ಮಂಗಳೂರಿನಲ್ಲಿ ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಕ್ಲಸ್ಟರ್ ಸ್ಥಾಪಿಸಲು ರಾಜ್ಯ ಸರ್ಕಾರ ಯೋಜನೆ

ರಾಜಧಾನಿ ಬೆಂಗಳೂರಿನಲ್ಲಿ ನವೆಂಬರ್ 2 ರಿಂದ ನವೆಂಬರ್4ರವರೆಗೆ 3 ದಿನಗಳ ಕಾಲ ಜಾಗತಿಕ ಹೂಡಿಕೆದಾರರ ಸಮಾವೇಶ 2022 ನಡೆಯಲಿದೆ. ಭಾರತದಲ್ಲಿ (ಹಸಿರು ಜಲಜನಕ) ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ ಎಂಬುದನ್ನು ಇದು ತೋರಿಸುತ್ತದೆ.
ವಾಣಿಜ್ಯ ಮತ್ತು ಕೈಗಾರಿಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇವಿ ರಮಣ ರೆಡ್ಡಿ
ವಾಣಿಜ್ಯ ಮತ್ತು ಕೈಗಾರಿಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇವಿ ರಮಣ ರೆಡ್ಡಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನವೆಂಬರ್ 2 ರಿಂದ ನವೆಂಬರ್4ರವರೆಗೆ 3 ದಿನಗಳ ಕಾಲ ಜಾಗತಿಕ ಹೂಡಿಕೆದಾರರ ಸಮಾವೇಶ(GIM) 2022 ನಡೆಯಲಿದೆ. ಭಾರತದಲ್ಲಿ Green Hydrogen (ಹಸಿರು ಜಲಜನಕ) ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ ಎಂಬುದನ್ನು ಇದು ತೋರಿಸುತ್ತದೆ.

ರಾಜ್ಯ ಸರ್ಕಾರ ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಕ್ಲಸ್ಟರ್ ನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ ವಿ ರಮಣ ರೆಡ್ಡಿ ತಿಳಿಸಿದ್ದಾರೆ.

ACME ಸೋಲಾರ್, ABC Cleantech, ReNew Power, Avaada, JSW Green Hydrogen, PETRONAS Hydrogen ಮತ್ತು O2 Power ಎಂಬ ಏಳು ಕಂಪನಿಗಳು ಗ್ರೀನ್ ಹೈಡ್ರೋಜನ್ ಉತ್ಪಾದನೆಗಾಗಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿವೆ. ಅವುಗಳಲ್ಲಿ ನಾಲ್ಕು ರಾಜ್ಯ ಉನ್ನತ ಮಟ್ಟದ ಸಮಿತಿಯಿಂದ ಹೂಡಿಕೆಗೆ ಅನುಮತಿ ನೀಡಲಾಗಿದ್ದು, ಮೂರು ಎಂಒಯು ಹಂತದಲ್ಲಿವೆ ಎಂದು ರೆಡ್ಡಿ ಹೇಳಿದರು.

ಒಟ್ಟು ಹೂಡಿಕೆಯ ಗಾತ್ರ ಗ್ರೀನ್  ಹೈಡ್ರೋಜನ್‌ನಲ್ಲಿ ಸುಮಾರು 1.5 ಲಕ್ಷ ಕೋಟಿ ರೂಪಾಯಿಗಳಾಗಿದ್ದು ಹೂಡಿಕೆದಾರರು ಮಂಗಳೂರು ಬಂದರಿನ ಹತ್ತಿರದ ಸ್ಥಳವನ್ನು ಕೇಳಿದ್ದಾರೆ. ಗ್ರೀನ್ ಹೈಡ್ರೋಜನ್ ನ್ನು ಗ್ರೀನ್ ಅಮ್ಮೋನಿಯಾಕ್ಕೆ ಪರಿವರ್ತಿಸಿ ರಫ್ತು ಮಾಡಬಹುದು ಎಂದು ಹೇಳಿದರು. 

ಗ್ರೀನ್ ಹೈಡ್ರೋಜನ್ ಘಟಕ ಸ್ಥಾಪನೆಗೆ ಸುಮಾರು 100ರಿಂದ 300 ಎಕರೆ ಭೂಮಿ ಅಗತ್ಯವಿದೆ. ಮುಖ್ಯ ಅವಶ್ಯಕತೆಯೆಂದರೆ ಸೌರ ಮತ್ತು ಪವನ ಶಕ್ತಿಯ ನಿಯಮಿತ ಪೂರೈಕೆಯನ್ನು ಹೊಂದಿರಬೇಕು ಅದಕ್ಕಾಗಿ ರಾಜ್ಯದಾದ್ಯಂತ ನವೀಕರಿಸಬಹುದಾದ ಇಂಧನ ಘಟಕಗಳನ್ನು ಸ್ಥಾಪಿಸುತ್ತಾರೆ. ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಅಥವಾ/ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ ಟ್ರಾನ್ಸ್‌ಮಿಷನ್ ಲೈನ್‌ಗಳ ಮೂಲಕ ಮಂಗಳೂರಿನ ಹೈಡ್ರೋಜನ್ ಸ್ಥಾವರಗಳಿಗೆ ಹಸಿರು ಶಕ್ತಿಯನ್ನು ರವಾನಿಸಲಾಗುತ್ತದೆ ಎಂದು ರೆಡ್ಡಿ ಹೇಳಿದರು.

