ರಾಜ್ಯದಲ್ಲಿ ವಸತಿ ಯೋಜನೆಯಡಿ 6.6 ಲಕ್ಷ ಫಲಾನುಭವಿಗಳನ್ನು ಗುರುತಿಸಿಲ್ಲ: ಸಿಎಜಿ ವರದಿ

ನಗರ ಪ್ರದೇಶಗಳಲ್ಲಿ ಬಡವರಿಗೆ ಸೂರು ಅಥವಾ ಸ್ವಂತ ಮನೆ ಹೊಂದುವ ಸಮೀಕ್ಷೆ ಅವಶ್ಯಕತೆಯನ್ನು ಸರಿಯಾಗಿ ನಡೆಸಿಲ್ಲ. ಇದರಿಂದ 13.72 ಲಕ್ಷ ಫಲಾನುಭವಿಗಳನ್ನು ಮಾತ್ರ ಗುರುತಿಸಲಾಗಿದ್ದು, ವಾಸ್ತವವಾಗಿ 20.35 ಲಕ್ಷ ಮಂದಿ ಫಲಾನುಭವಿಗಳಿದ್ದಾರೆ. 
ಸಾಂದರ್ಬಿಕ ಚಿತ್ರ
ಸಾಂದರ್ಬಿಕ ಚಿತ್ರ

ಬೆಂಗಳೂರು: ನಗರ ಪ್ರದೇಶಗಳಲ್ಲಿ ಬಡವರಿಗೆ ಸೂರು ಅಥವಾ ಸ್ವಂತ ಮನೆ ಹೊಂದುವ ಸಮೀಕ್ಷೆ ಅವಶ್ಯಕತೆಯನ್ನು ಸರಿಯಾಗಿ ನಡೆಸಿಲ್ಲ. ಇದರಿಂದ 13.72 ಲಕ್ಷ ಫಲಾನುಭವಿಗಳನ್ನು ಮಾತ್ರ ಗುರುತಿಸಲಾಗಿದ್ದು, ವಾಸ್ತವವಾಗಿ 20.35 ಲಕ್ಷ ಮಂದಿ ಫಲಾನುಭವಿಗಳಿದ್ದಾರೆ. 

ನಿಗದಿತ ದಿನಗಳೊಳಗೆ ಸಮೀಕ್ಷೆ ಕಾರ್ಯ ಮುಗಿದಿರಲಿಲ್ಲ. ನಂತರ ಶೇಕಡಾ 49ರಷ್ಟು ಫಲಾನುಭವಿಗಳನ್ನು ಸೇರಿಸಲಾಯಿತು ಎಂದು ಲೆಕ್ಕಪರಿಶೋಧನೆ ಮತ್ತು ನಿಯಂತ್ರಕ ವರದಿ (Comptroller and Auditor General (CAG) ಹೇಳುತ್ತದೆ.

ರಾಜ್ಯದ 2,472 ಯೋಜನೆಗಳಿಗೆ 5.17 ಲಕ್ಷ ಅನುಮೋದಿತ ಫಲಾನುಭವಿಗಳಲ್ಲಿ 3.43 ಲಕ್ಷವನ್ನು ಮಾತ್ರ ಅನುಮೋದಿತ ವಸತಿ ಪಾಲುದಾರಿಕೆ (AHP) ಮತ್ತು ಫಲಾನುಭವಿಗಳ ನೇತೃತ್ವದ ನಿರ್ಮಾಣ (BLC)ಗಳಿಗೆ ಲಗತ್ತಿಸಲಾಗಿದೆ. ವಿಶಿಷ್ಟ ಗುರುತು ಸಂಖ್ಯೆಯನ್ನು ಬಳಸುವುದಕ್ಕೆ ಮೌಲೀಕರಣ ಅಂತರವಿರುವುದರಿಂದ ಕೆಲವರು ಒಂದೇ ಸಂಖ್ಯೆಯಿಂದ ಅಥವಾ ಭಿನ್ನ ಸಂಖ್ಯೆಯಿಂದ ಹಲವು ಲಾಭಗಳನ್ನು ಪಡೆದುಕೊಂಡಿದ್ದಾರೆ.

