ಬೆಂಗಳೂರು: ಕಬ್ಬಿಣದ ಪೆಟ್ಟಿಗೆಗಳಲ್ಲಿ ಬಚ್ಚಿಟ್ಟಿದ್ದ ಕೋಟ್ಯಾಂತರ ಮೌಲ್ಯದ ಚಿನ್ನ ವಶಕ್ಕೆ!

ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಮಂಗಳವಾರ ಚೆಕ್-ಇನ್ ಲಗೇಜ್‌ನಲ್ಲಿ ಎರಡು ಎಲೆಕ್ಟ್ರಿಕ್ ಐರನ್ ಬಾಕ್ಸ್‌ಗಳಲ್ಲಿ ಬಚ್ಚಿಟ್ಟು ಕಳ್ಳಸಾಗಣೆ ಮಾಡಲಾಗುತ್ತಿದ್ದ ಸುಮಾರು 3 ಕೆಜಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಮಂಗಳವಾರ ಚೆಕ್-ಇನ್ ಲಗೇಜ್‌ನಲ್ಲಿ ಎರಡು ಎಲೆಕ್ಟ್ರಿಕ್ ಐರನ್ ಬಾಕ್ಸ್‌ಗಳಲ್ಲಿ ಬಚ್ಚಿಟ್ಟು ಕಳ್ಳಸಾಗಣೆ ಮಾಡಲಾಗುತ್ತಿದ್ದ ಸುಮಾರು 3 ಕೆಜಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

22 ವರ್ಷದ ಯುವಕನೊಬ್ಬ ರೂ.1.62 ಕೋಟಿ ಮೌಲ್ಯದ ಚಿನ್ನವನ್ನು ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ವಿಶ್ವದ ಅತಿದೊಡ್ಡ ಪ್ರಯಾಣಿಕ ವಿಮಾನವಾದ ಏರ್‌ಬಸ್ ಎ 380 ನಲ್ಲಿ ಇಂತಹ ಬೆಳವಣಿಗೆ ಕಂಡುಬಂದಿರುವುದು ಇದೇ ಮೊದಲು.

ಇಕೆ-568 ವಿಮಾನವು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು 2.30ಕ್ಕೆ ತಲುಪಿತ್ತು.“ಬಾಕ್ಸ್‌ಗಳ ಸೋಪ್ಲೇಟ್‌ನಲ್ಲಿ (ಬಟ್ಟೆ ಒತ್ತಲು ಬಳಸುವ ಉಕ್ಕಿನ ಭಾಗ) ಚಿನ್ನವನ್ನು ಬಚ್ಚಿಡಲಾಗಿತ್ತು. ಅದನ್ನು ಕರಗಿಸಿ ಅದರ ಮೇಲೆ ಪೇಸ್ಟ್ ಅನ್ನು ಹಾಕಲಾಗಿತ್ತು, ಇದರಿಂದ ಚಿನ್ನವನ್ನು ಸುಲಭವಾಗಿ ಬಚ್ಚಿಡಬಹುದಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಎಕ್ಸ್-ರೇ ಸ್ಕ್ಯಾನರ್ ಮೂಲಕ ಬ್ಯಾಗ್ ಅನ್ನು ಪರಿಶೀಲಿಸಿದಾಗ, ಸೌಮ್ಯವಾದ ಕಪ್ಪು ಕಲೆಯೊಂದು ಕಂಡು ಬಂದಿತ್ತು.

“ಅನುಮಾನದ ಆಧಾರದ ಮೇಲೆ, ಅದನ್ನು ಅತ್ಯಾಧುನಿಕ ಸ್ಕ್ಯಾನರ್ ಮೂಲಕ ತಪಾಸಣೆ ನಡೆಸಲಾಯಿತು. ಈ ವೇಳೆ ವಸ್ತುಗಳಿರುವುದು ದೃಢವಾಗಿತ್ತು, ಬಳಿಕ ಕಬ್ಬಿಣದ ಪೆಟ್ಟಿಗೆಗಳನ್ನು ಒಡೆದು ಚಿನ್ನವನ್ನು ವಶಪಡಿಸಿಕೊಳ್ಳಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com