ಕಾಂಗ್ರೆಸ್ ನಾಯಕನ ಹುಟ್ಟುಹಬ್ಬದಲ್ಲಿ ನಂಗಾನಾಚ್: ಡ್ಯಾನ್ಸರ್ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದ ಯುವಕನಿಂದ ಚೂರಿ ಇರಿತ!
ನಗರಸಭೆ ಕಾಂಗ್ರೆಸ್ ಸದಸ್ಯ ದೌಲತ್ ಶರೀಷ್ ಹುಟ್ಟುಹಬ್ಬದ ಪ್ರಯುಕ್ತ ನಂಗಾನಾಚ್ ಕಾರ್ಯಕ್ರಮದಲ್ಲಿ ನಂಗನಾಚ್ ಆಯೋಜಿಸಲಾಗಿತ್ತು. ಈ ವೇಳೆ ಡ್ಯಾನ್ಸರ್ ಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ ಯುವಕನಿಗೆ ಚೂರಿ ಇರಿದಿರುವ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Published: 27th November 2022 04:32 PM | Last Updated: 27th November 2022 04:32 PM | A+A A-

ಡ್ಯಾನ್ಸ್ ಫೋಟೋಗಳು
ರಾಮನಗರ: ನಗರಸಭೆ ಕಾಂಗ್ರೆಸ್ ಸದಸ್ಯ ದೌಲತ್ ಶರೀಷ್ ಹುಟ್ಟುಹಬ್ಬದ ಪ್ರಯುಕ್ತ ನಂಗಾನಾಚ್ ಕಾರ್ಯಕ್ರಮದಲ್ಲಿ ನಂಗನಾಚ್ ಆಯೋಜಿಸಲಾಗಿತ್ತು. ಈ ವೇಳೆ ಡ್ಯಾನ್ಸರ್ ಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ ಯುವಕನಿಗೆ ಚೂರಿ ಇರಿದಿರುವ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ನವೆಂಬರ್ 27ರಂದು ದೌಲತ್ ಶರೀಷ್ ಹುಟ್ಟುಹಬ್ಬದ ಪ್ರಯುಕ್ತ ನಂಗಾನಾಚ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಡ್ಯಾನ್ಸರ್ ಗಳ ಜತೆ ರುಮಾನ್ ಎಂಬಾತ ಅಭಸ್ಯವಾಗಿ ವರ್ತಿಸಿದ್ದನು. ಇದನ್ನು ನೋಡಿದ ಮುಫಾ ಎಂಬಾತ ಆತನಿಗೆ ಸುಮ್ಮನಿರುವಂತೆ ಪ್ರಶ್ನಿಸಿದನು.
ಇದರಿಂದ ಕೆರಳಿದ ರುಮಾನ್ ಆತನಿಗೆ ಚೂರಿ ಇರಿದಿದ್ದನು. ಗಾಯಾಳು ಮುಫಾಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ರಾಮನಗರ ಟೌನ್ ಪೊಲೀಸರು ಆರೋಪಿ ರುಮಾನ್ ನನ್ನು ಬಂಧಿಸಿದ್ದಾರೆ.
ಯಾರಬ್ ನಗರದಲ್ಲಿರುವ ಕಲ್ಯಾಣ ಮಂಟಪದಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಇಲ್ಲಿ ಬೆಂಗಳೂರಿನಿಂದ ಡ್ಯಾನ್ಸರ್ ಗಳನ್ನು ಕರೆಸಿ ಅವರಿಂದ ಅರೆಬೆತ್ತಲೆಯಾಗಿ ಡ್ಯಾನ್ಸ್ ಮಾಡಿಸಿದ್ದರು. ಅಲ್ಲದೆ ಡ್ಯಾನ್ಸರ್ ಗಳ ಮೇಲೆ ನೋಟುಗಳನ್ನು ಎಸೆಯಲಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.