ವಿಜ್ಞಾನ ಆಧ್ಯಾತ್ಮಿಕತೆಗೆ ಪೂರಕವಾಗಿದೆ: ಸಿಎಂ ಬೊಮ್ಮಾಯಿ

ವಿಜ್ಞಾನ ಮತ್ತು ಅಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದರು.
ಗುರುವಾರ ನಡೆದ ಬಿಜಿಎಸ್ ಸಂಸ್ಥಾಪಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್ ಅಶೋಕ, ಎಸ್ ಟಿ ಸೋಮಶೇಖರ್, ಶ್ರೀ ನಿರ್ಮಲಾನಂದನಾಥ ಸ್ವಾಮಿ.
ಗುರುವಾರ ನಡೆದ ಬಿಜಿಎಸ್ ಸಂಸ್ಥಾಪಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್ ಅಶೋಕ, ಎಸ್ ಟಿ ಸೋಮಶೇಖರ್, ಶ್ರೀ ನಿರ್ಮಲಾನಂದನಾಥ ಸ್ವಾಮಿ.

ಬೆಂಗಳೂರು: ವಿಜ್ಞಾನ ಮತ್ತು ಅಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದರು.

14ನೇ ಬಿಜಿಎಸ್ ಸಂಸ್ಥಾಪಕರ ದಿನಾಚರಣೆ ಹಾಗೂ ಬಿಜಿಎಸ್ ಉತ್ಸವ 2022ರಲ್ಲಿ ಬಿಜಿಎಸ್‌ಜಿಐಎಂಎಸ್ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ವಿದ್ಯಾರ್ಥಿಗಳು ತಾರ್ಕಿಕವಾಗಿ ಯೋಚಿಸುವಂತೆ ಸಲಹೆ ನೀಡಿದರು.

ಇದು ಯಶಸ್ಸಿನ ಮೆಟ್ಟಿಲಾಗಿದೆ. ಯುವ ವಿದ್ಯಾರ್ಥಿಗಳು ಜಾಗರೂಕರಾಗಿರಬೇಕು. ಕಾಲೇಜು ದಿನಗಳು ನಿಮ್ಮಲ್ಲಿ ಶಕ್ತಿ, ಗುರಿ, ಕನಸುಗಳು ಮತ್ತು ಈ ಗುರಿಗಳನ್ನು ಸಾಧಿಸುವ ಬಯಕೆಯನ್ನು ಹೊಂದಿರುವ ಸುವರ್ಣ ಸಮಯ ಎಂದು ಹೇಳಿದರು.

“ಬಿಜಿಎಸ್‌ನಲ್ಲಿ ಆಧ್ಯಾತ್ಮಿಕತೆಯನ್ನು ಬೋಧಿಸುವುದರ ಜೊತೆಗೆ ವಿಜ್ಞಾನವನ್ನು ಕೂಡ ಕಲಿಸಲಾಗುತ್ತದೆ. ಏಕೆಂದರೆ ಇವೆರಡೂ ಒಂದು ನಾಣ್ಯದ ಎರಡು ಮುಖಗಳಾಗಿವೆ. ಸುಧಾರಿತ ಬದುಕಿಗೆ ವಿಜ್ಞಾನ ಮತ್ತು ಅಧ್ಯಾತ್ಮ ಅಗತ್ಯ ಎಂದು ತಿಳಿಸಿದರು.

ಸಚಿವರಾದ ಆರ್.ಅಶೋಕ, ಎಸ್.ಟಿ.ಸೋಮಶೇಖರ್, ಮಂಡ್ಯದ ಮಾಜಿ ಸಂಸದೆ ರಮ್ಯಾ ಕೂಡ ಉದ್ಘಾಟನೆ ವೇಳೆ ಉಪಸ್ಥಿತರಿದ್ದರು.

ಶುಕ್ರವಾರದವರೆಗೆ ಬಿಜಿಎಸ್ ಉತ್ಸವ ಆಚರಣೆ ನಡೆಯಲಿದ್ದು, ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್, ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮತ್ತು ಆರೋಗ್ಯ ಸಚಿವ ಕೆ.ಸುಧಾಕರ್ ಉಪಸ್ಥಿತರಿರಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com