ಬೆಂಗಳೂರಿನ ಶೇ 57 ರಷ್ಟು ನಾಗರಿಕರು ನಗರದಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ತೃಪ್ತಿ ಹೊಂದಿಲ್ಲ!

ಮಹದೇವಪುರ ವಲಯದ ನಿವಾಸಿಗಳು ಮೂಲಭೂತ ಸೌಲಭ್ಯಗಳ ಬಗ್ಗೆ ಹೆಚ್ಚಿನ ಅಸಮಾಧಾನವನ್ನು ಹೊಂದಿದ್ದರೆ, ರಾಜರಾಜೇಶ್ವರಿನಗರದ ನಿವಾಸಿಗಳು ಹೆಚ್ಚು ಸಂತೃಪ್ತರಾಗಿದ್ದಾರೆ ಎಂದು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ.ಪಿಎಸಿ) ಬುಧವಾರ ಬಿಡುಗಡೆ ಮಾಡಿರುವ ವರದಿ ಬಹಿರಂಗಪಡಿಸಿದೆ.
ಐಟಿ ಕಾರಿಡಾರ್ ಕಡೆಯಲ್ಲಿ ಭಾರಿ ಮಳೆಯಿಂದಾಗಿ ರಸ್ತೆ ತುಂಬೆಲ್ಲಾ ನೀರು
ಐಟಿ ಕಾರಿಡಾರ್ ಕಡೆಯಲ್ಲಿ ಭಾರಿ ಮಳೆಯಿಂದಾಗಿ ರಸ್ತೆ ತುಂಬೆಲ್ಲಾ ನೀರು

ಬೆಂಗಳೂರು: ಮಹದೇವಪುರ ವಲಯದ ನಿವಾಸಿಗಳು ಮೂಲಭೂತ ಸೌಲಭ್ಯಗಳ ಬಗ್ಗೆ ಹೆಚ್ಚಿನ ಅಸಮಾಧಾನವನ್ನು ಹೊಂದಿದ್ದರೆ, ರಾಜರಾಜೇಶ್ವರಿನಗರದ ನಿವಾಸಿಗಳು ಹೆಚ್ಚು ಸಂತೃಪ್ತರಾಗಿದ್ದಾರೆ ಎಂದು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ.ಪಿಎಸಿ) ಬುಧವಾರ ಬಿಡುಗಡೆ ಮಾಡಿರುವ ವರದಿ ಬಹಿರಂಗಪಡಿಸಿದೆ.

‘ಬೆಂಗಳೂರು ನಾಗರಿಕ ಗ್ರಹಿಕೆ ಸಮೀಕ್ಷೆ’ ಎಂಬ ಶೀರ್ಷಿಕೆಯ ವರದಿಯು ನಾಗರಿಕ ಸೇವೆಗಳಿಗೆ ಸಂಬಂಧಿಸಿದಂತೆ ನಾಗರಿಕರ ಆದ್ಯತೆಗಳು ಮತ್ತು ಬೆಂಗಳೂರು ನಗರದಲ್ಲಿ ಸೇವೆಗಳ ಗುಣಮಟ್ಟದ ಬಗ್ಗೆ ಅವರ ಅನುಭವವನ್ನು ಸಮೀಕ್ಷೆ ಮಾಡಿದೆ. ಶೇ 57ರಷ್ಟು ಜನರು ನಗರದ ಒಟ್ಟಾರೆ ಆಡಳಿತವು ತೃಪ್ತಿಕರವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಸಮೀಕ್ಷೆ ಗಮನಸೆಳೆದಿದೆ.

ಈ ಸಮೀಕ್ಷೆಯು 8,405 ನಾಗರಿಕರನ್ನು ಒಳಗೊಂಡಿದ್ದು, ಅವರ ತಿಳುವಳಿಕೆ ಮತ್ತು ಭಾಗವಹಿಸುವಿಕೆ, ಆಡಳಿತದ ಗುಣಮಟ್ಟ ಮತ್ತು ನಾಗರಿಕ ಸೌಲಭ್ಯಗಳ ಬಗ್ಗೆ ತೃಪ್ತಿ ಮತ್ತು ಬಿಬಿಎಂಪಿ ಚುನಾವಣೆಗಳ ಬಗ್ಗೆ ಕೇಳಲಾಯಿತು.

ರಸ್ತೆಗಳು, ತ್ಯಾಜ್ಯ ನಿರ್ವಹಣೆ ಕಳವಳಕಾರಿ

ಪ್ರತಿಕ್ರಿಯಿಸಿದವರಲ್ಲಿ ಕೇವಲ 34 ಪ್ರತಿಶತದಷ್ಟು ಜನರು ಮಾತ್ರ ತಮ್ಮ ವಾರ್ಡ್‌ಗಳಲ್ಲಿನ ಸೌಲಭ್ಯಗಳ ಬಗ್ಗೆ ಹೆಚ್ಚು ತೃಪ್ತರಾಗಿದ್ದಾರೆ. ಪ್ರತಿಕ್ರಿಯಿಸಿದವರಲ್ಲಿ 85 ಪ್ರತಿಶತದಷ್ಟು ಜನರು ತಮ್ಮ ಹಿಂದಿನ ಮಾಜಿ ಕಾರ್ಪೊರೇಟರ್ ಬಗ್ಗೆ ತಿಳಿದಿದ್ದಾರೆ ಮತ್ತು ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ 70 ರಷ್ಟು ಜನರು ವಿವಿಧ ನಾಗರಿಕ ಸಮಸ್ಯೆಗಳನ್ನು ಗುರುತಿಸುವಲ್ಲಿ ವಾರ್ಡ್ ಸಮಿತಿಗಳು ಪರಿಣಾಮಕಾರಿಯಾವೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿ ತೋರಿಸಿದೆ.

ವಾರ್ಡ್‌ಗಳಲ್ಲಿ ಗಮನಹರಿಸಬೇಕಾದ ಪ್ರಮುಖ ಐದು ವಿಷಯಗಳೆಂದರೆ, ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ, ಕಸ ತೆರವು, ಘನತ್ಯಾಜ್ಯ ನಿರ್ವಹಣೆ, ಚರಂಡಿ ಮತ್ತು ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯಾಗಿದೆ.

ಬಿ.ಪಿಎಸಿ ಸದಸ್ಯ ಆನಂದ ಗುಂಡೂರಾವ್ ಮಾತನಾಡಿ, 'ಬಿಬಿಎಂಪಿಗಾಗಿ ಚುನಾಯಿತ ಮಂಡಳಿ ಸದಸ್ಯರು, ನಾಗರಿಕ ಸಮಸ್ಯೆಗಳಿಗೆ ನಾಗರಿಕ ಕೇಂದ್ರಿತ ಪರಿಹಾರಗಳನ್ನು ಹುಡುಕುವಲ್ಲಿ ತೀವ್ರವಾಗಿ ಗಮನಹರಿಸಬೇಕಿದೆ' ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com