
ಸಂಗ್ರಹ ಚಿತ್ರ
ಮಂಗಳೂರು: ಕುಡಿದು ರೈಲು ಹಳಿ ಮೇಲೆ ಮಲಗಿದ ವ್ಯಕ್ತಿಯೊಬ್ಬರಿಗೆ ದಂಡ ಹಾಕಿ ಒಂದು ದಿನ ಜೈಲು ಶಿಕ್ಷೆ ನೀಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಪುತ್ತೂರಿನ ವ್ಯಕ್ತಿಯೊಬ್ಬರು ಕುಡಿದು ರೈಲ್ವೆ ಆಸ್ತಿಯನ್ನು ಅತಿಕ್ರಮಿಸಿ ಕುಡಿದು ಮಲಗಿದ್ದಕ್ಕಾಗಿ ದಂಡವನ್ನು ಮಾತ್ರವಲ್ಲದೇ ಒಂದು ದಿನ ಜೈಲು ಶಿಕ್ಷೆ ವಿಧಿಸಲಾಗಿದೆ. ಪದ್ಯನ್ನೂರು ಗ್ರಾಮದ ನಿವಾಸಿ ಹಾಗೂ ಕೂಲಿ ಕಾರ್ಮಿಕ ದಿನೇಶ್ ಭಂಡಾರಿ (52) ಮಂಗಳವಾರ ರಾತ್ರಿ ಪುತ್ತೂರು ಬಳಿ ರೈಲು ಮಾರ್ಗದ ಸಮೀಪವಿರುವ ಬಾರ್‌ನಲ್ಲಿ ಮದ್ಯ ಸೇವಿಸಿ ಹಳಿಗಳ ಮೇಲೆ ಮಲಗಿದ್ದರು. ಕೆಲವು ದಾರಿಹೋಕರು ಅವರನ್ನು ದೂರ ಸರಿಯುವಂತೆ ಕೇಳಿದರು. ಕರಾವಳಿ-ಬೆಂಗಳೂರು ರೈಲಿಗೆ ಸಿಲುಕಬಹುದು ಎಚ್ಚರಿಸಿದರೂ ಆತ ಅವರನ್ನು ನಿರಾಕರಿಸಿ ಅಲ್ಲಿಯೇ ಮಲಗಿದ್ದ. ಅಲ್ಲದೇ ಎಬ್ಬಿಸಿದವರನ್ನು ಬಾಯಿಗೆ ಬಂದ ಹಾಗೆ ನಿಂದಿಸುತ್ತಿದ್ದ.
ಇದನ್ನೂ ಓದಿ: ಮೈಸೂರು: ಟ್ರ್ಯಾಕ್ಟರ್ ಮಗುಚಿ ಬಿದ್ದು ಮೂವರು ಸಾವು
ಈ ಕುರಿತಂತೆ ಸಾರ್ವಜನಿಕರೊಬ್ಬರು ಫೋಟೋ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದರು. ನಂತರ ಪುತ್ತೂರು-ಸುಬ್ರಹ್ಮಣ್ಯ ರೈಲು ಬಳಕೆದಾರರು ಅದನ್ನು ಟ್ವೀಟ್ ಮಾಡಿ @RailSeva ಎಂದು ಟ್ಯಾಗ್ ಮಾಡಿದ್ದಾರೆ. ಇಲಾಖೆಯ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅತಿಕ್ರಮಣಕಾರನನ್ನು ಹಿಡಿಯಲು ಸಕಲೇಶಪುರದಿಂದ ಪುತ್ತೂರಿಗೆ ಆರ್‌ಪಿಎಫ್ ಸಿಬ್ಬಂದಿಯನ್ನು ಕಳುಹಿಸಿದ್ದಾರೆ. ಮರುದಿನವೇ ಪೊಲೀಸರು ಭಂಡಾರಿಯನ್ನು ಹುಡುಕಿದ್ದಾರೆ. ಬಾರ್ ಬಳಿ ಆತ ಬಂದಾಗ ಆತನನ್ನು ಹಿಡಿದು ಪ್ರಶ್ನಿಸಿದ್ದಾರೆ. ಈ ವೇಳೆ ಆತ ಕುಡಿದು ಹಳಿ ಮಲಗಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಆರ್ ಪಿಎಫ್ ಸಿಬ್ಬಂದಿ ತಿಳಿಸಿದ್ದಾರೆ.
ಇದನ್ನೂ ಓದಿ: ಲಾಲ್‌ಬಾಗ್: 'ಗುತ್ತಿಗೆ ಜಮೀನಿನ ನವೀಕರಣ ರದ್ದು ಮಾಡಿ' ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
ಇದು ನಿರ್ಬಂಧಿತ ಪ್ರದೇಶ ಮತ್ತು ಹಳಿಗಳ ಮೇಲೆ ಮಲಗುವುದು ರೈಲ್ವೇ ಕಾಯ್ದೆಯಡಿ ಉಲ್ಲಂಘನೆಯಾಗುತ್ತದೆ ಎಂದು ಪೊಲೀಸರು ಮನವರಿಕೆ ಮಾಡಿದ ನಂತರ ಆತ ಪೊಲೀಸರೊಂದಿಗೆ ಹೋಗಲು ಒಪ್ಪಿಕೊಂಡ. ಆತನನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ಇದು ರೈಲ್ವೆ ಕಾಯಿದೆಯ ಎರಡು ಸೆಕ್ಷನ್‌ಗಳ ಅಡಿಯಲ್ಲಿ ಅವನನ್ನು ತಪ್ಪಿತಸ್ಥನೆಂದು ಕಂಡುಬಂದ ನಂತರ ಆತನನ್ನು ಒಂದು ದಿನದ ಜೈಲಿಗೆ ಕಳುಹಿಸಿ ಮತ್ತು ರೂ 700 ದಂಡ ವಿಧಿಸಿತು.