ಸಮುದ್ರ ಕೊರೆತ ತಡೆಗೆ ಕಲ್ಲಿನ ತಡೆಗೋಡೆ ನಿರ್ಮಾಣಕ್ಕೆ ತೀವ್ರ ಆಕ್ಷೇಪ

 ಸಮುದ್ರ ಕೊರೆತ ತಡೆಯುವ ಪ್ರಯತ್ನವಾಗಿ ರಾಜ್ಯದ ಕರಾವಳಿ ತೀರ ಪ್ರದೇಶದಲ್ಲಿ ರಾಜ್ಯ ಸರ್ಕಾರದಿಂದ ಕಲ್ಲಿನ ತಡೆಗೋಡೆ ನಿರ್ಮಿಸುವುದಕ್ಕೆ ಅಡ್ಡಿಯುಂಟಾಗಿದೆ. ಕೇರಳ ಮತ್ತು ಕರ್ನಾಟಕದ ತಜ್ಞರು ಈ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಸಮುದ್ರ ಕೊರೆತ ತಡೆಯುವ ಪ್ರಯತ್ನವಾಗಿ ರಾಜ್ಯದ ಕರಾವಳಿ ತೀರ ಪ್ರದೇಶದಲ್ಲಿ ರಾಜ್ಯ ಸರ್ಕಾರದಿಂದ ಕಲ್ಲಿನ ತಡೆಗೋಡೆ ನಿರ್ಮಿಸುವುದಕ್ಕೆ ಅಡ್ಡಿಯುಂಟಾಗಿದೆ. ಕೇರಳ ಮತ್ತು ಕರ್ನಾಟಕದ ತಜ್ಞರು ಈ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೋಮೇಶ್ವರ ಬೀಚ್ ಮತ್ತಿತರ ಕಡೆಗಳಲ್ಲಿ ಕಲ್ಲಿನ ತಡೆಗೋಡೆ ನಿರ್ಮಿಸಿರುವುದರಿಂದ ಭಾರೀ ಸಮುದ್ರ ಕೊರತೆ ಹಾಗೂ ಎತ್ತರದ ಅಲೆಗಳಿಗೆ ಕಾರಣವಾಗುತ್ತದೆ. ಅಲ್ಲದೇ ಕಲ್ಲಿನ ತಡೆಗೋಡೆ ನಿರ್ಮಾಣ ಮೀನುಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಕೇರಳದ ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಕರ್ನಾಟಕದ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಭಾರತದ ಬಂದರು ಪ್ರಾಧಿಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ರಾಜ್ಯದ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ತಜ್ಞರು ಕೂಡಾ ಇದೇ ರೀತಿಯ ಕಳವಳ ವ್ಯಕ್ತಪಡಿಸಿದ್ದಾರೆ. 

ಭೂಮಿಯ ಬದಲು ಸಮುದ್ರದಲ್ಲಿ ಕಲ್ಲಿನ ಗೋಡೆಗಳನ್ನು ನಿರ್ಮಿಸುತ್ತಿರುವುದು ವ್ಯರ್ಥ ಕಸರತ್ತು ಆಗಿದೆ. ಕುಂದಾಪುರ-ಭಟ್ಕಳ ನಡುವಿನ ಮರವಂತೆಯಲ್ಲಿ ನಿರ್ಮಿಸಿರುವ ಕಲ್ಲಿನ ಗೋಡೆಯು ಉತ್ತಮವಾಗಿದ್ದು, ಇತರ ಸ್ಥಳಗಳಲ್ಲಿಯೂ ಇದೇ ರೀತಿಯಲ್ಲಿ ನಿರ್ಮಿಸಬೇಕು ಎಂದು ಅವರು ಹೇಳಿದ್ದಾರೆ. 400 ಮೀಟರ್ ಉದ್ದದ ಕಲ್ಲಿನ ತಡೆಗೋಡೆ ನಿರ್ಮಾಣಕ್ಕೆ ಈ ಆರ್ಥಿಕ ವರ್ಷದಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಪಿಎಐ ಜಂಟಿಯಾಗಿ 5 ಕೋಟಿ ರೂ. ವೆಚ್ಚ ಮಾಡಿವೆ.

