ಚುನಾವಣೆ ಹೊಸ್ತಿಲಿನಲ್ಲಿ ಕರ್ನಾಟಕ: ಬೆಂಗಳೂರು, ಜಿಲ್ಲೆಗಳ ಅಭಿವೃದ್ಧಿ ಹೇಗಿದೆ, ಸರ್ಕಾರದ ಮುಂದಿರುವ ಸವಾಲುಗಳೇನು?

2023 ರ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಮಾತ್ರ ಬಾಕಿ.ಆಡಳಿತ ಪಕ್ಷ-ಪ್ರತಿಪಕ್ಷ ನಾಯಕರ ಆರೋಪ-ಪ್ರತ್ಯಾರೋಪಗಳು ಸಾಗುತ್ತಲೇ ಇವೆ.
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: 2023 ರ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಮಾತ್ರ ಬಾಕಿ.ಆಡಳಿತ ಪಕ್ಷ-ಪ್ರತಿಪಕ್ಷ ನಾಯಕರ ಆರೋಪ-ಪ್ರತ್ಯಾರೋಪಗಳು ಸಾಗುತ್ತಲೇ ಇವೆ.

ಈ ಮಧ್ಯೆ, ಮುಂದಿನ ಕೆಲವು ದಿನಗಳಲ್ಲಿ ಹೂಡಿಕೆದಾರರ ಸಭೆ ಮತ್ತು ಟೆಕ್ ಶೃಂಗಸಭೆಯಲ್ಲಿ ಭಾಗವಹಿಸುವ ಉನ್ನತ ಮಟ್ಟದ ಉದ್ಯಮಿಗಳಿಗೆ ನಮ್ಮ ಬೆಂಗಳೂರು ಆತಿಥ್ಯ ವಹಿಸಲಿದೆ. ಈ ವೇದಿಕೆಗಳು ರಾಜ್ಯ ಸರ್ಕಾರಕ್ಕೆ ಅಭಿವೃದ್ಧಿಯ ಫಲವನ್ನು ರಾಜ್ಯದಾದ್ಯಂತ ಹರಡಲು ಮತ್ತು ಬೆಂಗಳೂರಿನಿಂದ ಆಚೆಗೆ ಹೂಡಿಕೆಗಳನ್ನು ಮಾಡಲು ಅವಕಾಶವನ್ನು ನೀಡಲಿದೆ. 

ಕೌಶಲ್ಯಯುತ ಮಾನವ ಸಂಪನ್ಮೂಲ, ಉತ್ಸಾಹಿ ಸ್ಟಾರ್ಟ್-ಅಪ್ ಗಳು, ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆ, ಅನುಕೂಲಕರ ವಾತಾವರಣ ಮತ್ತು ಯಾರು ಬೇಕಾದರೂ ಬೆಂಗಳೂರಿಗೆ ಬಂದು ಹೂಡಿಕೆ ಮಾಡಬಹುದು, ಇಲ್ಲಿ ಪ್ರಗತಿ ಸಾಧಿಸಬಹುದು ಎಂಬ ಅಭಿಪ್ರಾಯಗಳು ಇದಕ್ಕೆ ಕಾರಣವಾಗಿದೆ. ಇಂದು ಬೆಂಗಳೂರು ನಗರ ಹಲವು ಮೂಲಭೂತ ಸೌಲಭ್ಯ, ರಸ್ತೆ, ನಾಗರಿಕ ವ್ಯವಸ್ಥೆ, ಸಮುದಾಯ ವಿಷಯಗಳಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಕೂಡ ದೇಶದಲ್ಲಿ ಹೂಡಿಕೆ, ವ್ಯಾಪಾರ, ವಹಿವಾಟು, ಉದ್ಯಮಕ್ಕೆ ಪ್ರಶಸ್ತ ನಗರ ಎಂಬ ಉನ್ನತ ನಗರಗಳ ಪಟ್ಟಿಯಲ್ಲಿದೆ.

ಬೆಂಗಳೂರಿನಿಂದಾಚೆಗೆ ಎಂಬ ಅಭಿಯಾನ ಪರಿಣಾಮಕಾರಿಯಾಗಿ ಜಾರಿಯಾಗುತ್ತಿದೆ. ರಾಜ್ಯದಲ್ಲಿ ಬಹುತೇಕ ಕೈಗಾರಿಕೆಗಳು ಬೆಂಗಳೂರು ಸುತ್ತಮುತ್ತ ಕೇಂದ್ರೀಕೃತವಾಗಿದೆ. ಇದರ ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಮಂಗಳೂರು, ಮೈಸೂರು ಮತ್ತು ಬೆಳಗಾವಿ ಜಿಲ್ಲೆಗಳು ಹೂಡಿಕೆಗೆ ಪ್ರಶಸ್ತ ಸ್ಥಳಗಳು ಎಂಬ ಅಭಿಪ್ರಾಯಗಳು ಮೂಡುತ್ತಿವೆ. ಧಾರವಾಡದಲ್ಲಿರುವ ಅತಿ ವೇಗದ ಗ್ರಾಹಕ ವಸ್ತುಗಳು(FMCG) ಮತ್ತು ಕೊಪ್ಪಳದ ಟಾಯ್ಸ್ ಕ್ಲಸ್ಟರ್ ಜಿಲ್ಲೆಗಳ ಸುತ್ತಮುತ್ತ ಆರ್ಥಿಕ ವೃದ್ಧಿಗೆ ಸಹಾಯ ಮಾಡಬಹುದು.

