ಕಮಿಷನ್ ಆರೋಪದ ಪರಿಣಾಮ ಬಿಲ್ ಇತ್ಯರ್ಥ ಪಡಿಸದೆ, ಟೆಂಡರ್ ನೀಡದೆ ನಮ್ಮ ವಿರುದ್ಧ ಬಿಬಿಎಂಪಿ ಸೇಡು: ಗುತ್ತಿಗೆದಾರರು

ಬಿಬಿಎಂಪಿಯಲ್ಲಿ ಕೆಲಸಗಳಾಗಬೇಕು ಅಂದರೆ ಶೇ.50 ರಷ್ಟು ಕಮಿಷನ್ ವ್ಯವಸ್ಥೆ ಇದೆ ಎಂದು ಆರೋಪಿಸಿದ್ದ ಪರಿಣಾಮ ಈಗ ಬಿಬಿಎಂಪಿ ಗುತ್ತಿಗೆದಾರರಿಗೆ ನೀಡಬೇಕಿದ್ದ 3,000 ಕೋಟಿ ರೂಪಾಯಿ ಮೌಲ್ಯದ ಬಾಕಿ ಬಿಲ್ ನ್ನು ಅಕ್ಟೋಬರ್ 2020 ರಿಂದ ಇತ್ಯರ್ಥಪಡಿಸಿಲ್ಲ.
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು: ಬಿಬಿಎಂಪಿಯಲ್ಲಿ ಕೆಲಸಗಳಾಗಬೇಕು ಅಂದರೆ ಶೇ.50 ರಷ್ಟು ಕಮಿಷನ್ ವ್ಯವಸ್ಥೆ ಇದೆ ಎಂದು ಆರೋಪಿಸಿದ್ದ ಪರಿಣಾಮ ಈಗ ಬಿಬಿಎಂಪಿ ಗುತ್ತಿಗೆದಾರರಿಗೆ ನೀಡಬೇಕಿದ್ದ 3,000 ಕೋಟಿ ರೂಪಾಯಿ ಮೌಲ್ಯದ ಬಾಕಿ ಬಿಲ್ ನ್ನು ಅಕ್ಟೋಬರ್ 2020 ರಿಂದ ಇತ್ಯರ್ಥಪಡಿಸಿಲ್ಲ. ಹೊಸ ಟೆಂಡರ್ ನ್ನೂ ನೀಡುತ್ತಿಲ್ಲ ಎಂಬ ಹೊಸ ಆರೋಪ ಕೇಳಿಬಂದಿದೆ. 

ಬಿಬಿಎಂಪಿ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಪಿ ಮಂಜುನಾಥ್ ಈ ಆರೋಪ ಮಾಡಿದ್ದು, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿ, ಇವೆಲ್ಲವೂ ನಾವು ಶೇ.50 ರಷ್ಟು ಕಮಿಷನ್ ಆರೋಪ ಮಾಡಿದ ಬಳಿಕ ನಡೆದ ಬೆಳವಣಿಗೆಯಾಗಿದೆ. ಕಮಿಷನ್ ವ್ಯವಸ್ಥೆಯ ಬಗ್ಗೆ ಸಾರ್ವಜನಿಕವಾಗಿ ಆರೋಪ ಮಾಡಿದ್ದಕ್ಕಾಗಿ ನಮ್ಮ ವಿರುದ್ಧ ಬಿಬಿಎಂಪಿ ನಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಮಂಜುನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.
 
ಈ ಹಿಂದೆ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸಂಘದ  ಕ್ಲಾಸ್ 3, 2, 1  ಗುತ್ತಿಗೆದಾರರು ಟೆಂಡರ್ ಗಳನ್ನು ಪಡೆಯುತ್ತಿದ್ದರು ಆದರೆ ಈಗ ಇತರ ರಾಜ್ಯಗಳ ಪ್ರಭಾವಿ ಗುತ್ತಿಗೆದಾರರಿಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದ ನಮ್ಮ ಜೀವನೋಪಾಯಕ್ಕೆ ಪರಿಣಾಮ ಉಂಟಾಗುತ್ತಿದೆ ಎಂದು ಮಂಜುನಾಥ್ ಹೇಳಿದ್ದಾರೆ. ಹಬ್ಬಗಳು ಮುಕ್ತಾಯಗೊಂಡ ಬಳಿಕ ಸಭೆಯನ್ನು ನಡೆಸುತ್ತೇವೆ ಹಾಗೂ ಸಂಘ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ" ಎಂದು ಮಂಜುನಾಥ್ ತಿಳಿಸಿದ್ದಾರೆ.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಗೆ ಗುತ್ತಿಗೆದಾರರಿಗೆ ಟೆಂಡರ್ ನೀಡದೇ ಇರುವ ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ಇಲ್ಲ. ಆದರೆ ಕೋಟ್ಯಾಂತರ ರೂಪಾಯಿ ಮೌಲ್ಯದ ಬಿಲ್ ಗಳನ್ನು ಇತ್ಯರ್ಥಗೊಳಿಸದೇ ಇರುವುದು ತಿಳಿದಿದೆ.

ಈ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಲಿಕೆ ವಿಶೇಷ ಆಯುಕ್ತ ಆರ್ ಎಲ್ ದೀಪಕ್, ಈ ಆರೋಪಗಳು ನಿರಾಧಾರವಾದದ್ದು. ಬಿಬಿಎಂಪಿ ಈ ಹಿಂದೆ 3-4 ವರ್ಷಗಳಿಗೆ ಒಮ್ಮೆ ಬಿಲ್ ಗಳನ್ನು ಇತ್ಯರ್ಥಗೊಳಿಸುತ್ತಿತ್ತು. ಈಗ ಆ ಅವಧಿ 18-24 ತಿಂಗಳಿಗೆ ಕುಗ್ಗಿದೆ. ಪಾಲಿಕೆ ಬಳಿ ಸಾಕಷ್ಟು ಹಣ ಇದ್ದೂ ಬಿಲ್ ಮೊತ್ತ ಇತ್ಯರ್ಥಗೊಳಿಸದೇ ಇದ್ದಲ್ಲಿ ಈ ಆರೋಪವನ್ನು ಒಪ್ಪಬಹುದಾಗಿತ್ತು. ಆದರೆ ತೆರಿಗೆ ಸಂಗ್ರಹ ಹಾಗೂ ಆದಾಯ ಸೃಷ್ಟಿ ಹೆಚ್ಚಾಗಿಲ್ಲ. ಪಾಲಿಕೆ ಬಾಕಿ ಹಣ ಇಟ್ಟುಕೊಳ್ಳುವುದಿಲ್ಲ ಶೀಘ್ರವೇ ಇತ್ಯರ್ಥಗೊಳಿಸುತ್ತದೆ ಎಂದು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com