ಬೆಂಗಳೂರು: ಈದ್ ಮಿಲಾದ್ ಬೃಹತ್ ಮೆರವಣಿಗೆಗೆ ಕ್ಷಣಗಣನೆ, ವಾಹನ ಸವಾರರೇ ಹುಷಾರ್

ಅಖಿಲ ಕರ್ನಾಟಕ ಮೀಲಾದ್-ಓ-ಜುಲೂಸ್-ಇ-ರಸೂಲ್ ಅಲಮೀನ್ ಸಮಿತಿಯು (ಎಕೆಎನ್‌ಎಂಆರ್‌ಸಿ) ಪ್ರವಾದಿ ಮುಹಮ್ಮದ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಬೆಂಗಳೂರಿನ ಅತಿದೊಡ್ಡ ಈದ್ ಮಿಲಾದ್ ಮೆರವಣಿಗೆಯನ್ನು ಇಂದು  ಆಯೋಜಿಸಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಖಿಲ ಕರ್ನಾಟಕ ಮೀಲಾದ್-ಓ-ಜುಲೂಸ್-ಇ-ರಸೂಲ್ ಅಲಮೀನ್ ಸಮಿತಿಯು (ಎಕೆಎನ್‌ಎಂಆರ್‌ಸಿ) ಪ್ರವಾದಿ ಮುಹಮ್ಮದ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಬೆಂಗಳೂರಿನ ಅತಿದೊಡ್ಡ ಈದ್ ಮಿಲಾದ್ ಮೆರವಣಿಗೆಯನ್ನು ಇಂದು  ಆಯೋಜಿಸಿದ್ದು,  ಎರಡು ವರ್ಷಗಳ ನಂತರ ಅದ್ಧೂರಿ ಮೆರವಣಿಗೆ ಕ್ಷಣಗಣನೆ ಆರಂಭವಾಗಿದೆ. ಹೆಗ್ಡೆ ನಗರದಿಂದ ಆರಂಭವಾಗುವ ಮೆರವಣಿಗೆ ಗೋವಿಂದಪುರ, ಟ್ಯಾನರಿ ರಸ್ತೆ ಮೂಲಕ ಸಾಗಿ ಶಿವಾಜಿನಗರದ ಕಂಬಳಪೋಶ್ ದರ್ಗಾದಲ್ಲಿ ಸಮಾರೋಪಗೊಳ್ಳಲಿದೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸಮಿತಿಯ ಸದಸ್ಯ ಇಸ್ಮಾಯಿಲ್ ಷರೀಫ್ ನಾನಾ, ಮೆರವಣಿಗೆಗೆ  ಪೊಲೀಸ್ ಅನುಮತಿ ಪಡೆಯಲಾಗಿದೆ  ಮತ್ತು ಮೆರವಣಿಗೆಯನ್ನು ಮೇಲ್ವಿಚಾರಣೆ ಮಾಡಲು ಸಮುದಾಯದ ಸ್ವಯಂಸೇವಕರಿದ್ದಾರೆ.  ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಮೆರವಣಿಗೆ ಸಾಗುವುದರಿಂದ ಪೊಲೀಸ್ ಭದ್ರತೆಯನ್ನೂ ಕೋರಲಾಗಿದೆ ಎಂದರು. 

ರಾಮಕೃಷ್ಣ ಹೆಗಡೆ ನಗರದಿಂದ ಬೆಳಗ್ಗೆ 11.30ರಿಂದ ಮಧ್ಯಾಹ್ನದ ನಡುವೆ ಮೆರವಣಿಗೆ ಆರಂಭವಾಗಲಿದೆ. ಬಿಲಾಲ್ ಮಸೀದಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಎಲ್ಲ ಪಕ್ಷಗಳ ಮುಖಂಡರಿಗೂ ಆಹ್ವಾನ ನೀಡಲಾಗಿದೆ ಎಂದು ಸಮಿತಿಯ ಸ್ವಯಂಸೇವಕರೊಬ್ಬರು ತಿಳಿಸಿದರು. ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

ಸಂಚಾರ ನಿರ್ಬಂಧಗಳು: ವಿಧಾನಸೌಧದಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಹಾಗೂ ನಗರದ ಇತರೆಡೆ ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ಈ ಕೆಳಗಿನ ರಸ್ತೆಗಳಲ್ಲಿ ಸಂಚಾರ ಮಾಡದಂತೆ ಬೆಂಗಳೂರು ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ. ರಸ್ತೆಗಳೆಂದರೆ: ಡಾ ಬಿಆರ್ ಅಂಬೇಡ್ಕರ್ ರಸ್ತೆ (ವಿಧಾನಸೌಧದ ಮುಂಭಾಗ) - ಬಾಳೇಕುಂದ್ರಿ ವೃತ್ತದಿಂದ ಕೆಆರ್ ವೃತ್ತ- ಖೋಡೆ ವೃತ್ತದಿಂದ ಕೆಆರ್ ವೃತ್ತ  (ಶೇಷಾದ್ರಿ ರಸ್ತೆ) - ಸಿಐಡಿ ಜಂಕ್ಷನ್‌ನಿಂದ ಕೆಆರ್ ವೃತ್ತ (ಅರಮನೆ ರಸ್ತೆ- ಶೇಷಾದ್ರಿ ರಸ್ತೆ) - ಕೆಆರ್ ವೃತ್ತದಿಂದ ಪೊಲೀಸ್ ಕಾರ್ನರ್‌ಗೆ (ನೃಪತುಂಗ ರಸ್ತೆ) -ಮೈಸೂರು ಬ್ಯಾಂಕ್ ವೃತ್ತದಿಂದ ಕೆಆರ್ ವೃತ್ತ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com