ಬೆಳಗಾವಿ: ಆರು ಅಡಿ ಉದ್ದದ ಮೊಸಳೆ ಸೆರೆ ಹಿಡಿದ ಗ್ರಾಮಸ್ಥರು

ಬೆಳಗಾವಿ ಜಿಲ್ಲೆಯ ಹೊಸೂರ ಗ್ರಾಮದ ರೈತ ದೇವೇಂದ್ರಪ್ಪ ಜಾಧವ ಅವರ ಜಮೀನಿನಲ್ಲಿ ಪ್ರತ್ಯಕ್ಷವಾದ ಮೊಸಳೆಯನ್ನು ಗ್ರಾಮಸ್ಥರು ಭಾನುವಾರ ಸೆರೆಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು.
ಮೊಸಳೆ ಸೆರೆ ಹಿಡಿದ ಗ್ರಾಮಸ್ಥರು
ಮೊಸಳೆ ಸೆರೆ ಹಿಡಿದ ಗ್ರಾಮಸ್ಥರು

ಬೆಳಗಾವಿ: ಬೆಳಗಾವಿ ಜಿಲ್ಲೆಯ ಹೊಸೂರ ಗ್ರಾಮದ ರೈತ ದೇವೇಂದ್ರಪ್ಪ ಜಾಧವ ಅವರ ಜಮೀನಿನಲ್ಲಿ ಪ್ರತ್ಯಕ್ಷವಾದ ಮೊಸಳೆಯನ್ನು ಗ್ರಾಮಸ್ಥರು ಭಾನುವಾರ ಸೆರೆಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು.

ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಮಲಪ್ರಭಾ ನದಿಯಲ್ಲಿ ತೇಲಿ ಬಂದ ಮೊಸಳೆ ಕೃಷಿ ಭೂಮಿಗೆ ನುಗ್ಗಿತ್ತು. ಇದನ್ನು ಕಂಡ ರೈತರು ಕೆಲಕಾಲ ಗಾಬರಿಯಾದರು‌. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಮೊಸಳೆ ಸೆರೆಹಿಡಿದರು.

ಕೂಡಲೇ ಮಾಹಿತಿ ನೀಡಿದರೂ ಮೊಸಳೆ ಹಿಡಿಯಲು ಗ್ರಾಮಕ್ಕೆ ಆಗಮಿಸದ ಅರಣ್ಯಾಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಆರು ಗಂಟೆ ಕಳೆದರೂ ಸ್ಥಳಕ್ಕೆ ಭೇಟಿ ನೀಡದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಅಸಮಾಧಾನ ಹೊರಹಾಕಿದರು.

ರೈತರೊಬ್ಬರ ಸಾಕು ನಾಯಿ ಬೊಗಳಲು ಆರಂಭಿಸಿತು, ನಾಯಿ ಬೊಗಳುವ ಶಬ್ದವನ್ನು ಅನುಸರಿಸಿ ನೋಡಿದಾಗ ನಾಯಿ ಮೊಸಳೆಯ ಬಾಯಿಯಲ್ಲಿತ್ತು. ರೈತರು ಹಾಗೂ ಯುವಕರು ಜಮೀನಿನಲ್ಲಿ ಜಮಾಯಿಸಿ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೊಸಳೆ ಕಬ್ಬಿನ ಗದ್ದೆಗೆ ನುಗ್ಗುತ್ತಿದ್ದಾಗ ಯುವಕರ ಗುಂಪೊಂದು ಅದನ್ನು ಎರಡು ಹಗ್ಗಗಳಿಂದ ಕಟ್ಟಿ ಹೊಲದಿಂದ ಹೊರಗೆ ಎಳೆದು ಸೆರೆ ಹಿಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com