ಅ.13 ರಿಂದ ವಿಶ್ವವಿಖ್ಯಾತ ಹಾಸನಾಂಬ ದೇಗುಲ 11 ದಿನಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಮುಕ್ತ

ವಿಶ್ವವಿಖ್ಯಾತ, ವರ್ಷಕ್ಕೆ ನಿರ್ದಿಷ್ಟ ದಿನಗಳಲ್ಲಿ ಮಾತ್ರ ಸಾರ್ವಜನಿಕ ದರ್ಶನಕ್ಕೆ ಲಭ್ಯವಾಗುವ ಹಾಸನಾಂಬ ದೇವಾಲಯ ಈ ವರ್ಷ ಅ.13 ರಿಂದ 11 ದಿನಗಳ ಕಾಲ ತೆರೆಯಲಿದೆ.
ಹಾಸನಾಂಬ ದೇವಾಲಯ
ಹಾಸನಾಂಬ ದೇವಾಲಯ

ಹಾಸನ: ವಿಶ್ವವಿಖ್ಯಾತ, ವರ್ಷಕ್ಕೆ ನಿರ್ದಿಷ್ಟ ದಿನಗಳಲ್ಲಿ ಮಾತ್ರ ಸಾರ್ವಜನಿಕ ದರ್ಶನಕ್ಕೆ ಲಭ್ಯವಾಗುವ ಹಾಸನಾಂಬ ದೇವಾಲಯ ಈ ವರ್ಷ ಅ.13 ರಿಂದ 11 ದಿನಗಳ ಕಾಲ ತೆರೆಯಲಿದೆ.

ಚುನಾಯಿತ ಪ್ರತಿನಿಧಿಗಳು, ಮುಜರಾಯಿ ಅಧಿಕಾರಿಗಳು, ಅರ್ಚಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಅ.13 ರಿಂದ ದೇವಾಲಯದ ಬಾಗಿಲು ತೆರೆಯಲಿದ್ದು, ದೇಗುವ ತೆರೆಯುವ ದಿನ ಹಾಗೂ ಮುಚ್ಚುವ ದಿನದಂದು ಭಕ್ತಾದಿಗಳಿಗೆ ದರ್ಶನ ಇರುವುದಿಲ್ಲ.

ವರದಿಗಾರರೊಂದಿಗೆ ಮಾತನಾಡಿರುವ ಹಾಸನ ಶಾಸಕ ಪ್ರೀತಂ ಜೆ ಗೌಡ, ಪ್ರವೇಶ ವ್ಯವಸ್ಥೆಯನ್ನು ಸುಗಮಗೊಳಿಸುವುದಕ್ಕೆ ಹಾಗೂ ಜನದಟ್ಟಣೆಯನ್ನು ನಿರ್ವಹಿಸುವುದಕ್ಕಾಗಿ ಕ್ರಮಗಳನ್ನು ಕೈಗೊಳ್ಳುತ್ತೇವೆ.

ಈ ಸಂಬಂಧ ಜಿಲ್ಲಾಡಳಿತ ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಲಿದೆ ಎಂದೂ ಅವರು ಮಾಹಿತಿ ನೀಡಿದ್ದು, ವಿಶೇಷ ಪ್ರವೇಶಕ್ಕೆ ಶುಲ್ಕ ಹಾಗೂ ವಿಶೇಷ ಪಾಸ್ ಗಳ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ನೇತೃತ್ವದಲ್ಲಿ ನಡೆಯಲಿರುವ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.

ಅ.26 ವರೆಗೆ ದೇವಾಲಯ 24X7 ಸಾರ್ವಜನಿಕರಿಗೆ ಮುಕ್ತವಾಗಿರಲಿದೆ, ಅರ್ಚನೆ ಹಾಗೂ ಪ್ರಸಾದ ವಿತರಣೆ ಸಂದರ್ಭದಲ್ಲಿ ಮಾತ್ರ ಬಾಗಿಲು ಮುಚ್ಚಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com