ಬೆಂಗಳೂರು: ಅತಿಕ್ರಮ ಪ್ರವೇಶ, ಶಾಲೆ ಗೋಡೆ ಧ್ವಂಸಗೊಳಿಸಿದ್ದ 9 ಮಂದಿಯನ್ನು ಬಂಧನ
ಕ್ವೀನ್ಸ್ ರಸ್ತೆಯಲ್ಲಿರುವ ಕಮಲಾಬಾಯಿ ಶಾಲೆಯ ಕಾಂಪೌಂಡ್ ಅನ್ನು ಅತಿಕ್ರಮಿಸಿ, ಶಾಲಾ ಗೋಡೆಯನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಮಹಿಳೆ ಸೇರಿದಂತೆ 9 ಮಂದಿಯನ್ನು ಹೈಗ್ರೌಂಡ್ಸ್ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
Published: 22nd October 2022 01:11 PM | Last Updated: 22nd October 2022 01:11 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕ್ವೀನ್ಸ್ ರಸ್ತೆಯಲ್ಲಿರುವ ಕಮಲಾಬಾಯಿ ಶಾಲೆಯ ಕಾಂಪೌಂಡ್ ಅನ್ನು ಅತಿಕ್ರಮಿಸಿ, ಶಾಲಾ ಗೋಡೆಯನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಮಹಿಳೆ ಸೇರಿದಂತೆ 9 ಮಂದಿಯನ್ನು ಹೈಗ್ರೌಂಡ್ಸ್ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಶಾಲೆಯ ಆವರಣದಲ್ಲಿರುವ ಮೂರು ಎಕರೆ ಜಾಗ ವಿವಾದದಲ್ಲಿದೆ, ಪ್ರಕರಣ ಸಂಬಂಧ ಇತ್ತೀಚೆಗೆ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಆದರೆ, ಗುರುವಾರ ರಾತ್ರಿ ತಂಡವೊಂದು ಶಾಲೆಯ ಕಾಂಪೌಂಡ್ ಗೋಡೆಯನ್ನು ಕೆಡವಿದೆ. ಈ ವೇಳೆ ಇದನ್ನು ತಡೆಯಲು ಯತ್ನಿಸಿದ ಕಮಲಾ ಬಾಯಿ ಎಜುಕೇಶನ್ ಟ್ರಸ್ಟ್‌ನ ಕೆಲ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಈ ಹಿಂದೆಯೂ ಈ ಸಂಬಂಧ ಎಫ್‌ಐಆರ್ ದಾಖಲಾಗಿತ್ತು.
ಇದನ್ನೂ ಓದಿ: ದುಷ್ಕೃತ್ಯಕ್ಕೆ ಸಂಚು: ಮಂಗಳೂರಿನಲ್ಲಿ ನಿಷೇಧಿತ ಪಿಎಫ್ಐಗೆ ಸೇರಿದ ಐವರ ಬಂಧನ!
ಈ ನಡುವೆ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಪಿಗಳ ಪರ ವಕೀಲ ಸಮದ್ ಖಾನ್ ಮುಖ್ಯ ನ್ಯಾಯಮೂರ್ತಿ ಹಾಗೂ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಸಿವಿಲ್ ವಿವಾದದಲ್ಲಿ ವಿನಾಕಾರಣ ಪೊಲೀಸರು ಮಧ್ಯಪ್ರವೇಶಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.