ಬೆಂಗಳೂರು: ಹೋಟೆಲ್ ಉದ್ಯಮಿ ಮತ್ತು ಚಿಕ್ಕಪ್ಪನ ಅಪಹರಣ, ಕಿರುಕುಳ; ನಗದು ಚಿನ್ನಾಭರಣ ದರೋಡೆ
ಉತ್ತರಹಳ್ಳಿ ಮುಖ್ಯರಸ್ತೆಯ ಬ್ರಿಗೇಡ್ ರೆಸಿಡೆನ್ಸಿ ಬಳಿ 45 ವರ್ಷದ ಹೊಟೇಲ್ ಉದ್ಯಮಿ ಮತ್ತು ಅವರ ಚಿಕ್ಕಪ್ಪನನ್ನು 10 ಡಕಾಯಿತರ ತಂಡವು ಅಪಹರಿಸಿ ಸುಮಾರು ಐದು ಗಂಟೆಗಳ ಚಿತ್ರಹಿಂಸೆಯ ನಂತರ ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.
Published: 08th September 2022 01:27 PM | Last Updated: 08th September 2022 04:10 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಉತ್ತರಹಳ್ಳಿ ಮುಖ್ಯರಸ್ತೆಯ ಬ್ರಿಗೇಡ್ ರೆಸಿಡೆನ್ಸಿ ಬಳಿ 45 ವರ್ಷದ ಹೊಟೇಲ್ ಉದ್ಯಮಿ ಮತ್ತು ಅವರ ಚಿಕ್ಕಪ್ಪನನ್ನು 10 ಡಕಾಯಿತರ ತಂಡವು ಅಪಹರಿಸಿ ಸುಮಾರು ಐದು ಗಂಟೆಗಳ ಚಿತ್ರಹಿಂಸೆಯ ನಂತರ ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ. ಈ ವೇಳೆ ನಗದು ಹಾಗೂ ಸುಮಾರು 5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.
ಕನಕಪುರ ಮುಖ್ಯರಸ್ತೆಯಲ್ಲಿ ರೆಸ್ಟೋರೆಂಟ್ ನಡೆಸುತ್ತಿರುವ ಮತ್ತು ಬೈರಪ್ಪ ಬ್ಲಾಕ್ ನಿವಾಸಿಯಾಗಿರುವ ಪಿ ಕೃಷ್ಣ ಮೂರ್ತಿ ತಮ್ಮ ಚಿಕ್ಕಪ್ಪ ಗುರುಮಲ್ಲೇಗೌಡ (51) ಅವರೊಂದಿಗೆ ಎಸ್‌ಯುವಿಯಲ್ಲಿ ಮನೆಗೆ ಮರಳುತ್ತಿದ್ದರು ಜೊತೆಗೆ ಆ ದಿನ ಸಂಪಾದನೆಯಾಗಿದ್ದ 2.4 ಲಕ್ಷ ರೂಪಾಯಿಯನ್ನು ತಮ್ಮೊಡನೆ ತೆಗೆದುಕೊಂಡು ಹೋಗುತ್ತಿದ್ದರು.