ಆದರೆ ಕರ್ನಾಟಕದ ಎಲ್ಲಾ ಜಿಲ್ಲೆಗಳು ಸಮಾನವಾಗಿ ಅಭಿವೃದ್ಧಿ ಹೊಂದುತ್ತಿಲ್ಲ, ಕೆಲವು ಜಿಲ್ಲೆಗಳು ಬಹಳ ಹಿಂದುಳಿದಿವೆ ಎಂಬ ಆರೋಪ, ಕೂಗು ಕೇಳಿಬರುತ್ತಲೇ ಇದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಕೆಲವು ಉತ್ಪಾದನಾ ಕೈಗಾರಿಕೆಗಳಿದ್ದು ಹೆಚ್ಚಿನ ಉದ್ಯೋಗವಕಾಶಕ್ಕೆ, ಆರ್ಥಿಕತೆ ಬೆಳವಣಿಗೆಗೆ ಮತ್ತು ಬೃಹತ್ ಸಂಖ್ಯೆಯಲ್ಲಿ ಜಿಲ್ಲೆಗಳ ಹಳ್ಳಿ ಪ್ರದೇಶಗಳಿಂದ ಜನರು ನಗರಗಳತ್ತ ಗುಳೆ ಹೋಗುವುದನ್ನು ತಡೆದಿದೆ. ಕೌಶಲ್ಯಭರಿತ ವೃತ್ತಿಪರರು ಬೆಂಗಳೂರು ಮತ್ತು ಇತರ ಪ್ರಮುಖ ನಗರಗಳಿಗೆ ವಲಸೆ ಹೋಗುವುದನ್ನು ಇದು ತಡೆದಿದೆ.

ಬಳ್ಳಾರಿಯ ಕಲ್ಲಿದ್ದಲು ಗಣಿ,ಕಲಬುರಗಿಯ ಸುಣ್ಣದ ಕಲ್ಲಿನ ಕಾರ್ಖಾನೆ, ಯಾದಗಿರಿ ಜಿಲ್ಲೆಯಲ್ಲಿ ತಲೆಯೆತ್ತಲಿರುವ ಫಾರ್ಮಕ್ಯುಟಿಕಲ್ ಕ್ಲಸ್ಟರ್ ಮತ್ತು ಇಲ್ಲಿನ ಭರವಸೆಯ ಆಶಾಕಿರಣವಾಗಿರುವ ತಲೆಯೆತ್ತಲಿರುವ ಟೆಕ್ಸ್ ಟೈಲ್ ಪಾರ್ಕ್ ಸ್ವಲ್ಪ ಮಟ್ಟಿಗೆ ಜಿಲ್ಲೆಗಳ ಬೆಳವಣಿಗೆಗೆ ಸಹಾಯ ಮಾಡಬಹುದು.

ಉತ್ತಮ ಸಂಪರ್ಕ ಹೊಂದಿದ ರೈಲು, ರಸ್ತೆ ಮತ್ತು ವಾಯು ಸಂಪರ್ಕ ಸೇವೆಗಳೊಂದಿಗೆ ಈ ಪ್ರದೇಶದಲ್ಲಿ ಮೂಲ ಸೌಕರ್ಯ ಮತ್ತು ಸಂಪರ್ಕವು ಕಳೆದ ಕೆಲವು ವರ್ಷಗಳಲ್ಲಿ ತೀವ್ರ ಸುಧಾರಣೆಯನ್ನು ಕಂಡಿದೆ. ಕಲಬುರ್ಗಿ ಈಗ ದೇಶೀಯ ವಿಮಾನ ನಿಲ್ದಾಣವನ್ನು ಹೊಂದಿದೆ, ಆದರೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕೊರತೆಯಿದೆ.

ಬೀದರ್‌ನಿಂದ ಕೇವಲ 150 ಕಿಮೀ ದೂರದಲ್ಲಿರುವ ಹೈದರಾಬಾದ್‌ನಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಲ್ಯಾಣ-ಕರ್ನಾಟಕದ ಸಾಮೀಪ್ಯವನ್ನು ರಾಜ್ಯವು ಬಳಸಿಕೊಳ್ಳಬಹುದು. ನೆರೆಯ ಆಂಧ್ರಪ್ರದೇಶದ ಅನೇಕ ಪ್ರದೇಶಗಳು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಿಂದ ಪ್ರಯೋಜನ ಪಡೆದಿವೆ, ಆದರೆ ತಮಿಳುನಾಡಿನ ಕೈಗಾರಿಕಾ ಪ್ರದೇಶಗಳು ಸಹ ಬೆಂಗಳೂರಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಮೂಲಕ ತ್ವರಿತ ಅಭಿವೃದ್ಧಿಯನ್ನು ಕಂಡಿವೆ.

ಹೂಡಿಕೆದಾರರನ್ನು ಆಕರ್ಷಿಸಲು, ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಭೂಸ್ವಾಧೀನ ಪ್ರಕ್ರಿಯೆಯನ್ನು ಸರಳಗೊಳಿಸಲು ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇತ್ತೀಚಿನ ನೀತಿ ಉಪಕ್ರಮಗಳಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾಲಿಸಿ, ಡೇಟಾ ಸೆಂಟರ್ ನೀತಿ ಮತ್ತು ನವೀಕರಿಸಬಹುದಾದ ಇಂಧನ ನೀತಿ ಸೇರಿವೆ. ಮೇಲ್ಮಟ್ಟದಲ್ಲಿ ಸರಿಯಾದ ವ್ಯವಸ್ಥೆಗಳನ್ನು ಅಳವಡಿಸಲಾಗಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳು ಸಂಪರ್ಕ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಕೆಲಸ ಮಾಡುವ ವಿಷಯದಲ್ಲಿ ಕೆಲವು ಸವಾಲುಗಳನ್ನು ಎದುರಿಸುತ್ತವೆ.

ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಯೂ ಪ್ರಮುಖ ಸವಾಲಾಗಿ ಮುಂದುವರಿದಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಕಠಿಣ ಸಮಯವನ್ನು ಎದುರಿಸಿವೆ. ಟಿವಿ ಮೋಹನ್ ದಾಸ್ ಪೈ ಮತ್ತು 3one4 ಕ್ಯಾಪಿಟಲ್‌ನ ನಿಶಾ ಹೊಳ್ಳ ಅವರು ರಚಿಸಿರುವ “ಕರ್ನಾಟಕ: ಎ $1 ಟ್ರಿಲಿಯನ್ ಜಿಡಿಪಿ ವಿಷನ್” ಎಂಬ ಇತ್ತೀಚೆಗೆ ಬಿಡುಗಡೆಯಾದ ವರದಿಯು ಉತ್ತರ ಮತ್ತು ದಕ್ಷಿಣ ಕರ್ನಾಟಕದ ನಡುವಿನ ದೊಡ್ಡ ಅಸಮಾನತೆಯನ್ನು ರಾಜ್ಯದ ಮುಂದಿರುವ ಸವಾಲುಗಳನ್ನು ಒತ್ತಿಹೇಳುತ್ತಿವೆ. 

"ಇನ್ವೆಸ್ಟ್ ಕರ್ನಾಟಕ 2022 - ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್" ಸಮಯದಲ್ಲಿ ಸರ್ಕಾರವು 5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಲ್ಲಿರುವುದರಿಂದ, ಇದುವರೆಗೆ ದೊಡ್ಡ ಹೂಡಿಕೆಗಳನ್ನು ಸ್ವೀಕರಿಸದ ಜಿಲ್ಲೆಗಳು ಸೇರಿದಂತೆ ಅನೇಕ ಜಿಲ್ಲೆಗಳು ಸರ್ಕಾರದಿಂದ ನಿರೀಕ್ಷೆಯಿಟ್ಟಿವೆ. ರಾಜ್ಯಾದ್ಯಂತ ಕೈಗಾರಿಕವಾಗಿ ಹಿಂದುಳಿದ ಜಿಲ್ಲೆಗಳಿಗೂ ಸಹ ಹೂಡಿಕೆಗಳನ್ನು ಹರಡಲು ತನ್ನ ನೀತಿಗಳು ಮತ್ತು ಉಪಕ್ರಮಗಳನ್ನು ಮುಂದುವರಿಸಲು ಸರ್ಕಾರವು ತನ್ನ ರಾಜಕೀಯ ಸಂಕಲ್ಪ ಮತ್ತು ಆರ್ಥಿಕ ಬುದ್ಧಿವಂತಿಕೆಯನ್ನು ತೋರಿಸಬೇಕಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com