ಯೋಜನೆಗಳು ಹಂತ-ಹಂತವಾಗಿ ಬರುತ್ತವೆ. ಕನಿಷ್ಠ ಐದರಿಂದ ಆರು ವರ್ಷಗಳ ಸಮಯ ತೆಗೆದುಕೊಳ್ಳುತ್ತದೆ. 75 ನೇ ಸ್ವಾತಂತ್ರ್ಯ ದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ಪಿಎಂ ನರೇಂದ್ರ ಮೋದಿ, ಭಾರತವನ್ನು ಉತ್ಪಾದನೆಯ ಕೇಂದ್ರವನ್ನಾಗಿ ಮಾಡುವ ಗುರಿಯೊಂದಿಗೆ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ನ್ನು ಘೋಷಿಸಿದರು, 2047ರ ಸ್ವಾತಂತ್ರ್ಯ ದಿನಾಚರಣೆ ಮೊದಲು ಹೈಡ್ರೋಡನ್ ಮತ್ತು ಇಂಧನವನ್ನು ರಫ್ತು ಮಾಡುವ ಗುರಿ ಹೊಂದಲಾಗಿದೆ ಎಂದು ಪಿಎಂ ಮೋದಿ ಹೇಳಿದ್ದರು. 

ಜಾಗತಿಕ ಪೂರೈಕೆ ಸರಪಳಿಯಲ್ಲಿ ಕರ್ನಾಟಕವು ಪ್ರಮುಖ ಪಾತ್ರವನ್ನು ವಹಿಸಲು ಸಿದ್ಧವಾಗಿದೆ. ಕೋವಿಡ್ ಸಾಂಕ್ರಾಮಿಕವು ಜಾಗತಿಕ ಪೂರೈಕೆ ಸರಪಳಿಯನ್ನು ಅಡ್ಡಿಪಡಿಸುವುದರೊಂದಿಗೆ, ಪ್ರಸ್ತುತ ಭೌಗೋಳಿಕ-ರಾಜಕೀಯ ಸನ್ನಿವೇಶದಲ್ಲಿ  ಕರ್ನಾಟಕವನ್ನು ಅತ್ಯುತ್ತಮ ತಾಣವಾಗಿ ಪ್ರದರ್ಶಿಸಲು ಹಿಂದೆಂದಿಗಿಂತಲೂ ಈಗ ಹೆಚ್ಚು ಮುಖ್ಯವಾಗಿದೆ.

ಹೀಗಾಗಿ, ಜಿಐಎಂನ ಈ ಆವೃತ್ತಿಯು ಜಾಗತಿಕ ಪೂರೈಕೆ ಸರಪಳಿಯಲ್ಲಿ ಕರ್ನಾಟಕವು ವಹಿಸುವ ಪಾತ್ರವನ್ನು ಪ್ರತಿಬಿಂಬಿಸುವ 'ಬಿಲ್ಡ್ ಫಾರ್ ದ ವರ್ಲ್ಡ್' ಎಂಬ ವಿಷಯದಡಿಯಲ್ಲಿದೆ ಎಂದು ಅವರು ಹೇಳಿದರು.

"ಕರ್ನಾಟಕವು ಈಗಾಗಲೇ ಶ್ರೀಮಂತ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ESDM) ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಇಂಟೆಲ್, ಕ್ವಾಲ್ಕಾಮ್, NVIDIA, ಅಪ್ಲೈಡ್ ಮೆಟೀರಿಯಲ್ಸ್, AMD, ಇತ್ಯಾದಿಗಳಂತಹ 85 ಕ್ಕೂ ಹೆಚ್ಚು ಫ್ಯಾಬ್ಲೆಸ್ ಚಿಪ್ ವಿನ್ಯಾಸದೊಂದಿಗೆ ಭಾರತದಲ್ಲಿ ಅತಿದೊಡ್ಡ ಚಿಪ್ ವಿನ್ಯಾಸ ಕೇಂದ್ರವಾಗಿದೆ. ಎಲೆಕ್ಟ್ರಾನಿಕ್ ವಿನ್ಯಾಸದಲ್ಲಿ ರಾಷ್ಟ್ರೀಯ ಪಾಲು, ಮುಂಬರುವ ಈವೆಂಟ್‌ನಲ್ಲಿ ಸೆಮಿಕಂಡಕ್ಟರ್ ಮತ್ತು ಇತರ ESDM ಉತ್ಪಾದನಾ ಹೂಡಿಕೆಗಳನ್ನು ಆಕರ್ಷಿಸಲು ನಾವು ಆದ್ಯತೆ ನೀಡಿದ್ದೇವೆ ಎಂದು ರಮಣ ರೆಡ್ಡಿ ಹೇಳಿದರು.

ಏನಿದು ಗ್ರೀನ್ ಹೈಡ್ರೋಜನ್: ಗ್ರೀನ್ ಹೈಡ್ರೋಜ್ ನವೀಕರಿಸಬಹುದಾದ ಶಕ್ತಿ ಅಥವಾ ಪ್ರಕ್ರಿಯೆಗಳನ್ನು ಬಳಸಿ ಉತ್ಪಾದಿಸಿದಾಗ ಹೈಡ್ರೋಜನ್ ನ್ನು ನವೀಕರಿಸಬಹುದಾದ ಶಕ್ತಿಯಂತೆ ಅಗತ್ಯ ಸಮಯದಲ್ಲಿ ಬಳಸಲು ಸಂಗ್ರಹಿಸಲು ಒಂದು ವಿಧಾನವಾಗಿದೆ. ಹೈಡ್ರೋಜನ್ ಶಕ್ತಿಯನ್ನು ಗ್ಯಾಸ್ ರೂಪದಲ್ಲಿ ಇಲ್ಲವೇ ನೈಸರ್ಗಿಕ ಅನಿಲ ಪೈಪ್‌ಗಳ ಮೂಲಕವೂ ತಲುಪಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com