ಹಾಲು ಮತ್ತು ಮೊಸರು ದರ ಏರಿಕೆ: ಕೆಎಂಎಫ್‌ನಿಂದ ಇನ್ನೆರಡು ದಿನಗಳಲ್ಲಿ ಅಂತಿಮ ನಿರ್ಧಾರ

ಹಾಲು ಮತ್ತು ಮೊಸರು ದರ ಏರಿಕೆಯನ್ನು ನಿಗದಿಪಡಿಸಲು ಕರ್ನಾಟಕ ಹಾಲು ಮಹಾಮಂಡಳ ಕಾಲಾವಕಾಶ ಕೋರಿರುವುದರಿಂದ ಎರಡು ದಿನಗಳ ನಂತರ ಕರ್ನಾಟಕ ಸರ್ಕಾರ ಹಾಲಿನ ದರದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಹಾಲು ಮತ್ತು ಮೊಸರು ದರ ಏರಿಕೆಯನ್ನು ನಿಗದಿಪಡಿಸಲು ಕರ್ನಾಟಕ ಹಾಲು ಮಹಾಮಂಡಳ ಕಾಲಾವಕಾಶ ಕೋರಿರುವುದರಿಂದ ಎರಡು ದಿನಗಳ ನಂತರ ಕರ್ನಾಟಕ ಸರ್ಕಾರ ಹಾಲಿನ ದರದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಲೀಟರ್‌ಗೆ 3 ರೂಪಾಯಿ ಏರಿಕೆ ಮಾಡದಂತೆ ಆದರೆ ರೈತರಿಗಾಗಲಿ, ಗ್ರಾಹಕರಿಗಾಗಲಿ ನಷ್ಟ ಉಂಟು ಮಾಡಬಾರದು ಎಂದು ಕೆಎಂಎಫ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಈ ಸಂಬಂಧ ಕೆಎಂಎಫ್ ಎರಡು ದಿನಗಳ ಕಾಲಾವಕಾಶ ಕೋರಿದೆ ಎಂದರು.

ಕೆಎಂಎಫ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಬೊಮ್ಮಾಯಿ ಮಾತನಾಡಿ, 'ಇತರ ರಾಜ್ಯಗಳಲ್ಲಿ ಹಾಲು ಮತ್ತು ಮೊಸರಿನ ಬೆಲೆ ಸೇರಿದಂತೆ ಹೆಚ್ಚಿನ ವಿವರಗಳನ್ನು ಅವರಿಂದ ಕೇಳಲಾಗಿದೆ. ಕೆಎಂಎಫ್‌ನ ಉತ್ಪಾದನಾ ವೆಚ್ಚ ಮತ್ತು ಅವರು ಏಕೆ ಬೆಲೆಯನ್ನು ಹೆಚ್ಚಿಸಬೇಕೆಂದು ಕೂಡ ನಾನು ಅವರನ್ನು ಕೇಳಿದ್ದೇನೆ. ಹಾಲಿನ ಸೋರಿಕೆಯನ್ನು ಕಡಿಮೆ ಮಾಡಲು ಮತ್ತು ತಡೆಯಲು ಅವರು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿಯಲು ನಾನು ಪ್ರಯತ್ನಿಸಿದೆ' ಎಂದು ಅವರು ಹೇಳಿದರು.

ಹಾಲಿನ ದರವು ಕಾಲಕಾಲಕ್ಕೆ ಬದಲಾಗುತ್ತಲೇ ಇರುತ್ತದೆ. ಆದರೆ, ಖಾಸಗಿಯವರು ಲಾಭ ಪಡೆಯುತ್ತಾರೆ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು. ಕೆಎಂಎಫ್ ನಿರ್ಧಾರಕ್ಕೆ ಸರ್ಕಾರ ಏಕೆ ಅಡ್ಡಿಪಡಿಸುತ್ತಿದೆ ಎಂದು ಕೇಳಿದಾಗ, ಕೆಎಂಎಫ್, ನಾವು ಅವರಿಗೆ ಸಹಾಯಧನ ನೀಡುತ್ತಿದ್ದೇವೆ. ನಮ್ಮ ಕ್ಷೀರ ಭಾಗ್ಯ ಯೋಜನೆಗೂ ಹಾಲನ್ನು ಬಳಸುತ್ತಿದ್ದೇವೆ. ಇದಲ್ಲದೆ, ರೈತರು ಮತ್ತು ಗ್ರಾಹಕರ ಬಗ್ಗೆ ಯೋಚಿಸುವುದು ಸರ್ಕಾರದ ಕರ್ತವ್ಯ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com