ಮಧ್ಯರಾತ್ರಿಯ ಸುಮಾರಿಗೆ ಎರಡು ನಾಲ್ಕು ಚಕ್ರದ ವಾಹನಗಳಲ್ಲಿ ಬಂದ ಆರೋಪಿಗಳು ಸಂತ್ರಸ್ತರ ಎಸ್‌ಯುವಿಗೆ ಡಿಕ್ಕಿ ಹೊಡೆದಿದ್ದಾರೆ. ಐವರು ದರೋಡೆಕೋರರು ಕಾರಿನೊಳಗೆ ಪ್ರವೇಶಿಸಿ, ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರನ್ನು ಬಿಡುಗಡೆ ಮಾಡಲು 1 ಕೋಟಿ ರೂಪಾಯಿ ಹಣಕ್ಕೆ ಒತ್ತಾಯಿಸಿದರು, ಹಣ ನೀಡಿದದ್ದರೇ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದರು. ಮೂರ್ತಿ ಅವರು ಉಸಿರಾಡಲು ಹೆಣಗಾಡುತ್ತಿರುವಂತೆ ನಟಿಸಿದ್ದಾರೆ, ಆತ ಸಾಯುತ್ತಾನೆಂಬ ಭಯದಿಂದ ಆರೋಪಿಗಳು ಬೆಳಗ್ಗೆ 5 ಗಂಟೆ ಸುಮಾರಿಗೆ ಬೆಂಗಳೂರು-ಮೈಸೂರು ರಸ್ತೆಯ ಕೈಗಾರಿಕಾ ಪ್ರದೇಶದ ಬಳಿ ಅವರನ್ನು ಬಿಟ್ಟು ತೆರಳಿದ್ದಾರೆ.
ಇದನ್ನೂ ಓದಿ: ಉದ್ಯಮಿ ಪುತ್ರನ ಅಪಹರಣ, 4 ಕೋಟಿ ರೂ. ಗೆ ಬೇಡಿಕೆ: ಚಾರಿಟಿ ಮುಖ್ಯಸ್ಥೆ ಸೇರಿ ಇಬ್ಬರ ಬಂಧನ
ಭಾರೀ ಮಳೆಯ ನಡುವೆಯೇ ವಾಹನ ಚಲಾಯಿಸಿದ ಆರೋಪಿಗಳು, ಹಣ ಕೊಡಿಸಲು ಕುಟುಂಬಸ್ಥರಿಗೆ ಕರೆ ಮಾಡುವಂತೆ ಸಂತ್ರಸ್ತೆರಿಗೆ ಒತ್ತಾಯಿಸಿದ್ದಾರೆ, ಪೊಲೀಸರು ಪತ್ತೆ ಹಚ್ಚಬಹುದೆಂಬ ಭಯದಿಂದ ಮನಸ್ಸು ಬದಲಾಯಿಸಿದ್ದಾರೆ, ಎಲ್ಲಾ ಪುರುಷರು ಕನ್ನಡದಲ್ಲಿ ಮಾತನಾಡುತ್ತಿದ್ದರು ಎಂದು ವರದಿಯಾಗಿದೆ.
ಆರಂಭದಲ್ಲಿ ಸಂತ್ರಸ್ತರ ಹೇಳಿಕೆ ಬಗ್ಗೆ ಪೊಲೀಸರು ಶಂಕೆ ವ್ಯಕ್ತ ಪಡಿಸಿದರು. ನಂತರ ಇದು ನಿಜವಾದ ಪ್ರಕರಣದಂತೆ ತೋರುತ್ತಿದೆ ಎಂದು ಹೇಳಿದರು. ದೂರಿನ ಹಿಂದೆ ಯಾವುದೇ ಅವ್ಯವಹಾರವಿಲ್ಲ. ಹೋಟೆಲ್ ಉದ್ಯಮಿ ಮತ್ತು ಅವರ ಚಿಕ್ಕಪ್ಪನನ್ನು ದರೋಡೆ ಮಾಡಲಾಗಿದೆ. ಹೊಟೇಲ್ ಮಾಲೀಕನಿಗೆ ಹೊಡೆದು ಒದ್ದಿದ್ದರಿಂದ ಗಾಯಗಳಾಗಿವೆ. ಆರೋಪಿಗಳು ಹಾಗೂ ಅವರು ಬಳಸಿದ ವಾಹನಗಳ ವಿವರಗಳಿಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಇನ್ನೂ ಯಾರನ್ನೂ ಬಂಧಿಸಿಲ್ಲ' ಎಂದು ಡಿವೈಎಸ್ಪಿ ಬಿ.ಎಸ್.ಮೋಹನ್ ಕುಮಾರ್ ತಿಳಿಸಿದರು.