ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಂತೆ ನಾಡಗೀತೆ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಂತೆ ನಾಡಗೀತೆ "ಜಯಭಾರತ ಜನನಿಯ ತನುಜಾತೆ" ಹಾಡಲು ಹೊರಡಿಸಿದ ಆದೇಶದ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. 
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಂತೆ ನಾಡಗೀತೆ "ಜಯಭಾರತ ಜನನಿಯ ತನುಜಾತೆ" ಹಾಡಲು ಹೊರಡಿಸಿದ ಆದೇಶದ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. 

ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ ನಾಡಗೀತೆ ಹಾಡುವ ಸಂಬಂಧ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠವು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ನೋಟಿಸ್ ಜಾರಿಗೆ ಆದೇಶಿಸಿತು. 

2004 ರಲ್ಲಿ ಆದೇಶವೊಂದರ ಸಂಪೂರ್ಣ ಪದ್ಯವನ್ನು ನಾಡಗೀತೆಯಾಗಿ ಹಾಡಲು ಘೋಷಿಸಿದ ನಂತರ ಇಡೀ ರಾಜ್ಯವು ಸಿ ಅಶ್ವಥ್ ರಾಗ ಸಂಯೋಜಿಸಿ ಹಾಡಿರುವ ನಾಡಗೀತೆಯನ್ನು ಕೇಳಿದೆ. ಆದಾಗ್ಯೂ, ವಸಂತ ಕನಕಪುರ ಮತ್ತು ಡಾ.ಚನ್ನವೀರ ಕಣವಿ ನೇತೃತ್ವದ ಎರಡೂ ಸಮಿತಿಗಳು ಅಶ್ವಥ್ ಸಂಯೋಜಿಸಿರುವ ರಾಗವನ್ನು ಮುಂದುವರಿಸಲು ಶಿಫಾರಸು ಮಾಡಿದೆ. ಗಾಯಕ ವಿದ್ವಾನ್ ಎಚ್ ಆರ್ ಲೀಲಾವತಿ ನೇತೃತ್ವದ ಸಮಿತಿಯು 2021 ರಲ್ಲಿ ಮೈಸೂರು ಅನಂತಸ್ವಾಮಿ ಸಂಯೋಜಿಸಿರುವ ಧಾಟಿಯಲ್ಲಿ ಹಾಡಲು ಶಿಫಾರಸು ಮಾಡಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. 

ಅನಂತಸ್ವಾಮಿ ಸಂಪೂರ್ಣ ರಾಗ ಸಂಯೋಜನೆ ಮಾಡಿಲ್ಲದ ಬಗ್ಗೆ ಗಮನಕ್ಕೆ ತರಲು ಮುಖ್ಯ ಕಾರ್ಯದರ್ಶಿ ಮತ್ತು ಇತರರಿಗೆ ಮನವಿ ಸಲ್ಲಿಸಲಾಯಿತು, ಅದನ್ನು ಪರಿಗಣಿಸದೆ 2022 ಸೆಪ್ಟೆಂಬರ್ 25 ರಂದು ತಡೆ ಹಿಡಿದಿದ್ದ ಆದೇಶವನ್ನು ಹೊರಡಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಅನಂತಸ್ವಾಮಿ ಅವರ ಸಂಯೋಜನೆಯಲ್ಲಿ ಪೂರ್ಣ ಪ್ರಮಾಣದ ನಾಡಗೀತೆ ಇಲ್ಲದಿರುವುದರಿಂದ ಸರ್ಕಾರವು ಮೂರನೇ ವ್ಯಕ್ತಿಯಿಂದ ಇನ್ನೊಂದು ರಾಗವನ್ನು ರಚಿಸಬೇಕಾಗಿರುವುದರಿಂದ ಆಕ್ಷೇಪಾರ್ಹ ಆದೇಶವನ್ನು ಕಾರ್ಯಗತಗೊಳಿಸಲು ಅಸಾಧ್ಯವಾಗಿದೆ ಎಂದು ಹೇಳಲಾಗಿದೆ. ಹೀಗಿರುವಾಗ ಇದು ಅನಂತಸ್ವಾಮಿ ಹಾಗೂ ನಾಡಗೀತೆಗೆ ಅಗೌರವ ತೋರಿದಂತಾಗುತ್ತದೆ ಎಂದು ಅರ್ಜಿದಾರರು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com