ಎಹೆಚ್ ಪಿ ಅಡಿಯಲ್ಲಿ ನಿಜವಾದ ಲಾಭವನ್ನು ಕೇವಲ ಶೇಕಡಾ 12ರವರೆಗೆ ವಿಸ್ತರಿಸಲಾಗಿದೆ. ಶೇಕಡಾ 44 ನಿರೀಕ್ಷಿತ ಫಲಾನುಭವಿಗಳ ಪಟ್ಟಿಯಲ್ಲಿ ಇಲ್ಲ, ಇದರಿಂದ ಫಲಾನುಭವಿಗಳಲ್ಲದವರು ಮನೆಗಳನ್ನು ಹೊಂದಿ ಲಾಭ ಪಡೆದುಕೊಂಡಿದ್ದಾರೆ. ನಿರ್ಮಾಣಗೊಂಡಿರುವ ಮನೆಗಳ ತಪಾಸಣೆ ನಡೆಸಿದಾಗ ಕಂಡುಬಂದ ವಿಷಯವೆಂದರೆ ಶೇಕಡಾ 41ರಷ್ಟು ಮನೆಗಳು ಅತಿ ದುಬಾರಿ ವೆಚ್ಚದ ಬಹುಮಹಡಿ ಕಟ್ಟಡಗಳಾಗಿದ್ದು, 30 ಚದರ ಮೀಟರ್‌ಗಿಂತಲೂ ಹೆಚ್ಚಿನ ಕಾರ್ಪೆಟ್ ಪ್ರದೇಶವನ್ನು ಹೊಂದಿದ್ದು, ಪ್ರತಿ ಘಟಕಕ್ಕೆ ನಿಗದಿಪಡಿಸಿದ 5 ಲಕ್ಷ ರೂ.ಗಳ ಮಿತಿಯೊಳಗೆ ಬರುವುದಿಲ್ಲ.

ರಾಜ್ಯ ಸರ್ಕಾರವು ನಿಗದಿತ ಷರತ್ತುಗಳನ್ನು ಪೂರೈಸದ ಕಾರಣ ಮತ್ತು ಫಲಾನುಭವಿ ಕೊಡುಗೆ  8,360.78 ಕೋಟಿ ರೂಪಾಯಿಗಳ ಯುಎಲ್‌ಬಿ ಪಾಲು ಸಂಗ್ರಹಣೆಯಲ್ಲಿನ ಕೊರತೆಯಿಂದಾಗಿ ಕೇಂದ್ರ ಸರ್ಕಾರವು 1,003.55 ಕೋಟಿ ರೂಪಾಯಿಗಳನ್ನು ತಡೆಹಿಡಿದಿದ್ದರಿಂದ AHP ಯೋಜನೆಗಳು ನಿಧಿಯ ಕೊರತೆಯನ್ನು ಎದುರಿಸಿದವು. ಇದು AHP ಯೋಜನೆಗಳನ್ನು ರದ್ದುಗೊಳಿಸಲು ಮತ್ತು ಪೂರ್ಣಗೊಂಡ ಮನೆಗಳಿಗೆ ನಾಗರಿಕ ಮೂಲಸೌಕರ್ಯಗಳ ಕೊರತೆಗೆ ಕಾರಣವಾಯಿತು.

ಎಎಚ್‌ಪಿ ಅಡಿಯಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ (ಕೆಎಸ್‌ಡಿಬಿ) ತೆಗೆದುಕೊಂಡಿರುವ ಮನೆಗಳಲ್ಲಿ ಕೇವಲ 14 ಪ್ರತಿಶತವನ್ನು ಮಾತ್ರ ನಿರ್ಮಿಸಲಾಗಿದೆ ಮತ್ತು ಉಳಿದವುಗಳನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳಲಾಗಿದೆ. ಈ ಯೋಜನೆಗಳು ನೀರು ಸರಬರಾಜು, ಒಳಚರಂಡಿ, ರಸ್ತೆಗಳು, ವಿದ್ಯುತ್ ಇತ್ಯಾದಿ ಮೂಲಸೌಕರ್ಯಗಳನ್ನು ಹೊಂದಿಲ್ಲ.

