ಪೊಲೀಸ್ ಪೇದೆಗಳ ಮೇಲೆ ಡ್ರ್ಯಾಗರ್ ನಿಂದ ಹಲ್ಲೆ: ರೌಡಿ ಗೊಣ್ಣೆ ವಿಜಿ ಬಂಧನಕ್ಕೆ ತೀವ್ರ ಶೋಧ

ಬೆನ್ನಟ್ಟಿ ಹಿಡಿಯಲು ಬಂದ ಮಹಿಳಾ ಪೇದೆ ಸೇರಿ ಮೂವರು ಪೊಲೀಸ್ ಪೇದೆಗಳ ಮೇಲೆ ಕಾರದ ಪುಡಿ ಎರಚಿ ಡ್ರ್ಯಾಗರ್ ನಿಂದ ಹಲ್ಲೆಗೈದು ಪರಾರಿಯಾಗಿರುವ ಕುಖ್ಯಾತ ರೌಡಿ ವಿಜಯ್ ಆಲಿಯಾಸ್ ಗೊಣ್ಣೆ ವಿಜಿ ಬಂಧನಕ್ಕೆ  ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಶೋಧ ನಡೆಸಲಾಗಿದೆ.
ರೌಡಿ ಶೀಟರ್ ಗೊಣ್ಣೆ ವಿಜಿ
ರೌಡಿ ಶೀಟರ್ ಗೊಣ್ಣೆ ವಿಜಿ

ಬೆಂಗಳೂರು: ಬೆನ್ನಟ್ಟಿ ಹಿಡಿಯಲು ಬಂದ ಮಹಿಳಾ ಪೇದೆ ಸೇರಿ ಮೂವರು ಪೊಲೀಸ್ ಪೇದೆಗಳ ಮೇಲೆ ಕಾರದ ಪುಡಿ ಎರಚಿ ಡ್ರ್ಯಾಗರ್ ನಿಂದ ಹಲ್ಲೆಗೈದು ಪರಾರಿಯಾಗಿರುವ ಕುಖ್ಯಾತ ರೌಡಿ ವಿಜಯ್ ಆಲಿಯಾಸ್ ಗೊಣ್ಣೆ ವಿಜಿ ಬಂಧನಕ್ಕೆ  ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಶೋಧ ನಡೆಸಲಾಗಿದೆ.

ರೌಡಿ ಗೊಣ್ಣೆ ವಿಜಿ ಬಂಧನಕ್ಕೆ ಗಿರಿನಗರ ಇನ್ಸ್ ಪೆಕ್ಟರ್ ಸೇರಿ ಮೂವರು ಇನ್ಸ್ ಪೆಕ್ಟರ್ ಗಳ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡ ರಚಿಸಿ ಶೋಧ ನಡೆಸಲಾಗಿದ್ದು, ಆತನ ಸುಳಿವು ಪತ್ತೆಯಾಗಿದೆ ಎಂದು ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.

ಮಹಿಳಾ ಕಾನ್ಸ್ ಟೇಬಲ್ ನೇತ್ರಾ ಅವರು ನಿನ್ನೆ ಸಂಜೆ 4ರ ಸುಮಾರಿಗೆ ಹೊಸಕೆರೆ ಬಸ್ ನಿಲ್ದಾಣದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಂಬರ್ ಪ್ಲೇಟ್ ಇಲ್ಲದ ನೀಲಿ ಬಣ್ಣದ ಡಿಯೋವೊಂದನ್ನು ಗಮನಿಸಿದ್ದು, ಅದನ್ನು ಚಲಾಯಿಸುತ್ತಿರುವುದು ರೌಡಿ ಶೀಟರ್ ವಿಜಯ್ ಎಂಬುದು ಗೊತ್ತಾಗಿದೆ.

ಈ ವೇಳೆ ಪೇದೆಗಳಾದ ನೇತ್ರಾ, ನಾಗೇಂದ್ರ , ತೇಲಿ ಹಾಗೂ ಕಿರಣ್ ಆರೋಪಿ ವಿಜಯ್ ನನ್ನು ಹಿಡಿಯಲು ಯತ್ನಿಸಿದ್ದಾರೆ. ತಪ್ಪಿಸಿಕೊಂಡು ಓಡಲು ಯತ್ನಿಸಿದ  ಆರೋಪಿಯನ್ನು ನಾಗೇಂದ್ರ ಹಾಗೂ ಕಿರಣ್ ಇಬ್ಬರು ಸೇರಿ ಹಿಡಿದಿದ್ದಾರೆ. ಅಷ್ಟರಲ್ಲಿ ಆರೋಪಿ ಕಾರದ ಪುಡಿ ತೆಗೆದು ಮೂವರು ಕಾನ್ಸ್ ಟೇಬಲ್ ಮೇಲೆ ಎರಚಿದ್ದಾನೆ. ಅಲ್ಲದೇ, ತನ್ನ ಬಳಿಯಿದ್ದ ಡ್ರ್ಯಾಗರ್ ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. 

ಸ್ಥಳೀಯರು ಕೂಡಲೇ ಪೊಲೀಸರ ನೆರವಿಗೆ ಧಾವಿಸಿದ್ದು, ಗಾಯಗೊಂಡಿದ್ದ ಪೊಲೀಸ್ ಕಾನ್ಸ್ ಟೇಬಲ್ ಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com