ಪಂಪ್‌ಹೌಸ್‌ಗೆ ವಿದ್ಯುತ್ ಕಡಿತಗೊಳಿಸಿ ಪ್ರವಾಹದ ನಡುವೆ ಜೀವಗಳನ್ನು ಉಳಿಸಿದ ಕರ್ನಾಟಕದ ಇಂಜಿನಿಯರ್!

ಕಳೆದ ವಾರಾಂತ್ಯದಲ್ಲಿ ಶಿಂಷಾ ನದಿಯಲ್ಲಿ ನೀರು ಹೆಚ್ಚಾಗುತ್ತಿದ್ದಂತೆ ಮಂಡ್ಯ ಜಿಲ್ಲೆಯ ತೊರೈಕಾಡನಹಳ್ಳಿ (ಟಿ.ಕೆ.ಹಳ್ಳಿ) ಪಂಪ್‌ಹೌಸ್‌ನಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಅವರ ತಂಡ ಕೈಗೊಂಡ ತ್ವರಿತ ಮತ್ತು ನಿರ್ಣಾಯಕ ನಿರ್ಧಾರದಿಂದ ಹಲವಾರು ಜೀವಗಳು ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಉಪಕರಣಗಳು ಉಳಿದಿವೆ.
ಕಾರ್ಯನಿರ್ವಾಹಕ ಎಂಜಿನಿಯರ್ ನರೇಶ್
ಕಾರ್ಯನಿರ್ವಾಹಕ ಎಂಜಿನಿಯರ್ ನರೇಶ್

ಮಂಡ್ಯ: ಕಳೆದ ವಾರಾಂತ್ಯದಲ್ಲಿ ಶಿಂಷಾ ನದಿಯಲ್ಲಿ ನೀರು ಹೆಚ್ಚಾಗುತ್ತಿದ್ದಂತೆ ಮಂಡ್ಯ ಜಿಲ್ಲೆಯ ತೊರೈಕಾಡನಹಳ್ಳಿ (ಟಿ.ಕೆ.ಹಳ್ಳಿ) ಪಂಪ್‌ಹೌಸ್‌ನಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಅವರ ತಂಡ ಕೈಗೊಂಡ ತ್ವರಿತ ಮತ್ತು ನಿರ್ಣಾಯಕ ನಿರ್ಧಾರದಿಂದ ಹಲವಾರು ಜೀವಗಳು ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಬಿಡಬ್ಲ್ಯುಎಸ್‌ಎಸ್‌ಬಿ) ಕೋಟ್ಯಂತರ ರೂಪಾಯಿ ಮೌಲ್ಯದ ಉಪಕರಣಗಳು ಉಳಿದಿವೆ.

ಬಿ.ಕೆ. ನರೇಶ್ ಅವರು ಸೆಪ್ಟೆಂಬರ್ 5 ರಂದು ತಮ್ಮ ಅಧಿಕೃತ ಕ್ವಾರ್ಟರ್ಸ್‌ನಲ್ಲಿ ಮಲಗಿದ್ದರು. ಈ ವೇಳೆ ಶಿಂಶಾ ನದಿ ಅಪಾಯಕಾರಿಯಾಗಿ ಏರುತ್ತಿರುವ ನೀರಿನ ಬಗ್ಗೆ ಮತ್ತು ಪಂಪ್‌ಹೌಸ್‌ನಲ್ಲಿ ಪ್ರವಾಹ ಉಂಟಾದ ಬಗ್ಗೆ ಅವರ ಸಹೋದ್ಯೋಗಿಯಿಂದ ಬೆಳಿಗ್ಗೆ 4 ಗಂಟೆಗೆ ಕರೆ ಬಂದಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅವರು ಎಲ್ಲಾ ಪಂಪ್‌ಗಳನ್ನು ಸ್ವಿಚ್ ಆಫ್ ಮಾಡಲು ನಿರ್ಧರಿಸಿದರು.

40 ವರ್ಷದ ನರೇಶ್ ಕಾವೇರಿ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, 'ನನ್ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೆಎಸ್ ಕಾರ್ತಿಕ್ ಮತ್ತು ನಾನು ಸಂಪೂರ್ಣ ಸ್ಥಗಿತಗೊಳಿಸುವುದೊಂದೇ ದಾರಿ ಎಂದು ನಿರ್ಧರಿಸಿದೆವು' ಎಂದು  ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

'ಪ್ರವಾಹದಿಂದಾಗಿ ಬೆಂಗಳೂರಿನ ಬಹುಪಾಲು ನೀರು ಸರಬರಾಜಿನಲ್ಲಿ ಅಡಚಣೆ ಉಂಟಾಗುತ್ತದೆ ಎಂಬುದು ಅರ್ಥವಾಯಿತು. ಹೀಗಾಗಿ, ನಾನು ಹೆಚ್ಚುವರಿ ಮುಖ್ಯ ಇಂಜಿನಿಯರ್ ಮತ್ತು ಮುಖ್ಯ ಇಂಜಿನಿಯರ್ ಅವರ ಒಪ್ಪಿಗೆಯನ್ನು ಪಡೆದೆ. ನಂತರ ವಿದ್ಯುತ್ ಸರಬರಾಜನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಕರೆ ಮಾಡಲಾಯಿತು. ಜೊತೆಗೆ, ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ಇಲಾಖೆಯ ಸಹಾಯ ಕೋರಲಾಯಿತು' ಎಂದು ತಿಳಿಸಿದ್ದಾರೆ.

