ಆರ್'ಎಚ್-200 ಸೌಂಡಿಂಗ್ ರಾಕೆಟ್ ಸತತ 200ನೇ ಬಾರಿ ಇಸ್ರೋದಿಂದ ಯಶಸ್ವಿ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ಥಳೀಯ ನಿರ್ಮಿತ ರೋಹಿಣಿ ಆರ್‌ಎಚ್-200 ಸೌಂಡಿಂಗ್ ರಾಕೆಟ್ ಅನ್ನು ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ಥಳೀಯ ನಿರ್ಮಿತ ರೋಹಿಣಿ ಆರ್‌ಎಚ್-200 ಸೌಂಡಿಂಗ್ ರಾಕೆಟ್ ಅನ್ನು ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಸೌಂಡಿಂಗ್ ರಾಕೆಟ್​ ಆರ್‌ಎಚ್200 ಅನ್ನು ಸತತವಾಗಿ 200ನೇ ಬಾರಿಗೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದನ್ನು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದೆ.

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಇತರರು ಈ ಕ್ಷಣಕ್ಕೆ ಸಾಕ್ಷಿಯಾದರು.

ತಿರುವನಂತಪುರಂನ ತುಂಬಾ ಈಕ್ವಟೋರಿಯಲ್ ರಾಕೆಟ್ ಉಡಾವಣಾ ಕೇಂದ್ರದಿಂದ ಆರ್'ಎಚ್ 200ರ ಯಶಸ್ವಿ ಹಾರಾಟ ನಡೆಯಿತು.

ಭಾರತೀಯ ಸೌಂಡಿಂಗ್ ರಾಕೆಟ್‌ಗಳನ್ನು ಪವನಶಾಸ್ತ್ರ, ಖಗೋಳಶಾಸ್ತ್ರ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಅಂತಹುದೇ ಶಾಖೆಗಳ ಮೇಲೆ ಪ್ರಯೋಗಗಳನ್ನು ನಡೆಸಲು ವೈಜ್ಞಾನಿಕ ಸಮುದಾಯಕ್ಕೆ ವಿಶೇಷ ಸಾಧನಗಳಾಗಿ ಬಳಸಲಾಗುತ್ತದೆ ಎಂದು ಇಸ್ರೋ ಹೇಳಿಕೆ ತಿಳಿಸಿದೆ.

ಕೇರಳ ರಾಜ್ಯಕ್ಕೆ ಎರಡು ದಿನಗಳ ಕಾಲ ಭೇಟಿ ನೀಡಿರುವ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾತನಾಡಿ, ಉಡಾವಣಾ ತಂತ್ರಜ್ಞಾನದ ವಿನ್ಯಾಸ ಮತ್ತು ಅಭಿವೃದ್ಧಿಯ ಜವಾಬ್ದಾರಿಯನ್ನು ಹೊಂದಿರುವ ಇಸ್ರೋ ಅಡಿಯಲ್ಲಿರುವ ಅತಿದೊಡ್ಡ ಕೇಂದ್ರ ತಿರುವಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್ಎಸ್ಸಿ)ಕ್ಕೆ ಇಂದು ಭೇಟಿ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ರೋಹಿಣಿ ಆರ್'ಎಚ್-200 ಸೌಂಡಿಂಗ್ ರಾಕೆಟ್‌ನ 200 ನೇ ಉಡಾವಣೆಗೆ ನಾವು ಸಾಕ್ಷಿಯಾಗಿದ್ದೇವೆಂದು ಹೇಳಿದರು.

ಆರ್'ಎಚ್-200 ಪ್ರಸ್ತುತ ಇಸ್ರೋದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಮೂರು ಸೌಡಿಂಗ್ ರಾಕೆಟ್‌ಗಳಲ್ಲಿ ಒಂದಾಗಿದೆ, ಇತರ ಎರಡು ಆರ್'ಎಚೆ-300 ಎಂಕೆ 2 ಮತ್ತು ಆರ್'ಎಚ್-560 ಎಕೆ 2 ಆಗಿದೆ.

ಈ ರಾಕೆಟ್‌ಗಳು ರೋಹಿಣಿ ಸೌಂಡಿಂಗ್ ಅಡಿಯಲ್ಲಿ ಇಸ್ರೋ ಅಭಿವೃದ್ಧಿಪಡಿಸಿದ ಸೌಂಡಿಂಗ್ ರಾಕೆಟ್‌ಗಳ ಸರಣಿಯ ಭಾಗವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com