ್‌ಬಸ್‌ ಎ320 ಸೋಮವಾರ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಸಂತಸದಿಂದ ಸ್ವಾಗತಿಸಲಾಯಿತು. ಹುಬ್ಬಳ್ಳಿಯಿಂದ ದೆಹಲಿಗೆ ಹೊರಟ ವಿಮಾನದಲ್ಲಿ ನಿನ್ನೆ 151 ಮಂದಿ ಪ್ರಯಾಣಿಸಿದರು, ಈ ಪ್ರಯಾಣಿಕರಲ್ಲಿ ಪ್ರಹ್ಲಾದ್ ಜೋಶಿ ಕೂಡ ಒಬ್ಬರಾಗಿದ್ದರು.

ವೇಳಾಪಟ್ಟಿಯ ಪ್ರಕಾರ, ವಿಮಾನ ಸಂಖ್ಯೆ 6E 5624 ದೆಹಲಿಯಿಂದ ಬೆಳಿಗ್ಗೆ 10 ಗಂಟೆಗೆ ಹೊರಟು ಮಧ್ಯಾಹ್ನ 12.45 ಕ್ಕೆ ಹುಬ್ಬಳ್ಳಿ ತಲುಪಲಿದೆ. ನಂತರ ವಿಮಾನ ಸಂಖ್ಯೆ 6E 5625 ಹುಬ್ಬಳ್ಳಿಯಿಂದ ಮಧ್ಯಾಹ್ನ 1.15 ಕ್ಕೆ ಹೊರಟು 3.45ಕ್ಕೆ ದೆಹಲಿ ತಲುಪಲಿದೆ.

ವಿಮಾನಯಾನಕ್ಕೆ ಹಸಿರು ನಿಶಾನೆ ತೋರಿದ ಬಳಿಕ ಮಾತಾಡಿದ ಪ್ರಹ್ಲಾದ್ ಜೋಶಿಯವರು, ಈ ವಿಮಾನವು ಧಾರವಾಡ ಜಿಲ್ಲೆಯ ಜನರಿಗಷ್ಟೇ ಸಹಾಯ ಮಾಡುವುದಲ್ಲದೆ, ಉತ್ತರ ಮತ್ತು ಮಧ್ಯ ಕರ್ನಾಟಕದ ಪ್ರದೇಶಗಳ ನಿವಾಸಿಗಳಿಗೂ ವರದಾನವಾಗಿದೆ ಎಂದು ಹೇಳಿದರು.

ವಿಮಾನದಲ್ಲಿ ಭಾಷಾ ಸೊಗಡು
ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಸೇವಾ ಆರಂಭವಾಯಿತು ಅನ್ನೋದು ಒಂದು ವಿಶೇಷವಾದರೆ, ಫ್ಲೈಟ್‌ ಅನೌನ್ಸ್‌ಮೆಂಟ್ ಕೂಡ ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ಆಗಿದ್ದು ಇನ್ನೊಂದ ವಿಶೇಷವಾಗಿದೆ.

ಬೈಲಹೊಂಗಲದವರಾದ ಅಕ್ಷಯ್‌ ಪಾಟೀಲ್ ನಿನ್ನೆ ಸಂಚಾರ ಆರಂಭಿಸಿದ ವಿಮಾನದ ಪೈಲೆಟ್‌ ಆಗಿದ್ದರು. ವಿಮಾನ ಸಂಚಾರ ಆರಂಭಿಸುತ್ತಿದ್ದಂತೆ ಅಕ್ಷಯ್ ಅವರು ಸ್ವಚ್ಛ ಉತ್ತರ ಕರ್ನಾಟಕ ಭಾಷೆಯಲ್ಲಿ ಎಲ್ಲಾ ಪ್ರಯಾಣಿಕರಿಗೆ ಸ್ವಾಗತ ಕೋರಿದರು.

ಜೊತೆಗೆ ಹುಬ್ಬಳ್ಳಿ-ದೆಹಲಿ ವಿಮಾನಯಾನಕ್ಕೆ ಕಾರಣರಾದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೂ ಅಭಿನಂದಿಸಿದರು. ಉಳಿಬೇಕು ನಮ್ಮ ಭಾಷಾ ಮತ್ತ ಸಂಸ್ಕೃತಿ ಅಂದ್ರ ಪಕ್ಕಾ ಆಗೇ ಆಗ್ತೈತಿ ಪ್ರಗತಿ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com