ಎಸ್‌ಸಿ/ಎಸ್‌ಟಿ ಕೋಟಾ: ಬಿಜೆಪಿ ದಾಳ; ಇಕ್ಕಟ್ಟಿಗೆ ಸಿಲುಕಿದ ಕರ್ನಾಟಕ ಕಾಂಗ್ರೆಸ್

ರಾಜ್ಯದಲ್ಲಿ ಐದನೇ ಒಂದರಷ್ಟು ಜನಸಂಖ್ಯೆಯನ್ನು ಹೊಂದಿರುವ ಕೆಳ ಸಮುದಾಯಗಳನ್ನು ಒಲಿಸಿಕೊಳ್ಳಲು ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ ಒಂದು ವಾರ ಮುಂಚಿತವಾಗಿ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಎಸ್‌ಸಿ/ಎಸ್‌ಟಿ ಬೃಹತ್ ಸಮಾವೇಶವನ್ನು ಆಯೋಜಿಸುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಐದನೇ ಒಂದರಷ್ಟು ಜನಸಂಖ್ಯೆಯನ್ನು ಹೊಂದಿರುವ ಕೆಳ ಸಮುದಾಯಗಳನ್ನು ಒಲಿಸಿಕೊಳ್ಳಲು ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ ಒಂದು ವಾರ ಮುಂಚಿತವಾಗಿ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಎಸ್‌ಸಿ/ಎಸ್‌ಟಿ ಬೃಹತ್ ಸಮಾವೇಶವನ್ನು ಆಯೋಜಿಸುತ್ತಿದೆ. 

ರಾಜ್ಯ ವಿಧಾನಸಭೆಯು 51 ಎಸ್‌ಸಿ/ಎಸ್‌ಟಿ ಸದಸ್ಯರನ್ನು ಹೊಂದಿದೆ ಮತ್ತು ಅವರಲ್ಲಿ 18 ಮಂದಿ ಕಾಂಗ್ರೆಸ್‌ನವರು. ವಿರೋಧ ಪಕ್ಷವು ಸಾಂಪ್ರದಾಯಿಕವಾಗಿ ಈ ಸಮುದಾಯಗಳ ಬೆಂಬಲವನ್ನು ಪಡೆಯುತ್ತಿದೆ. ಆದರೆ ಈ ಬಾರಿ ಬಿಜೆಪಿ ಸರ್ಕಾರವು 2023ರ ವಿಧಾನಸಭೆ ಚುನಾವಣೆಗೂ ಮುನ್ನ ಸಮುದಾಯಗಳ ಬೆಂಬಲ ಪಡೆಯಲು ಇತ್ತೀಚೆಗಷ್ಟೇ ಮೀಸಲಾತಿಯನ್ನು ಶೇ.6ರಷ್ಟು ಹೆಚ್ಚಿಸಿರುವುದರಿಂದ ಮತ ಬ್ಯಾಂಕ್ ಸಮೀಕರಣದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಆದರೆ ನಾಗಮೋಹನ್ ದಾಸ್ ಸಮಿತಿ ರಚಿಸಿ ಅದರ ವರದಿಯನ್ನೂ ಪಡೆದ ಸಿದ್ದರಾಮಯ್ಯ ಸರ್ಕಾರವೇ ಮೀಸಲಾತಿ ಹೆಚ್ಚಳ ಪ್ರಕ್ರಿಯೆ ಆರಂಭಿಸಿತ್ತು ಎಂದು ಕಾಂಗ್ರೆಸ್ ಪ್ರತಿಪಾದಿಸುತ್ತಿದೆ. ಈಗ ಅಧಿಕಾರದಲ್ಲಿರುವುದರಿಂದಲೇ ಬಿಜೆಪಿ ತನ್ನಗೇ ಈ ಕ್ರೆಡಿಟ್ ಎಂದು ಹೇಳಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಕಾಂಗ್ರೆಸ್‌ಗೆ ಎಸ್‌ಸಿ/ಎಸ್‌ಟಿ ಬೆಂಬಲ ಪಡೆಯುವತ್ತ ಗಮನಹರಿಸಿರುವ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು, “ನಾವು ಬಜೆಟ್‌ನಲ್ಲಿ ಶೇ.24 ರಷ್ಟು ಎಸ್‌ಸಿ/ಎಸ್‌ಟಿಗಳಿಗೆ ಹಂಚಿಕೆ ಮಾಡಿದ್ದೇವೆ. ಮೀಸಲಾತಿಯಲ್ಲಿನ ಈ ಹೆಚ್ಚಳವು ಅದರ ಫಲಶೃತಿಯಾಗಿದೆ ಎಂದು ಹೇಳಿದ್ದಾರೆ.

