ಬೆಲ್ಜಿಯಂ ಯುವತಿ ಕೈಹಿಡಿದ ಹಂಪಿಯ ಪ್ರವಾಸಿ ಗೈಡ್ ಅನಂತರಾಜು

ವಿಶ್ವ ಪರಂಪರೆಯ ತಾಣ ಹಂಪಿಗೂ ದೂರದ ಬೆಲ್ಜಿಯಂಗೂ ಎತ್ತಣಿಂದೆತ್ತ ಸಂಬಂಧವಯ್ಯಾ, ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುವುದು ಎನ್ನುತ್ತಾರೆ. ಬಹುಶಃ ಇಂತಹ ಮದುವೆಗಳನ್ನು ಕಂಡೇ ಮಾತು ಹುಟ್ಟುಕೊಂಡಿರಬಹುದು.
ಹಂಪಿಯ ವಿರೂಪಾಕ್ಷ ದೇವಸ್ಥಾನದಲ್ಲಿ ಅನಂತರಾಜು, ಕೆಮಿಲ್ ವಿವಾಹ
ಹಂಪಿಯ ವಿರೂಪಾಕ್ಷ ದೇವಸ್ಥಾನದಲ್ಲಿ ಅನಂತರಾಜು, ಕೆಮಿಲ್ ವಿವಾಹ

ಹೊಸಪೇಟೆ (ವಿಜಯನಗರ): ವಿಶ್ವ ಪರಂಪರೆಯ ತಾಣ ಹಂಪಿಗೂ ದೂರದ ಬೆಲ್ಜಿಯಂಗೂ ಎತ್ತಣಿಂದೆತ್ತ ಸಂಬಂಧವಯ್ಯಾ, ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುವುದು ಎನ್ನುತ್ತಾರೆ. ಬಹುಶಃ ಇಂತಹ ಮದುವೆಗಳನ್ನು ಕಂಡೇ ಮಾತು ಹುಟ್ಟುಕೊಂಡಿರಬಹುದು.

ಬೆಲ್ಜಿಯಂ ದೇಶದ ಕೆಮಿಲ್‌ ಹಾಗೂ ಪ್ರವಾಸಿ ಮಾರ್ಗದರ್ಶಿ (Tourist guide) ಅನಂತರಾಜು ಅವರ ಮದುವೆ ಇಲ್ಲಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಹಿಂದೂ ಸಂಪ್ರದಾಯದಂತೆ ನೆರವೇರಿತು. ಇಂದು ಶುಕ್ರವಾರ ಬೆಳಗ್ಗೆ ಕುಂಭ ಲಗ್ನದಲ್ಲಿ ಇಬ್ಬರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದರು.

<strong>ಲಗ್ನಪತ್ರಿಕೆ</strong>
ಲಗ್ನಪತ್ರಿಕೆ

ವಿದೇಶಿ ಯುವತಿಯೊಂದಿಗೆ ಹಂಪಿಯ ಜನತಾ ಕಾಲೊನಿಯ ಯುವಕ ವಿವಾಹವಾಗಿದ್ದನ್ನು ಪ್ರವಾಸಿಗರು ಕುತೂಹಲದಿಂದ ನೋಡಿ ಕಣ್ತುಂಬಿಕೊಂಡರು.

ಸಂಬಂಧ ಬೆಳೆದದ್ದು ಹೇಗೆ?: ಕರ್ನಾಟಕದ ಪ್ರಸಿದ್ಧ ಪ್ರವಾಸಿ ಸ್ಥಳ ವಿಶ್ವವಿಖ್ಯಾತ ಹಂಪಿಯ ಗತವೈಭವ ನೋಡಲು ಮೂರು ವರ್ಷಗಳ ಹಿಂದೆ ಬೆಲ್ಜಿಯಂ ದೇಶದಿಂದ ಮರಿಯನ್ನೇ ಜೀಮ್ ಫಿಲಿಪ್ಪೆ ಅವರ ಕುಟುಂಬ ಬಂದಿತ್ತು. ಆಟೋ ಚಾಲಕ ಅನಂತರಾಜುವಿನ ಪರಿಚಯವಾಗಿತ್ತು. ಅನಂತರಾಜು ಪ್ರಾಮಾಣಿಕ ಆಟೋ ಚಾಲಕ ಎನ್ನುವುದರೊಂದಿಗೆ ಉತ್ತಮ ಮಾರ್ಗದರ್ಶಕ ಆಗಿಯೂ ಅವರ ಮನಗೆದ್ದಿದ್ದರು.

ಇದೇ ವೇಳೆ ಮರಿಯನ್ನೇ ಜೀಮ್ ಫಿಲಿಪ್ಪೆ ಅವರ ಮೂರನೇ ಮಗಳು ಕೆಮಿಲ್ ಹಂಪಿಯ ನಿಸರ್ಗದ ಸೊಬಗಿಗೆ ಮನಸೋತಿದ್ದರು. ಜೊತೆಗೆ ಅನಂತರಜು ಕೆಮಿಲ್ ಅವರ ಪರಿವಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.ಈ ಮಧ್ಯೆ ಪ್ರವಾಸಿ ಮಾರ್ಗದರ್ಶಕ ಅನಂತರಾಜು ಅವರ ಮೇಲೆ ಯುವತಿ ಕೆಮಿಲ್ಗೆ ಪ್ರೇಮ ಅರಳಿತ್ತು. ಇಬ್ಬರೂ ಮದುವೆಯಾಗುವುದಾಗಿ ನಿರ್ಧಾರವಾಗಿ ಇಬ್ಬರು ಕುಟುಂಬಸ್ಥರೂ ಒಪ್ಪಿದ್ದರು.

<strong>ನಿಶ್ಚಿತಾರ್ಥ ಫೋಟೋ</strong>
ನಿಶ್ಚಿತಾರ್ಥ ಫೋಟೋ

ನಂತರ ಕೋವಿಡ್ ಬಂದು ಮದುವೆ ಮುಂದೂಡಲ್ಪಟ್ಟಿತ್ತು. ಕೆಮಿಲ್ ಕುಟುಂಬದವರಿಗೆ ಮಗಳ ವಿವಾಹನ್ನು ಬೆಲ್ಜಿಯಂ ದೇಶದಲ್ಲೇ ಅದ್ದೂರಿ ವೈಭವದೊಂದಿಗೆ ಮಾಡಬೇಕೆಂಬ ಮನಸ್ಸಿದ್ದರೂ, ಹಿಂದೂ ಸಂಪ್ರದಾಯದಂತೆ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳಬೇಕೆಂಬ ಯುವಕನ ಆಸೆಗೆ ಸಹಮತ ಸೂಚಿಸಿದರು.ಅದರಂತೆ ನಿನ್ನೆ ಕೆಮಿಲ್ ಕುಟುಂಬದ 50ಕ್ಕೂ ಹೆಚ್ಚು ಸದಸ್ಯರು ಹಂಪಿಗೆ ಆಗಮಿಸಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡು ಇಂದು ಬೆಳಗ್ಗೆ ವಿವಾಹವಾಗಿ ಸಪ್ತಪದಿ ತುಳಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com