ಯೋಜನೆಗಳಿಗೆ ಫಲಾನುಭವಿಗಳನ್ನು ಲಗತ್ತಿಸುವಲ್ಲಿ ಲೋಪ ಉಂಟಾಗಿದ್ದರಿಂದ ಕೇಂದ್ರ ಸರ್ಕಾರವು ಬಿಎಲ್‌ಸಿ ಯೋಜನೆಗಳ ಅಡಿಯಲ್ಲಿ ಮೊದಲ ಕಂತಿನ 569.56 ಕೋಟಿ ರೂಪಾಯಿಗಳನ್ನು ತಡೆಹಿಡಿದಿದೆ. ನೇರ ಲಾಭ ವರ್ಗಾವಣೆ ಪಾವತಿಗಳಿಗೆ, 62,648 BLC ಫಲಾನುಭವಿಗಳ ಪೈಕಿ 12,757 ಜನರಿಗೆ 172.64 ಕೋಟಿ ರೂಪಾಯಿಗಳ ಪಾವತಿಗಳಿಗೆ ಆಧಾರ್ ಮೂಲಕ ಮೌಲ್ಯೀಕರಣವನ್ನು ಮಾಡಲಾಗಿಲ್ಲ. ಲೆಕ್ಕಪರಿಶೋಧನೆಯಿಂದ 111 ಪ್ರಕರಣಗಳಲ್ಲಿ 1.30 ಕೋಟಿ ರೂಪಾಯಿಗಳ ಎರಡು ಪಾವತಿಗಳಾಗಿವೆ ಎಂದು ಬಹಿರಂಗಗೊಂಡಿದೆ.

ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (CLSS) ಅಡಿಯಲ್ಲಿ ಕಡ್ಡಾಯ ಮೇಲ್ವಿಚಾರಣೆಯಲ್ಲಿ ಲೋಪಗಳ ಪರಿಣಾಮವಾಗಿ 471 ಫಲಾನುಭವಿಗಳು BLC ಮತ್ತು AHP ಅಡಿಯಲ್ಲಿ ಪ್ರಯೋಜನಗಳನ್ನು ಪಡೆದರು. ಮಾರ್ಚ್ 2021 ರ ಹೊತ್ತಿಗೆ, AHP ಮತ್ತು BLC ಅಡಿಯಲ್ಲಿ ಕೇವಲ ಶೇಕಡಾ 38ರಷ್ಟು (5,17,531 ವಸತಿ ಘಟಕಗಳು) ಫಲಾನುಭವಿಗಳಿಗೆ ಯೋಜನೆಗಳನ್ನು ತೆಗೆದುಕೊಳ್ಳಲಾಗಿದೆ. ಅನುಮೋದಿತ 5,17,531 ವಸತಿ ಘಟಕಗಳಲ್ಲಿ (DUU), ಕೇವಲ 17 ಪ್ರತಿಶತದಷ್ಟು ಪೂರ್ಣಗೊಂಡಿದೆ, 63 ಪ್ರತಿಶತವು ಇನ್ನೂ ಪ್ರಾರಂಭವಾಗಬೇಕಿದೆ ಮತ್ತು ಉಳಿದ 20 ಪ್ರತಿಶತವು ಚಾಲ್ತಿಯಲ್ಲಿದೆ. 2022 ರ ವೇಳೆಗೆ 'ಎಲ್ಲರಿಗೂ ವಸತಿ' ಗುರಿಯನ್ನು ಸಾಧಿಸುವ ಸಾಧ್ಯತೆಗಳು ದೂರ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com