ಇನ್ನು ಈ ಮೀಸಲಾತಿ ಹೆಚ್ಚಳ ಮಾತ್ರವಲ್ಲದೇ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂ ಮಾಡುವ ಬಿಜೆಪಿ ಸರ್ಕಾರದ ನಿರ್ಧಾರವು ಪಕ್ಷಕ್ಕೆ ಸಹಾಯ ಮಾಡಬಹುದು. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಮಹತ್ವದ, ಮುಚ್ಚಿದ ಬಾಗಿಲಿನ ಸಭೆಯನ್ನು ನಡೆಸಿತು, ಅಲ್ಲಿ ಅವರು ಬಿಜೆಪಿಯನ್ನು ಕ್ಷೇತ್ರವಾರು ಮತ್ತು ವಿಷಯವಾರು ಎದುರಿಸಲು ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಯಿತು.

ಬಿಜೆಪಿಯಿಂದ, 15 ವರ್ಷಗಳಿಂದ ಕಾಂಗ್ರೆಸ್‌ನೊಂದಿಗೆ ಕಳೆದ ಚಲುವಾದಿ ನಾರಾಯಣಸ್ವಾಮಿ ಅವರು ಸಮುದಾಯಗಳಿಗೆ ತಂತ್ರವನ್ನು ರೂಪಿಸುತ್ತಿದ್ದಾರೆ. ಜೆಡಿಎಸ್ ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡು ಹೆಚ್ಚಿನ ಮತಗಳನ್ನು ಗಳಿಸಿದ್ದರಿಂದ ಕೆಲವು ಎಸ್‌ಸಿ/ಎಸ್‌ಟಿ ಸ್ಥಾನಗಳನ್ನು ಕಳೆದುಕೊಂಡಿರುವುದು ಕಾಂಗ್ರೆಸ್‌ಗೂ ತಿಳಿದಿದೆ. ಎಸ್‌ಸಿ ಕಾಂಗ್ರೆಸ್‌ನ ಧೀಮಂತ ನಾಯಕ ಎಚ್‌ಸಿ ಮಹದೇವಪ್ಪ ಕೂಡ ಟಿ ನರಸೀಪುರದಲ್ಲಿ ಜೆಡಿಎಸ್‌ನ ಅಶ್ವಿನ್‌ಕುಮಾರ್ ವಿರುದ್ಧ 45,000 ಮತಗಳ ಅಂತರದಿಂದ ಸೋತಿದ್ದಾರೆ.

ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯಲ್ಲಿ ದಲಿತ ಮಹಿಳೆಯೊಬ್ಬರು ನೀರು ಸೇವನೆ ಮಾಡಿದ ಕಾರಣಕ್ಕೆ ಮಿನಿ ಟ್ಯಾಂಕ್‌ ತೊಳೆದ ಘಟನೆ ಹಾಗೂ ವಿವಾದಿತ ದೇವಸ್ಥಾನ ಪ್ರವೇಶದಂತಹ ದಲಿತರ ಮೇಲಿನ ದೌರ್ಜನ್ಯವನ್ನು ಎತ್ತಿ ತೋರಿಸಲು ಕಾಂಗ್ರೆಸ್‌ ಪಕ್ಷವು ಹಲವು ಸಮಸ್ಯೆಗಳನ್ನು ಹುಡುಕುತ್ತಿದೆ.

ಈ ಬಗ್ಗೆ ಬ್ರಾಂಡ್ ಗುರು ಹರೀಶ್ ಬಿಜೂರ್ ಮಾತನಾಡಿ, ಎಸ್‌ಸಿ/ಎಸ್‌ಟಿಗಳು 19-23 ಪ್ರತಿಶತ ಮತದಾರರನ್ನು ಪ್ರತಿನಿಧಿಸುವುದರಿಂದ ಮತಗಳು ಮತ್ತು ಭಾವನೆಗಳ ಬೃಹತ್ ಅಂಶವನ್ನು ಪ್ರತಿನಿಧಿಸುತ್ತವೆ. ಒಂದು ಕಾಲದಲ್ಲಿ ಇದು ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿತ್ತು. ಇನ್ನು ಮುಂದೆ ಇಲ್ಲ. ಬೊಮ್ಮಾಯಿ ಸರ್ಕಾರ ಮೀಸಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಂಡಿದೆ. ಈ ಭಾಗವು ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಛಿದ್ರವಾಗಿದೆ ಎಂದು ನಾನು ನಂಬುತ್ತೇನೆ. ಅದಾಗ್ಯೂ ಅಂತಿಮವಾಗಿ ಇದು ಪ್ರತಿಯೊಂದು ಪಕ್ಷಗಳ ತಳಮಟ್ಟದ ಸಂವಹನದ ಬಗ್ಗೆಯಾಗಿರುತ್ತದೆ. ಯಾರು ಉತ್ತಮವಾಗಿ ಸಂವಹನ ನಡೆಸುತ್ತಾರೋ ಅವರು ಈ ಮತದಾರರ ಪ್ರೀತಿಯನ್ನು ಗೆಲ್ಲುತ್ತಾರೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com