2011ರಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿಗೆ ಸೇರಿದಾಗಿನಿಂದ ಟಿ.ಕೆ ಹಳ್ಳಿಯಲ್ಲಿಯೇ ತಮ್ಮ ಹೆಚ್ಚಿನ ಕೆಲಸದ ಜೀವನವನ್ನು ಕಳೆದ ನರೇಶ್, 'ಬೆಳಿಗ್ಗೆ ಶಿಂಷಾನದಿಯಲ್ಲಿ ಪ್ರವಾಹದ ಮಟ್ಟ 588.63 ಮೀಟರ್‌ಗಳಷ್ಟು ತೋರಿಸುತ್ತಿತ್ತು. ನೀರಿನ ಸುರಕ್ಷತಾ ಗರಿಷ್ಠ ಮಟ್ಟ 585.95 ಮೀ. ಆಗಿತ್ತು. ನಮ್ಮ ಪಂಪ್‌ಹೌಸ್, ನೆಲಮಟ್ಟದಿಂದ 23 ಅಡಿ ಕೆಳಗೆ ಮೆಗಾ ಪಂಪ್‌ಗಳನ್ನು ಹೊಂದಿದ್ದು, ನೀರು ತುಂಬಿಕೊಂಡಿದೆ ಮತ್ತು ನೀರು ನೆಲದಿಂದ ಒಂದು ಅಡಿ ಮೇಲಕ್ಕೆ ಏರಿತ್ತು. ಇದು ಭಯಾನಕ ಪರಿಸ್ಥಿತಿಯಾಗಿತ್ತು' ಎನ್ನುತ್ತಾರೆ.

ಇದರಿಂದಾಗಿ ಹಿಂದಿನ ರಾತ್ರಿ ತಾತಗುಣಿಯಲ್ಲಿ ವಿದ್ಯುತ್ ವೈಫಲ್ಯಕ್ಕೆ ಕಾರಣವಾಯಿತು. ಇದು ಮಧ್ಯರಾತ್ರಿಯ ಸುಮಾರಿಗೆ 15 ನಿಮಿಷಗಳ ಕಾಲ ಪಂಪ್‌ಗಳ ವಿದ್ಯುತ್ ಸಂಪರ್ಕ್ ತೆಗೆಯಲು ಮತ್ತು ಅವುಗಳನ್ನು ಮರುಪ್ರಾರಂಭಿಸುವಂತೆ ಮಾಡಿತು. ಈ ವೇಳೆ ಪಂಪ್‌ಹೌಸ್‌ನಲ್ಲಿ ಎಲೆಕ್ಟ್ರಿಷಿಯನ್, ಹೆಲ್ಪರ್‌ಗಳು, ಫಿಟ್ಟರ್‌ಗಳು ಮತ್ತು ವೆಲ್ಡರ್‌ಗಳು ಸೇರಿದಂತೆ 15 ನೌಕರರು ಇದ್ದರು.

ಇಂಜಿನಿಯರ್ ಅನ್ನು ಶ್ಲಾಘಿಸಿದ ಬಿಡಬ್ಲ್ಯುಎಸ್‌ಎಸ್‌ಬಿ ಮುಖ್ಯಸ್ಥ

ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ಎನ್.ಜಯರಾಮ್, ನರೇಶ್ ಮತ್ತು ಅವರ ತಂಡದ ಕಾರ್ಯಕ್ಕಾಗಿ ಶ್ಲಾಘಿಸಿದ್ದಾರೆ. ಪರಿಸ್ಥಿತಿ ಸಹಜವಾಗುವವರೆಗೆ ಟಿಕೆ ಹಳ್ಳಿಯಲ್ಲಿ ಮೊಕ್ಕಾಂ ಹೂಡಿದ್ದ ಜಯರಾಮ್, 'ಬೆಂಗಳೂರಿಗೆ ಮತ್ತೆ ನೀರು ಪೂರೈಕೆ ಮಾಡಲು ಒಟ್ಟು 270 ಸಿಬ್ಬಂದಿ ಎರಡು ದಿನ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದರು. ಇದು ನಮಗೆ ಒಂದು ವಾರ ಅಥವಾ 10 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಇದು 40 ಗಂಟೆಗಳನ್ನು ತೆಗೆದುಕೊಂಡಿತು ಎಂದು ತಿಳಿಸಿದ್ದಾರೆ.

ಪುನಃಸ್ಥಾಪನೆಯ ಕಾರ್ಯವು ನೀರನ್ನು ತೆಗೆದುಹಾಕುವುದು, ಕೆಸರು ತೆರವು, ಟ್ರೇಲರ್‌ಗಳಲ್ಲಿ ಇತರ ಪಂಪಿಂಗ್ ಸ್ಟೇಷನ್‌ಗಳಿಂದ ಬಿಡಿ ಭಾಗಗಳು ಮತ್ತು ಮೆಗಾ ಮೋಟಾರ್‌ಗಳನ್ನು ಟಿಕೆ ಹಳ್ಳಿಗೆ ತರುವುದು, ಅಸ್ತಿತ್ವದಲ್ಲಿರುವವುಗಳನ್ನು ಹೊರತೆಗೆಯುವುದು ಮತ್ತು ಅವುಗಳನ್ನು ಬದಲಾಯಿಸುವುದು ಸೇರಿದಂತೆ ಹಲವು ಕ್ಲಿಷ್ಟ ಪ್ರಕ್ರಿಯೆಗಳನ್ನು ಒಳಗೊಂಡಿತ್ತು ಎಂದು ಅವರು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com