ತಡೆಗೋಡೆಗಳಿಂದ ನೀರು ಸೋರಿಕೆ: ವಿಧಾನಸೌಧ ಬಳಿಯಿರುವ ಪಾದಚಾರಿ ಸುರಂಗಮಾರ್ಗಗಳ ಮುಚ್ಚಿದ ಅಧಿಕಾರಿಗಳು

ತಡೆಗೋಡೆಗಳಿಂದ ನೀರು ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ 2010ರಲ್ಲಿ ಬಿಬಿಎಂಪಿ ನಿರ್ಮಿಸಿದ್ದ ರಾಜಭವನ ರಸ್ತೆ ಮತ್ತು ಬಸವ ಭವನದ ಬಳಿ ಇರುವ ಎರಡು ಪಾದಚಾರಿ ಸುರಂಗಮಾರ್ಗಗಳನ್ನು ಅಧಿಕಾರಿಗಳು ಬಂದ್ ಮಾಡಿದ್ದಾರೆ.
ಚಾಲುಕ್ಯ ಸರ್ಕಲ್ ಬಳಿಯಿರುವ ಸುರಂಗಮಾರ್ಗವನ್ನು ಮುಚ್ಚಿರುವುದು.
ಚಾಲುಕ್ಯ ಸರ್ಕಲ್ ಬಳಿಯಿರುವ ಸುರಂಗಮಾರ್ಗವನ್ನು ಮುಚ್ಚಿರುವುದು.

ಬೆಂಗಳೂರು: ತಡೆಗೋಡೆಗಳಿಂದ ನೀರು ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ 2010ರಲ್ಲಿ ಬಿಬಿಎಂಪಿ ನಿರ್ಮಿಸಿದ್ದ ರಾಜಭವನ ರಸ್ತೆ ಮತ್ತು ಬಸವ ಭವನದ ಬಳಿ ಇರುವ ಎರಡು ಪಾದಚಾರಿ ಸುರಂಗಮಾರ್ಗಗಳನ್ನು ಅಧಿಕಾರಿಗಳು ಬಂದ್ ಮಾಡಿದ್ದಾರೆ. 

ರಾಜಭವನ ರಸ್ತೆ ಮತ್ತು ವಿಧಾನ ಸೌಧ ವೆಸ್ಟ್ ಗೇಟ್ ಮತ್ತು ಚಾಲುಕ್ಯ ವೃತ್ತದಲ್ಲಿ ಜನರು ಓಡಾಡುವುದನ್ನು ತಡೆಯುವ ಸಲುವಾಗಿ ಈ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲಾಗಿತ್ತು. ಇದೀಗ ಈ ಪಾದಚಾರಿ ಸುರಂಗ ಮಾರ್ಗದಲ್ಲಿ ಎರಡು ಅಡಿಗಳಷ್ಟು ನೀರು ತುಂಬಿರುವುದು ಕಂಡು ಬಂದಿದೆ. 

ಸುರಂಗ ಮಾರ್ಗದ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಗೃಹರಕ್ಷದ ದಳದ ಸಿಬ್ಬಂದಿ ಮಮತಾ ಅವರು ಮಾತನಾಡಿ, ಕಳೆದ 2 ತಿಂಗಳಿನಿಂದ ಈ ಸುರಂಗ ಮಾರ್ಗವನ್ನು ಮುಚ್ಚಲಾಗಿದೆ. ಸುರಂಗ ಮಾರ್ಗದಲ್ಲಿ ಎರಡು ಪಂಪ್ ಗಳನ್ನು ಅಳವಡಿಸಲಾಗಿದ್ದು, ಎರಡು ಪಂಪ್ ಗಳು ದಿನದಲ್ಲಿ ಎರಡು ಬಾರಿ ನೀರು ತೆಗೆಯುವ ಕಾರ್ಯ ಮಾಡುತ್ತಿದೆ ಎಂದು ಹೇಳಿದ್ದಾರೆ. 

ಬಿಬಿಎಂಪಿ ತಾಂತ್ರಿಕ ಇಂಜಿನಿಯರಿಂಗ್ ವಿಭಾಗ ಕಾರ್ಯಪಾಲಕ ಎಂಜಿನಿಯರ್ ಜಯಸಿಂಹ ಅವರು ಮಾತನಾಡಿ, ಈ ವರ್ಷ ಭಾರೀ ಮಳೆಯಾಗಿದ್ದು, ಇದರಿಂದಾಗಿ ನೀರು ಸೋರಿಕೆ ಕಂಡು ಬಂದಿದೆ. ಗಾಲ್ಫ್ ಕೋರ್ಸ್, ತಾರಾಲಯ ಮತ್ತು ಶಾಸಕರ ಭವನದಂತಹ ತೆರೆದ ಮೈದಾನಗಳಿಂದ ನೀರು ಹರಿಯುತ್ತಿದ್ದು, ಈ  ನೀರು ಗೋಡೆಗಳಿಂದ ಸುರಂಗಮಾರ್ಗಗಳಿಗೆ ನುಗ್ಗುತ್ತಿದೆ. ಈ ಸೋರಿಕೆ ತಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಪಂಪ್ ಗಳನ್ನು ಅಳವಡಿಸಿ ನೀರು ಹೊರ ಹಾಕುವ ಕೆಲಸ ಮಾಡಲಾಗುತ್ತಿದೆ. ಸುರಂಗ ಮಾರ್ಗ ನೀರಿನಲ್ಲಿ ಮುಚ್ಚಿ ಹೋಗಲು ಬಿಡುವುದಿಲ್ಲ. 1 ಅಥವಾ 2 ತಿಂಗಳುಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ. ರೂ.1 ಕೋಟಿ ವೆಚ್ಚದಲ್ಲಿ ಈ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com