ರಾಜ್ಯದಲ್ಲಿ ಅತಿವೃಷ್ಟಿಯಿಂದ ಸಂಕಷ್ಟ: ರಾಬಿ ಬೆಳೆಗಳ ಬಿತ್ತನೆಗೆ ಭಾರೀ ಹೊಡೆತ

ಈ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಎದುರಾದ ಅತಿವೃಷ್ಟಿಯು ರಾಜ್ಯದ ಹಲವೆಡೆ ರಾಬಿ ಬೆಳೆಗಳ ಬಿತ್ತನೆಗೆ ಭಾರೀ ಹೊಡೆತವನ್ನು ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಈ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಎದುರಾದ ಅತಿವೃಷ್ಟಿಯು ರಾಜ್ಯದ ಹಲವೆಡೆ ರಾಬಿ ಬೆಳೆಗಳ ಬಿತ್ತನೆಗೆ ಭಾರೀ ಹೊಡೆತವನ್ನು ನೀಡಿದೆ.

ರಾಬಿ ಬೆಳೆಗಳನ್ನು ಚಳಿಗಾಲದ ಬೆಳೆಗಳು ಎಂದೂ ಕರೆಯಲಾಗುತ್ತದೆ, ಇವು ಕೃಷಿ ಬೆಳೆಗಳಾಗಿವೆ, ಇದನ್ನು ಚಳಿಗಾಲದಲ್ಲಿ ಬಿತ್ತಲಾಗುತ್ತದೆ ಮತ್ತು ಭಾರತದಲ್ಲಿ ವಸಂತಕಾಲದಲ್ಲಿ ಕೊಯ್ಲು ಮಾಡಲಾಗುತ್ತದೆ. ಇಂದಿನವರೆಗೆ, ಕರ್ನಾಟಕದಲ್ಲಿ ಒಟ್ಟು ಗುರಿಯ ಶೇ.74 ರಷ್ಟು ಪ್ರದೇಶದಲ್ಲಿ ಈ ಬೆಳೆಗಳನ್ನು ಬಿತ್ತನೆ ಮಾಡಲಾಗಿದ್ದು, ಅತಿವೃಷ್ಟಿಯು ಈ ಬೆಳೆಗಳ ಇಳುವರಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ರಾಜ್ಯದ ಎಲ್ಲ ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು, ರಾಜ್ಯ ಕೃಷಿ ಇಲಾಖೆಯು 26.68 ಲಕ್ಷ ಹೆಕ್ಟೇರ್‌ನಲ್ಲಿ ರಾಬಿ ಬೆಳೆ ಬಿತ್ತನೆ ಗುರಿ ಹೊಂದಿದೆ. ಈಗಾಗಲೇ ಶೇ.74 ರಷ್ಟು ಬಿತ್ತನೆಯಾಗಿದೆ. ಹೆಚ್ಚಿನ ಮಳೆಯು ಈ ಋತುವಿನ ಬೆಳೆಗಳ ಬಿತ್ತನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಅಂಕಿಅಂಶಗಳ ಪ್ರಕಾರ, ಈ ವರ್ಷದ ಮಾನ್ಸೂನ್ (ಜೂನ್ ನಿಂದ ಸೆಪ್ಟೆಂಬರ್) ಅವಧಿಯಲ್ಲಿ ರಾಜ್ಯದ ಒಟ್ಟು 31 ಜಿಲ್ಲೆಗಳ ಪೈಕಿ 20 ಜಿಲ್ಲೆಗಳು ಅತೀ ಹೆಚ್ಚು ಮಳೆಯನ್ನು ಕಂಡಿದೆ ಎಂದು ತಿಳಿದುಬಂದಿದೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಕೆಎಸ್‌ಡಿಎಂಎ) ಹಿರಿಯ ಸಲಹೆಗಾರ ಜಿ ಎಸ್ ಶ್ರೀನಿವಾಸ ರೆಡ್ಡಿ ಮಾತನಾಡಿ, ಈ ವರ್ಷ ಪರಿಸ್ಥಿತಿ ವಿಚಿತ್ರವಾಗಿದೆ. ಭಾರೀ ಮಳೆಯಿಂದಾಗಿ ಮಣ್ಣಿನಲ್ಲಿ ಹೆಚ್ಚಿನ ತೇವಾಂಶವಿದ್ದು, ಭೂಮಿ ಒಣಗಿಲ್ಲ. ರಾಬಿ ಋತುವಿನಲ್ಲಿ, ಜೋಳ, ಗೋಧಿ, ಕಡಲೆಕಾಳು ಮತ್ತು ಉದ್ದಿನಬೇಳೆ ಇತರವುಗಳನ್ನು ಬಿತ್ತಲಾಗುತ್ತದೆ. “ಸೆಪ್ಟೆಂಬರ್‌ನಲ್ಲಿ ಬಿತ್ತನೆ ಮಾಡಿದ್ದರೆ, ಪ್ರತಿ ಬೆಳೆಗೆ ಅನುಗುಣವಾಗಿ ಜನವರಿಯಿಂದ ಮಾರ್ಚ್‌ವರೆಗೆ ಕಟಾವು ಮಾಡಬಹುದು. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಮಳೆಯು ಸಸ್ಯವರ್ಗವನ್ನು ಮತ್ತಷ್ಟು ಬೆಳೆಯಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com