ಭಾರತ್ ಜೋಡೋ ಯಾತ್ರೆ ಬಗ್ಗೆ ನಾಡಿದ್ದು 6ನೇ ತಾರೀಖು ಮಾತನಾಡುತ್ತೇನೆ, ಇವತ್ತು ಬೇಡ: ಸಿಎಂ ಬೊಮ್ಮಾಯಿ

ದಸರಾ ನಾಡಹಬ್ಬವಾಗಿ ನಾವೆಲ್ಲರೂ ಆಚರಿಸುತ್ತಿದ್ದೇವೆ. ದುಷ್ಟ ಶಕ್ತಿ ನಿಗ್ರಹವಾಗಿ ಶಿಷ್ಟರ ಪರಿಪಾಲನೆ ಎಂದು ನಾವೆಲ್ಲರೂ ನಂಬಿಕೊಂಡು ಬಂದಿರುವಂತೆ ನಾಡಿನಲ್ಲಿ ಸುಭಿಕ್ಷೆ, ಶಾಂತಿ ಅಭಿವೃದ್ಧಿಯಾಗಲಿ ಎಂದು ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ದಸರಾ ನಾಡಹಬ್ಬವಾಗಿ ನಾವೆಲ್ಲರೂ ಆಚರಿಸುತ್ತಿದ್ದೇವೆ. ದುಷ್ಟ ಶಕ್ತಿ ನಿಗ್ರಹವಾಗಿ ಶಿಷ್ಟರ ಪರಿಪಾಲನೆ ಎಂದು ನಾವೆಲ್ಲರೂ ನಂಬಿಕೊಂಡು ಬಂದಿರುವಂತೆ ನಾಡಿನಲ್ಲಿ ಸುಭಿಕ್ಷೆ, ಶಾಂತಿ ಅಭಿವೃದ್ಧಿಯಾಗಲಿ ಎಂದು ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಆಯುಧಪೂಜೆ, ವಿಜಯದಶಮಿ ಹಬ್ಬದ ಅಂಗವಾಗಿ ಕರ್ನಾಟಕ ಜನತೆಗೆ ಶುಭಾಶಯ ಕೋರಿ ಮಾತನಾಡಿದ ಸಿಎಂ ಬೊಮ್ಮಾಯಿ, ಇಂದು, ನಾಳೆ ನೆಮ್ಮದಿಯಿಂದ ನಾಡಿನ ಜನತೆ ದಸರಾ ಹಬ್ಬವನ್ನು ಆಚರಿಸಲಿ ಎಂದು ಆಶಿಸಿದರು.

ಕಾಂಗ್ರೆಸ್ ನಿಂದ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪ್ರವೇಶದ ಬಗ್ಗೆ ಸುದ್ದಿಗಾರರು ಕೇಳಿದಾಗ, ಇಂದು ನಾಳೆ ರಾಜ್ಯದ ಜನತೆ ನೆಮ್ಮದಿಯಿಂದ ಹಬ್ಬ ಆಚರಿಸಲಿ, ಈ ಎಲ್ಲಾ ವಿಚಾರಗಳಿಗೆ ನಾಡಿದ್ದು ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com