ದೀಪಾವಳಿ ಹಿನ್ನೆಲೆ ಚುನಾಯಿತ ಸದಸ್ಯರಿಗೆ ದುಬಾರಿ ಗಿಫ್ಟ್ ನೀಡಿದ ಸಚಿವ ಆನಂದ್ ಸಿಂಗ್: ವಿವಾದ ಸೃಷ್ಟಿ

ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಈ ನಡುವೆ ಪ್ರವಾಸೋದ್ಯ ಸಚಿವ ಆನಂದ್ ಸಿಂಗ್ ಅವರು ನಗರಸಭೆ ಮತ್ತು‌‌ ಪಟ್ಟಣ ಪಂಚಾಯಿತಿ ಸದಸ್ಯರಿಗೆ ನೀಡಿರುವ ದುಬಾರಿ ಗಿಫ್ಟ್'ಗಳು ಭಾರೀ ಸದ್ದು ಮಾಡುತ್ತಿದೆ.
ಉಡುಗೊರೆ ಬಾಕ್ಸ್ ನಲ್ಲಿರುವ ಹಣ ಹಾಗೂ ದುಬಾರಿ ವಸ್ತುಗಳು.
ಉಡುಗೊರೆ ಬಾಕ್ಸ್ ನಲ್ಲಿರುವ ಹಣ ಹಾಗೂ ದುಬಾರಿ ವಸ್ತುಗಳು.

ಬೆಂಗಳೂರು: ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಈ ನಡುವೆ ಪ್ರವಾಸೋದ್ಯ ಸಚಿವ ಆನಂದ್ ಸಿಂಗ್ ಅವರು ನಗರಸಭೆ ಮತ್ತು‌‌ ಪಟ್ಟಣ ಪಂಚಾಯಿತಿ ಸದಸ್ಯರಿಗೆ ನೀಡಿರುವ ದುಬಾರಿ ಗಿಫ್ಟ್'ಗಳು ಭಾರೀ ಸದ್ದು ಮಾಡುತ್ತಿದೆ. 

ನಗರಸಭೆ ಮತ್ತು‌‌ ಪಟ್ಟಣ ಪಂಚಾಯಿತಿ ಸದಸ್ಯರಿಗೆ ಹಾಗೂ ಗ್ರಾ.ಪಂ ಸದಸ್ಯರಿಗೆ ಬೆಳ್ಳಿ, ನಗದು, ರೇಷ್ಮೆ ಸೀರೆ ಮತ್ತು ಪಂಚೆ ನೀಡಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. 

ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಆನಂದ್ ಸಿಂಗ್ ಅವರು, ನಗರಸಭೆ ಮತ್ತು‌‌ ಪಟ್ಟಣ ಪಂಚಾಯಿತಿ ಸದಸ್ಯರಿಗೆ ತಲಾ 1 ಲಕ್ಷದ 44 ಸಾವಿರ ರೂಪಾಯಿ ನಗದು, 144 ಗ್ರಾಂ ಚಿನ್ನ, ಒಂದು ಕೆ.ಜಿ ಬೆಳ್ಳಿ, ರೇಷ್ಮೆ ಸೀರೆ, ಪಂಚೆ, ಅಂಗಿ, ಮುತ್ತಿನ ಹಾರ ಮತ್ತು ಡ್ರೈ ಫ್ರೋಟ್ಸ್ ನೀಡಿದ್ದಾರೆ.

ಜೊತೆಗೆ ಹೊಸಪೇಟೆಯ 182 ಗ್ರಾ.ಪಂ ಸದಸ್ಯರಿಗೆ ಆರ್ಧ ಕೆಜಿ ಬೆಳ್ಳಿ, 27 ಸಾವಿರ ನಗದು, ರೇಷ್ಮೆ ಸೀರೆ, ಪಂಚೆ, ರೇಷ್ಮೆ ಶರ್ಟ್, ಮುತ್ತಿನ ಹಾರ ಮತ್ತು ಡ್ರೈ ಫ್ರೋಟ್ಸ್​ ನೀಡಿದ್ದಾರೆ. ಇದರ ಜೊತೆಗೆ ದೀಪಾವಳಿ ಹಬ್ಬದ ಶ್ರೀಲಕ್ಷ್ಮೀ ಪೂಜಾ ಆಮಂತ್ರಣ ಪತ್ರಿಕೆ ನೀಡಿ ಪೂಜೆಗೆ ಆಹ್ವಾನಿಸಿದ್ದಾರೆ. 

ಸಚಿವರು ನೀಡಿರುವ ದೀಪಾವಳಿ ಉಡುಗೊರೆ ಸುದ್ದಿ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಚಿವ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. 

ಹೊಸಪೇಟೆ ನಗರಸಭೆಯಲ್ಲಿ 35 ಸದಸ್ಯರು, 5 ಜನ ನಾಮನಿರ್ದೇಶಿತ ಸದಸ್ಯರಿದ್ದಾರೆ. ತಾಲೂಕಿನಲ್ಲಿ ಒಟ್ಟು 14 ಗ್ರಾಮ ಪಂಚಾಯಿತಿಗಳಿದ್ದು 282 ಸದಸ್ಯರಿದ್ದಾರೆ. ವಿಜಯನಗರ ಕ್ಷೇತ್ರ ವ್ಯಾಪ್ತಿಯಲ್ಲಿ 10 ಗ್ರಾಮ ಪಂಚಾಯಿತಿಯ 182 ಸದಸ್ಯರಿದ್ದಾರೆ.

ಈ ಸಂಬಂಧ ಆನಂದ್ ಸಿಂಗ್ ಅವರ ಬೆಂಬಲಿಗರು ಮಾತನಾಡಿ, ಪ್ರತೀ ದೀಪಾವಳಿಗೂ ಆನಂದ್ ಸಿಂಗ್ ಅವರು ಚುನಾಯಿತ ಪ್ರತಿನಿಧಿಗಳಿಗೆ ಉಡುಗೊರೆಗಳನ್ನು ಕಳುಹಿಸುತ್ತಾರೆ. ಆದರೆ, ಈ ಬಾರಿ ಚುನಾವಣೆ ಇರುವ ಹಿನ್ನೆಲೆಯಲ್ಲಿ ಈ ಕುರಿತು ವಿವಾದ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ. 

ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಇತರ ಪ್ರಮುಖ ವ್ಯಕ್ತಿಗಳಿಗೂ ಉಡುಗೊರೆಗಳನ್ನು ಕಳುಹಿಸಲಾಗಿದೆ. ಆನಂದ್ ಸಿಂಗ್ ಅವರು ಪ್ರತಿ ಗಣೇಶ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ಪೂಜೆಗೆ ಆಹ್ವಾನ ಪತ್ರಿಕೆಯೊಂದಿಗೆ ಉಡುಗೊರೆಗಳನ್ನು ಕಳುಹಿಸುತ್ತಾರೆ. ಆಪ್ತ ಸ್ನೇಹಿತರು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಕಳುಹಿಸುದ್ದಾರೆ. ಈ ಬಾರಿ ಯಾವ ಕಾರಣಕ್ಕೆ ವಿವಾದವಾಗುತ್ತಿದೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com