
ಸಾಂದರ್ಭಿಕ ಚಿತ್ರ
ಬೆಂಗಳೂರು: ಕನ್ನಡ ರಾಜ್ಯೋತ್ಸವಕ್ಕೆ ಬಿಎಂಆರ್ ಸಿಎಲ್ ರಾಜ್ಯದ ಜನತೆಗೆ ಉಡುಗೊರೆ ನೀಡಿದ್ದು, ಸಿಂಗಲ್ ಟ್ರಿಪ್ ಕ್ಯೂ ಆರ್ ಟಿಕೆಟ್ ಗಳನ್ನು ವಿತರಣೆ ಮಾಡಲಿದೆ.
ನಂ.1 ರಿಂದ ಎಲ್ಲಾ ಮೆಟ್ರೊ ಸ್ಟೇಷನ್ ಗಳಲ್ಲಿ ಈ ಸೌಲಭ್ಯ ಜಾರಿಗೆ ಬರಲಿದ್ದು, ಆಂಡ್ರಾಯ್ಡ್ ಫೋನ್ ಗಳ ಮೂಲಕ ಈ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
ಕ್ಯೂಆರ್ ಕೋಡ್ ಇಲ್ಲದೇ ಇದ್ದಲ್ಲಿ ವಾಟ್ಸ್ ಆಪ್ ನಂ. 810 555 6677 ಮೂಲಕವೂ ಈ ಸೇವೆಗಳನ್ನು ಪಡೆಯಬಹುದಾಗಿದೆ.
To mark #kannadarajyothsava BMRCL will launch single trip QR code tkts from Nov 1 at all its Metro stns. Can be downloaded on phone with Android OS or can be got thru whatsapp no. 810 555 6677. Details: @XpressBengaluru @NewIndianXpress @KannadaPrabha @srivasrbmrccoi1 @KARailway pic.twitter.com/NZVSnSk2uX
— S. Lalitha (@Lolita_TNIE) October 31, 2022
ನಮ್ಮ ಮೆಟ್ರೋ ಆಪ್ ಮೂಲಕ ಕ್ಯೂ ಆರ್ ಟಿಕೆಟ್ ಗಳನ್ನು ಪಡೆಯಬಹುದಾಗಿದೆ ಅಥವಾ ವಾಟ್ಸ್ ಆಪ್ ನಂ.810 555 6677 ಗೆ hi ಎಂಬ ಸಂದೇಶ ಕಳಿಸುವ ಮೂಲಕ ಕ್ಯೂಆರ್ ಟಿಕೆಟ್ ಗಳನ್ನು ಖರೀದಿಸುವ ಪ್ರಕ್ರಿಯೆಗೆ ಚಾಲನೆ ನೀಡಬಹುದಾಗಿದೆ.
ವಾಟ್ಸ್ ಆಪ್ ಚಾಟ್‌ಬಾಟ್ ಗಳ ಮೂಲಕ ಮೆಟ್ರೋ ಸ್ಮಾರ್ಟ್ ಕಾರ್ಡ್ ಗಳನ್ನೂ ರೀಚಾರ್ಜ್ ಮಾಡಿಸಬಹುದಾಗಿದೆ ಎಂದು ಮೆಟ್ರೋ ಪ್ರಕಟಣೆಯಲ್ಲಿ ತಿಳಿಸಿದೆ.