ಖನಿಜ ನಿಕ್ಷೇಪಗಳ ಶೋಧನೆಗೆ ಕೇಂದ್ರದ ಹೆಚ್ಚಿನ ಸಹಕಾರ ಅಗತ್ಯ- ಹಾಲಪ್ಪ ಆಚಾರ್

ರಾಜ್ಯದಲ್ಲಿ ವಿಫುಲ ಖನಿಜ ನಿಕ್ಷೇಪಗಳಿದ್ದು, ಅವುಗಳ ಶೋಧನೆಗೆ ಕೇಂದ್ರ ಗಣಿ ಸಚಿವಾಲಯ ಹಾಗೂ ಕೇಂದ್ರ ಖನಿಜ ಶೋಧನಾ ಟ್ರಸ್ಟ್ ನ ಸಹಕಾರ ಅಗತ್ಯವಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಹಾಲಪ್ಪ ಆಚಾರ್ ಮತ್ತಿತರರು
ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಹಾಲಪ್ಪ ಆಚಾರ್ ಮತ್ತಿತರರು

ಬೆಂಗಳೂರು: ರಾಜ್ಯದಲ್ಲಿ ವಿಫುಲ ಖನಿಜ ನಿಕ್ಷೇಪಗಳಿದ್ದು, ಅವುಗಳ ಶೋಧನೆಗೆ ಕೇಂದ್ರ ಗಣಿ ಸಚಿವಾಲಯ ಹಾಗೂ ಕೇಂದ್ರ ಖನಿಜ ಶೋಧನಾ ಟ್ರಸ್ಟ್ ನ ಸಹಕಾರ ಅಗತ್ಯವಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.

ಹೈದ್ರಾಬಾದ್ ನಲ್ಲಿ ಇಂದು ಪ್ರಾರಂಭವಾದ ರಾಷ್ಟ್ರೀಯ ಗಣಿಗಾರಿಕೆ ಸಚಿವರ ಸಮಾವೇಶದಲ್ಲಿ ಮಾತನಾಡಿದ ಅವರು,  ಕರ್ನಾಟಕ ಲೈಮ್ ಸ್ಟೋನ್ ಗಣಿಗಾರಿಕೆಯಲ್ಲಿ  ದೇಶದಲ್ಲೇ ಮೊದಲ ಸ್ಥಾನ ಹಾಗೂ ಕಬ್ಬಿಣದ ಅದಿರಿನ  ಗಣಿಗಾರಿಕೆಯಲ್ಲಿ ಎರಡನೇ ಸ್ಥಾನವನ್ನು  ಪಡೆದಿದೆ. 2021-22ರಲ್ಲಿ ರಾಜ್ಯ ಸರ್ಕಾರ ಗಣಿಗಾರಿಕೆಯಿಂದ 6,308 ಕೋಟಿ ರೂಪಾಯಿ ಹಾಗೂ ಪ್ರಸ್ತುತ ಸಾಲಿನಲ್ಲಿ ಜುಲೈ ವರೆಗೂ 1,425 ಕೋಟಿ ರೂಪಾಯಿ  ಆದಾಯ ಸಂಗ್ರಹಿಸಿರುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಇನ್ನೂ ಹೆಚ್ಚಿನ ಖನಿಜ ನಿಕ್ಷೇಪಗಳಿದ್ದು, ಅವುಗಳ ಶೋಧನೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ  ಈಗಾಗಲೇ 113 ಭೂ ವಿಜ್ಞಾನಿಗಳನ್ನು ನೇಮಕ ಮಾಡಲಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು  ಕೇಂದ್ರ ಗಣಿ ಸಚಿವಾಲಯ ಹಾಗೂ ಕೇಂದ್ರ ಖನಿಜ ಶೋಧನಾ ಟ್ರಸ್ಟ್ ನ ಸಹಕಾರದ ಅಗತ್ಯವಿದೆ ಎಂದರು.

ರಾಷ್ಟ್ರೀಯ ಗಣಿಗಾರಿಕೆ  ಮಂತ್ರಿಗಳ ಸಮಾವೇಶದಲ್ಲಿ ಕರ್ನಾಟಕ ರಾಜ್ಯ ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ಅಳವಡಿಸಿಕೊಂಡಿರುವ ನೂತನ ತಂತ್ರಜ್ಞಾನ ಹಾಗೂ ಕೇಂದ್ರ ಗಣಿ ನೀತಿ ಮೂಲಕ ಗಣಿ ಬ್ಲಾಕ್ ಗಳನ್ನು ಹರಾಜು ಮಾಡುವ ನಿಟ್ಟಿನಲ್ಲಿ ದೇಶದಲ್ಲಿ ಎರಡನೇ ಸ್ಥಾನ ಹೊಂದಿರುವ  ಬಗ್ಗೆ ಶ್ಲಾಘನೆ ವ್ಯಕ್ತವಾಯಿತು. ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ, ದೇಶದ ಹಲವು ರಾಜ್ಯಗಳ ಗಣಿ ಇಲಾಖೆ ಸಚಿವರು ಸಮಾವೇಶದಲ್ಲಿ ಪಾಲ್ಗೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com