ಕಲ್ಲಿನ ತಡೆಗೋಡೆ ಮೂರ್ಖತನದ ಯೋಜನೆ: ಈ ವರ್ಷ ಕಾರವಾರ, ಉಡುಪಿ ಮತ್ತು ಮಂಗಳೂರಿನಲ್ಲಿ ಗೋಡೆಗಳನ್ನು ನಿರ್ಮಿಸಲಾಗಿದೆ. 2011 ಮತ್ತು 2022 ರ ನಡುವೆ, ಪಿಐಎ ಯೋಜನೆಗೆ ರೂ. 271.78 ಕೋಟಿ ಖರ್ಚು ಮಾಡಿದೆ. “ಕಲ್ಲಿನ ಗೋಡೆಗಳ ನಿರ್ಮಾಣವು ಪರಿಹಾರವಲ್ಲ. ಅದೊಂದು ‘ಮೂರ್ಖತನದ ಯೋಜನೆಯಾಗಿದೆ ಎಂದು ಕೇರಳದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಲೆಗಳ ಅಬ್ಬರ ಸಮುದ್ರದ ಕೊರೆತ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸಮುದ್ರ ತೀರದಲ್ಲಿ ಲವಣಾಂಶ ಮತ್ತು ಶಾಖವು ಬದಲಾಗುತ್ತಿದೆ ಮತ್ತು ಮಾನವನ ಹಸ್ತಕ್ಷೇಪದಿಂದ ಜಲಚರ ಜೀವಕ್ಕೆ ಅಪಾಯವಿದೆ. ಮೀನುಗಾರರೂ ಕೂಡಾ ಆಕ್ಷೇಪಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

ಕರಾವಳಿ ನಿಯಂತ್ರಣ ವಲಯಗಳು ಮತ್ತು ಬಫರ್ ವಲಯಗಳನ್ನು ನಿರ್ವಹಿಸುವ ಬದಲು ಸರ್ಕಾರ ಸಾರ್ವಜನಿಕ ಮತ್ತು ಪ್ರವಾಸೋದ್ಯಮ ಒತ್ತಡಕ್ಕೆ ಮಣಿದು ಅಭಿವೃದ್ಧಿ ರಹಿತ ವಲಯಗಳಲ್ಲಿ ನಿರ್ಮಾಣಗಳಿಗೆ ಅವಕಾಶ ನೀಡುತ್ತಿದೆ ಎಂದು ಖ್ಯಾತ ಮೀನುಗಾರಿಕೆ ಮತ್ತು ಕರಾವಳಿ ತಜ್ಞ ಎಂ ಡಿ ಸುಭಾಷ್ ಚಂದ್ರನ್ ಹೇಳುತ್ತಾರೆ. 

ಇಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ, ಆದರೆ ಆಸ್ತಿಪಾಸ್ತಿಗೆ ಹಾನಿಯಾಗಿದೆ. ನದಿಗಳಿಂದ ಸಮುದ್ರಕ್ಕೆ ಕೆಸರು ಹರಿಯುವುದನ್ನು ಖಾತ್ರಿಪಡಿಸುವ ಬದಲು, ಕಲ್ಲಿನ ತಡೆಗೋಡೆ ನಿರ್ಮಾಣವನ್ನು ಸರ್ಕಾರವ ಆಯ್ಕೆ ಮಾಡುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಮ್ಯಾಂಗ್ರೋವ್‌ಗಳು ಮತ್ತು ಪಾಂಡನದಂತಹ ಜಲಸಸ್ಯಗಳನ್ನು ನಿರ್ವಹಿಸುವುದು ಅಗ್ಗದ ಮತ್ತು ಕಾರ್ಯಸಾಧ್ಯವಾದ ಪರಿಹಾರವಾಗಿದೆ ಎಂದು ಕರಾವಳಿ ಮತ್ತು ಸಾಗರ ತಜ್ಞ ವಿ.ಎನ್.ನಾಯಕ್ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com