ಗದಗ: ಕಾರು ತೊಳೆಯಲೆಂದು ಮಲಪ್ರಭಾ ಕಾಲುವೆಗೆ ಹೋಗಿದ್ದ ಇಬ್ಬರು ಯುವಕರು ನೀರು ಪಾಲು
ಪಟ್ಟಣದ ಯುವಕರಿಬ್ಬರು ಮಂಗಳವಾರ ಸವದತ್ತಿ ಮಾರ್ಗದಲ್ಲಿನ ಮಲಪ್ರಭಾ ಮುಖ್ಯ ಕಾಲುವೆಯಲ್ಲಿ (ನರಗುಂದ ಬ್ಲಾಕ್) ಕಾರು ತೊಳೆಯಲು ಹೋದ ಯುವಕರು ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದು, ಬುಧವಾರವಾದರೂ ಪತ್ತೆಯಾಗಿಲ್ಲ.
Published: 24th November 2022 11:47 AM | Last Updated: 24th November 2022 11:47 AM | A+A A-

ಸಾಂದರ್ಭಿಕ ಚಿತ್ರ
ನರಗುಂದ: ಪಟ್ಟಣದ ಯುವಕರಿಬ್ಬರು ಮಂಗಳವಾರ ಸವದತ್ತಿ ಮಾರ್ಗದಲ್ಲಿನ ಮಲಪ್ರಭಾ ಮುಖ್ಯ ಕಾಲುವೆಯಲ್ಲಿ (ನರಗುಂದ ಬ್ಲಾಕ್) ಕಾರು ತೊಳೆಯಲು ಹೋದ ಯುವಕರು ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದು, ಬುಧವಾರವಾದರೂ ಪತ್ತೆಯಾಗಿಲ್ಲ.
ಕಾಲುವೆ ಪಾಲಾದ ಯುವಕರು ಪಟ್ಟಣದ ಸಿದ್ದನಬಾವಿ ಓಣಿಯ ಅರುಣ ಚನ್ನಪ್ಪ ಪಡೆಸೂರ (27), ಹಾಲಬಾವಿ ಕೆರೆ ಓಣಿಯ ಹನಮಂತ ನರಸಪ್ಪ ಮಜ್ಜಗಿ (20) ಎಂದು ಗುರುತಿಸಲಾಗಿದೆ.
ಮಂಗಳವಾರ ಸಾಯಂಕಾಲ ಕಾರು ತೊಳೆಯಲು ಕಾಲುವೆಗೆ ಇಳಿದಿದ್ದರು. ನೀರು ರಭಸದಿಂದ ಹರಿಯುತ್ತಿದ್ದರಿಂದ ಕೊಚ್ಚಿಕೊಂಡು ಹೋದರು ಎಂದು ತಿಳಿದು ಬಂದಿದೆ. ತಕ್ಷಣ ಕಾಲುವೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರೂ ನೀರು ಕಡಿಮೆ ಮಾಡಲಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.
ಕಾರು ತೊಳೆಯಲು ನೀರು ತರಲೆಂದು ಇಳಿದ ವೇಳೆ ಒಬ್ಬಾತ ಜಾರಿ ಬಿದ್ದು, ಇನ್ನೊಬ್ಬ ಆತನ ರಕ್ಷಣೆಗೆಂದು ಹೋಗಿ ನೀರು ಪಾಲಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಯುವಕರ ಪತ್ತೆಗಾಗಿ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.