ಗುಡ್, ಬ್ಯಾಡ್, ಅಗ್ಲಿ?: ಉತ್ತಮ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರಿಂದ ಪ್ರತಿಕ್ರಿಯೆ ಪಡೆಯಲು ಪೊಲೀಸ್ ಠಾಣೆ ಮುಂದು!

ಸಾರ್ವಜನಿಕರಲ್ಲಿ ನಂಬಿಕೆ ಹಾಗೂ ವಿಶ್ವಾಸ ಮೂಡಿಸುವ ಸಲುವಾಗಿ ಇಲ್ಲಿನ ಠಾಣೆಯೊಂದು ಠಾಣೆಗೆ ಬರುವ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದ್ದು, ಸಮಸ್ಯೆಗಳನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾರ್ವಜನಿಕರಲ್ಲಿ ನಂಬಿಕೆ ಹಾಗೂ ವಿಶ್ವಾಸ ಮೂಡಿಸುವ ಸಲುವಾಗಿ ಇಲ್ಲಿನ ಠಾಣೆಯೊಂದು ಠಾಣೆಗೆ ಬರುವ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದ್ದು, ಸಮಸ್ಯೆಗಳನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತಿದೆ.

ಬಂಡೆಪಾಳ್ಯ ಪೊಲೀಸ್ ಠಾಣೆಯು ಸಾರ್ವಜನಿಕರಿಂದ ಠಾಣೆಯ ಕುರಿತು ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದ್ದು, ಈ ಪ್ರತಿಕ್ರಿಯೆಗಳನ್ನು ತನ್ನ ವೆಬ್‌ಸೈಟ್‌ (www.darparna.net) ನಲ್ಲಿ ಪ್ರಕಟಿಸುವ ಉಪಕ್ರಮವನ್ನು ಪ್ರಾರಂಭಿಸಿದೆ.

ಈ ಉಪಕ್ರಮವು "ಪೊಲೀಸ್ ಸ್ನೇಹಿ", ಠಾಣೆಯಲ್ಲಿ ಸೌಹಾರ್ದ ವಾತಾವರಣ, ಸಮಸ್ಯೆಗಳ ತ್ವರಿತ ಪರಿಹಾರ ಮತ್ತು ಭ್ರಷ್ಟಾಚಾರವನ್ನು ತೊಡೆದುಹಾಕಲು" ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಠಾಣೆಗೆ ಸಾರ್ವಜನಿಕರು ಬಂದಾಗ ಅವರಿಗೆ ಫಾರ್ಮ್ ವೊಂದನ್ನು ನೀಡಲಾಗುತ್ತದೆ. ಈ ಫಾರ್ಮ್ ನಲ್ಲಿ ಭೇಟಿಯ ಸಮಯ, ಉದ್ದೇಶ, ಅವರ ಪ್ರಕರಣವನ್ನು ತೆಗೆದುಕೊಂಡ ಅಧಿಕಾರಿ, ನಿರ್ಧಾರ ಗಳ ನಮೂದಿಸುವಂತೆ ತಿಳಿಸಲಾಗುತ್ತದೆ. ಇದಕ್ಕೆ ಕಾಲಂಗಳೂ ಫಾರ್ಮ್ ನಲ್ಲಿ ಇರುತ್ತದೆ. ಸಾರ್ವಜನಿಕರು ಠಾಣೆ ಬಗ್ಗೆ ಅತ್ಯುತ್ತಮ, ತುಂಬಾ ಒಳ್ಳೆಯದು, ಉತ್ತಮ, ಸರಾಸರಿ ಮತ್ತು ಕಳಪೆ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿ ಪ್ರತಿಕ್ರಿಯೆಯಾಗಿ ನೀಡಬಹುದು.

