ಅನಧಿಕೃತ ಬ್ಯಾನರ್, ಪೋಸ್ಟರ್: ಕಾಂಗ್ರೆಸ್ ಬಳಿಕ ಬಿಬಿಎಂಪಿ ಆದೇಶ ಧಿಕ್ಕರಿಸಿದ ಬಿಜೆಪಿ

ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್, ಬ್ಯಾನರ್ ಅಳವಡಿಕೆಗೆ ನಿಷೇಧ ಹೇರಿರುವ ಬಿಬಿಎಂಪಿ ಆದೇಶ ಹಾಗೂ ಹೈಕೋರ್ಟ್ ನಿರ್ದೇಶನವನ್ನು ಕಾಂಗ್ರೆಸ್ ಬಳಿಕ ಇದೀಗ ಬಿಜೆಪಿ ಧಿಕ್ಕರಿಸಿರುವುದು ಕಂಡು ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್, ಬ್ಯಾನರ್ ಅಳವಡಿಕೆಗೆ ನಿಷೇಧ ಹೇರಿರುವ ಬಿಬಿಎಂಪಿ ಆದೇಶ ಹಾಗೂ ಹೈಕೋರ್ಟ್ ನಿರ್ದೇಶನವನ್ನು ಕಾಂಗ್ರೆಸ್ ಬಳಿಕ ಇದೀಗ ಬಿಜೆಪಿ ಧಿಕ್ಕರಿಸಿರುವುದು ಕಂಡು ಬಂದಿದೆ. 

ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ ಬಿಜೆಪಿ ಮುಖಂಡ ವಿವೇಕ್ ರೆಡ್ಡಿ ಜನರಿಗೆ ದೀಪಾವಳಿ ಶುಭಾಶಯ ಕೋರುವ ಫ್ಲೆಕ್ಸ್‌ಗಳನ್ನು ಹಾಕಲಾಗಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಪೋಸ್ಟರ್‌ಗಳು ಅರಮನೆ ರಸ್ತೆಯಲ್ಲಿ ರಾರಾಜಿಸುತ್ತಿರುವುದು ಕಂಡು ಬಂದಿದೆ. 

ಮೂರು ದಿನಗಳ ಹಿಂದೆ, ಕೇಂದ್ರದ ರೋಜ್‌ಗಾರ್ ಯೋಜನೆಯ ಭಾಗವಾಗಿ ಕೇಂದ್ರ ಸಚಿವರು ಬೆಂಗಳೂರಿನಲ್ಲಿ ಯುವಕರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದರು. ಕಾರ್ಯಕ್ರಮದ ನಿಮಿತ್ತ ಮೈಸೂರು ಬ್ಯಾಂಕ್ ವೃತ್ತದಿಂದ ಅರಮನೆ ರಸ್ತೆಯ ಮಹಾರಾಣಿ ಕಾಲೇಜು ವೃತ್ತದವರೆಗೆ ಜೋಶಿ ಅವರನ್ನು ಸನ್ಮಾನಿಸುವ ಫ್ಲೆಕ್ಸ್‌ಗಳನ್ನು ಹಾಕಲಾಗಿತ್ತು.

ಅದೇ ರೀತಿ, ಜಯನಗರದ ಸೌತ್ ಎಂಡ್ ಮತ್ತು ಆರ್‌ವಿ ರಸ್ತೆ ನಡುವಿನ ಮೆಟ್ರೋ ಪಿಲ್ಲರ್‌ಗಳಲ್ಲಿ ಬಿಜೆಪಿ ಮುಖಂಡ ವಿವೇಕ್ ರೆಡ್ಡಿ ಅವರ ಪೋಸ್ಟರ್‌ಗಳನ್ನು ಹಾಕಲಾಗಿದೆ. ರೆಡ್ಡಿ ಅವರು ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷರೂ ಆಗಿದ್ದಾರೆ. 

ಕಳೆದ ತಿಂಗಳು, ಕಾಂಗ್ರೆಸ್ ನಾಯಕ ಮತ್ತು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರ ಬೆಂಬಲಿಗರು ಅವರ ಜನ್ಮದಿನದಂದು ರಸೆಲ್ ಮಾರುಕಟ್ಟೆಯಲ್ಲಿ ಪೋಸ್ಟರ್‌ಗಳನ್ನು ಹಾಕಿದ್ದರು.

ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರಾಗಿ ನೇಮಕ ಮಾಡುವಂತೆ ಹಳೆ ಏರ್‌ಪೋರ್ಟ್ ರಸ್ತೆಯಲ್ಲಿ ಶಾಂತಿನಗರ ಶಾಸಕ ಎನ್‌ಎ ಹ್ಯಾರಿಸ್‌ ಬೆಂಬಲಿಗರು ಬ್ಯಾನರ್‌'ಗಳನ್ನು ಹಾಕಿದ್ದರು. 

ಬ್ಯಾನರ್ ಹಾಗೂ ಪೋಸ್ಟರ್ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಆರ್.ಎಲ್.ದೀಪಕ್ ಅವರು, ಫ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ತೆಗೆದುಹಾಕಲು ಆಯಾ ಪ್ರದೇಶದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com