ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ: ಇದೇ 30ಕ್ಕೆ ಶ್ರೀರಂಗಪಟ್ಟಣ ಬೈಪಾಸ್ ಓಪನ್- ಪ್ರತಾಪ್ ಸಿಂಹ
ಬಹು ನಿರೀಕ್ಷಿತ ಮೈಸೂರು - ಬೆಂಗಳೂರು ಎಕ್ಸ್‌ಪ್ರೆಸ್ ವೇ ಎರಡನೇ ಹಂತದ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇದೇ ತಿಂಗಳ 30 ರಂದು ಶ್ರೀರಂಗಪಟ್ಟಣ ಬೈಪಾಸ್ ಓಪನ್ ಮಾಡಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
Published: 17th November 2022 07:10 PM | Last Updated: 17th November 2022 07:21 PM | A+A A-

ಪ್ರತಾಪ್ ಸಿಂಹ
ಮೈಸೂರು: ಬಹು ನಿರೀಕ್ಷಿತ ಮೈಸೂರು - ಬೆಂಗಳೂರು ಎಕ್ಸ್‌ಪ್ರೆಸ್ ವೇ ಎರಡನೇ ಹಂತದ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇದೇ ತಿಂಗಳ 30 ರಂದು ಶ್ರೀರಂಗಪಟ್ಟಣ ಬೈಪಾಸ್ ಓಪನ್ ಮಾಡಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಶ್ರೀರಂಗಪಟ್ಟಣ ಬೈಪಾಸ್ ನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಹಾಗೂ ಟೋಲ್ ಪ್ಲಾಜಾವನ್ನು ಅಧಿಕಾರಿಗಳೊಂದಿಗೆ ಗುರುವಾರ ಅವರು ವೀಕ್ಷಿಸಿದ್ದು, ಈ ಮಾಸಾಂತ್ಯದೊಳಗೆ ಬೈಪಾಸ್ ನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ಶ್ರೀರಂಗಪಟ್ಟಣ ಬೈಪಾಸ್ ನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಹಾಗೂ ಟೋಲ್ ಪ್ಲಾಜಾವನ್ನು ಅಧಿಕಾರಿಗಳೊಂದಿಗೆ ವೀಕ್ಷಿಸಲಾಯಿತು.
— Pratap Simha (@mepratap) November 17, 2022
ನವೆಂಬರ್ 30 ರಂದು ಶ್ರೀರಂಗಪಟ್ಟಣ ಬೈಪಾಸ್ ಅನ್ನು ಓಪನ್ ಮಾಡಲಾಗುವುದು. pic.twitter.com/ZBr7zcJ0rV
ಮೊದಲ ಹಂತದಲ್ಲಿ ಬೆಂಗಳೂರಿನಿಂದ ನಿಡುಘಟ್ಟದವರೆಗೆ 51 ಕಿ. ಮೀ. ವೇಗದ ಕಾಮಗಾರಿ ವೇಗವಾಗಿ ನಡೆದಿತ್ತು. ಸದ್ಯ ಕಾಮಗಾರಿ ಮುಗಿದರೂ ಅಲ್ಲಲ್ಲಿ ಲಿಂಕೇಜ್‌ಗಳು ಬಾಕಿ ಉಳಿದಿವೆ. ಕೆಲವು ಕಡೆ ಬೈಪಾಸ್ ನಿಂದ ಎಕ್ಸ್‌ಪ್ರೆಸ್ ಹೈವೇ ಸಂಪರ್ಕ ಕಲ್ಪಿಸುವುದು ವಿಳಂಬವಾಗಿದೆ. ಆದರೆ ವಾಹನಗಳ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ಎರಡನೇ ಹಂತದ ಕಾಮಗಾರಿ ವಿಳಂಬವಾಗಿದೆ.
ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯ ಯಲಿಯೂರು ಬಳಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ವೀಕ್ಷಿಸಲಾಯಿತು. pic.twitter.com/PNOCHUUzBb
— Pratap Simha (@mepratap) November 17, 2022