www.darpana.net ನಲ್ಲಿ ಸಾರ್ವಜನಿಕರ ಪ್ರತಿಕ್ರಿಯೆಯನ್ನು ಪ್ರಕಟಿಸಲಾಗುತ್ತದೆ. ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಎಲ್‌ವೈ ರಾಜೇಶ್ ಮತ್ತು ಅವರ ತಂಡದಿಂದ ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ. ಠಾಣೆಗೆ ಭೇಟಿ ನೀಡುವ ಪ್ರತಿಯೊಬ್ಬ ದೂರುದಾರರು ಠಾಣೆಗೆ ಭೇಟಿ ನೀಡಿದ ಒಟ್ಟಾರೆ ಅನುಭವದ ಬಗ್ಗೆ ಪ್ರತಿಕ್ರಿಯೆ ನೀಡಲು ಮನವಿ ಮಾಡಿಕೊಳ್ಳಲಾಗಿದೆ ಎಂದು ವೆಬ್ ಸೈಟ್ ನಿರ್ಮಿಸಲು ಸಹಾಯ ಮಾಡಿದ ನಿರ್ವಹಣಾ ಸಲಹೆಗಾರ ದೀಪಕ್ ಕಂಚಿ ಹೇಳಿದ್ದಾರೆ.

ಈಗ ವಿಲ್ಸನ್ ಗಾರ್ಡನ್‌ನಲ್ಲಿ ಟ್ರಾಫಿಕ್ ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ಆಗಿರುವ ಸೂರ್ಯಕಾಂತ ಹಟ್ಟಿ ಅವರು ಮಾತನಾಡಿ, ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಿಶ್ವಾಸವನ್ನು ಮೂಡಿಸಲು ದರ್ಪಣವು ‘ಯು ರಿಫ್ಲೆಕ್ಟ್ ಅಸ್ ಅಂಡ್ ವಿ ರಿಫ್ಲೆಕ್ಟ್ ಯು’ ಎಂಬ ಅಡಿಬರಹವನ್ನು ಹೊಂದಿದೆ. ಈ ಉಪಕ್ರಮದಲ್ಲಿ ನಾನೂ ಭಾಗಿಯಾಗಿರುವುದು ನನಗೆ ಖುಷಿ ತಂದಿದೆ. ಈ ವರ್ಷದ ಮಾರ್ಚ್‌ನಿಂದ ಠಾಣೆಯು 270 ಕ್ಕೂ ಹೆಚ್ಚು ಜನರಿಂದ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಈ ಪರಿಕಲ್ಪನೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸಹಾಯ ಮಾಡಲಿದೆ, ಅಲ್ಲಿ ಪ್ರತಿಕ್ರಿಯೆ ನೀಡುವ ಸಾರ್ವಜನಿಕರು ತಮ್ಮ ಫೋನ್‌ಗಳಲ್ಲಿ ಸ್ವೀಕೃತಿ ಸಂದೇಶಗಳನ್ನು ಪಡೆಯುತ್ತಾರೆಂದು ಹೇಳಿದ್ದಾರೆ.

ಪ್ರತಿ 15 ದಿನಗಳಿಗೊಮ್ಮೆ ಇನ್ಸ್‌ಪೆಕ್ಟರ್ ಮತ್ತು ಹಿರಿಯ ಸಬ್ ಇನ್‌ಸ್ಪೆಕ್ಟರ್ ಪ್ರತಿಕ್ರಿಯೆಯನ್ನು ಪರಿಶೀಲಿಸುತ್ತಾರೆ ಮತ್ತು ಉತ್ತಮ ವಿಮರ್ಶೆಯನ್ನು ಪಡೆದ ಪೊಲೀಸರಿಗೆ ಮಾಸಿಕ ಠಾಣೆ ಪರೇಡ್‌ನಲ್ಲಿ ಪುರಸ್ಕರಿಸಲಾಗುತ್ತಿದೆ.

ಈ ಉಪಕ್ರಮವನ್ನು ಕೆಲವರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಉಲ್ಲೇಖಿಸಿದ ನಂತರ, ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಠಾಣೆಯ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com