ತುಮಕೂರು: ಕೂಲಿ ಕೇಳಲು ಹೋಗಿದ್ದ ದಲಿತ ವ್ಯಕ್ತಿ ವಿರುದ್ಧ ಬಾಳೆಗೊನೆ ಕದ್ದ ಆರೋಪ; ಥಳಿತಕ್ಕೊಳಗಾಗಿದ್ದ ವ್ಯಕ್ತಿ ಸಾವು
ತಮ್ಮ ಜಮೀನಿನಲ್ಲಿದ್ದ ಬಾಳೆಗೊನೆಯನ್ನು ಕದ್ದ ಆರೋಪದ ಮೇಲೆ ಮಾಲೀಕರಿಂದ ಥಳಿತಕ್ಕೊಳಗಾಗಿದ್ದ ದಲಿತ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಮಧುಗಿರಿ ತಾಲೂಕಿನ ಇಟಕ ದಿಬ್ಬನಹಳ್ಳಿ ಗ್ರಾಮದಲ್ಲಿ ನಡೆದಿದೆ.
Published: 19th October 2022 01:17 PM | Last Updated: 19th October 2022 01:17 PM | A+A A-

ಪುರಶೋತ್ತಮ್ ಪ್ರಸಾದ್
ತುಮಕೂರು: ತಮ್ಮ ಜಮೀನಿನಲ್ಲಿದ್ದ ಬಾಳೆಗೊನೆಯನ್ನು ಕದ್ದ ಆರೋಪದ ಮೇಲೆ ಮಾಲೀಕರಿಂದ ಥಳಿತಕ್ಕೊಳಗಾಗಿದ್ದ ದಲಿತ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಮಧುಗಿರಿ ತಾಲೂಕಿನ ಇಟಕ ದಿಬ್ಬನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪುರುಷೋತ್ತಮ ಪ್ರಸಾದ್ (35) ಸಂತ್ರಸ್ತ ವ್ಯಕ್ತಿ. ಆರೋಪಿ ಕಾಳೇನಹಳ್ಳಿಯ ಬಾಲಾಜಿ ರೆಡ್ಡಿಯನ್ನು ಬಂಧಿಸಲಾಗಿದೆ.
ಸೆಪ್ಟೆಂಬರ್ 29 ರಂದು ಪ್ರಸಾದ್ ಅವರು ಬಾಳೆ ತೋಟದಲ್ಲಿ ಕೆಲಸ ಮಾಡಿದ್ದ ಕೂಲಿಯನ್ನು ಪಡೆಯಲೆಂದು ಆರೋಪಿಯ ಬಳಿಗೆ ಹೋಗಿದ್ದರು. ಈ ವೇಳೆ ಬಾಳೆಗೊನೆ ಕದ್ದಿದ್ದಾನೆ ಎಂಬ ಆರೋಪದ ಮೇಲೆ ಆರೋಪಿಗಳು ಇತರರೊಂದಿಗೆ ಸೇರಿ ಚಿತ್ರಹಿಂಸೆ ನೀಡಿ ಕೊಡಿಗೇನಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದರು.
ಪೊಲೀಸರು ಸಂತ್ರಸ್ತನಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂಬ ಕೆಲವು ದಲಿತ ವೇದಿಕೆಗಳ ಆರೋಪವನ್ನು ಎಸ್ಪಿ ರಾಹುಲ್ ಕುಮಾರ್ ಶಹಪುರವಾಡ್ ತಳ್ಳಿಹಾಕಿದ್ದಾರೆ.