108 ಆಂಬುಲೆನ್ಸ್ ಸೇವೆ ಸ್ಥಗಿತ: ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿ ಪರಿವರ್ತನೆ- ಕಾಂಗ್ರೆಸ್ ಟೀಕೆ
ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕೊರತೆಯಿಂದಾಗಿದ್ದ ಅವಘಡದ ನಂತರ 108 ಆಂಬುಲೆನ್ಸ್ ಸೇವೆ ಸ್ಥಗಿತವಾಗಿದ್ದು 40% ಸರ್ಕಾರದ ಅಯೋಗ್ಯತನಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.
Published: 25th September 2022 06:53 PM | Last Updated: 25th September 2022 06:56 PM | A+A A-

ಆರೋಗ್ಯ ಸಚಿವ ಡಾ.ಕೆ. ಸುಧಾಕರ್
ಬೆಂಗಳೂರು: ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕೊರತೆಯಿಂದಾಗಿದ್ದ ಅವಘಡದ ನಂತರ 108 ಆಂಬುಲೆನ್ಸ್ ಸೇವೆ ಸ್ಥಗಿತವಾಗಿದ್ದು 40% ಸರ್ಕಾರದ ಅಯೋಗ್ಯತನಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಕಾಂಗ್ರೆಸ್, ಡಾ. ಕೆ. ಸುಧಾಕರ್ ಅವರೇ, ನಿಮ್ಮ ದುರಾಡಳಿತದಿಂದ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿ ಪರಿವರ್ತನೆಯಾಗಿದೆ. ಜನ ಮತ್ತೊಮ್ಮೆ ಹಾದಿಬೀದಿಯಲ್ಲಿ ಸಾಯಲಿ ಎಂದು ಬಯಸುತ್ತಿರುವಿರಾ?ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: 108 ಸಹಾಯವಾಣಿಯಲ್ಲಿ ತಾಂತ್ರಿಕ ದೋಷ, ಜನರಿಗೆ ತೊಂದರೆಯಾಗದಂತೆ ಅಗತ್ಯ ವ್ಯವಸ್ಥೆಗೆ ಕ್ರಮ- ಡಾ.ಕೆ.ಸುಧಾಕರ್
ಡಕೋಟಾ ಇಂಜಿನ್‌ನಂತಿರುವ ಸರ್ಕಾರ ನಂಬಿದವರಿಗೆ ಮಸಣವೇ ಗತಿ. ಆಸ್ಪತ್ರೆಯಲ್ಲಿ ವಿದ್ಯುತ್, ವೆಂಟಿಲೇಟರ್, ಬೆಡ್, ಔಷಧಗಳ ಕೊರತೆಯ ನಂತರ ಈಗ 108 ಆಂಬುಲೆನ್ಸ್ ಸೇವೆ ಸ್ಥಗಿತವಾಗಿದೆ.ಸಿಡಿಗೆ ತಡೆಯಾಜ್ಞೆ ತರುವಲ್ಲಿ ತೋರಿದ ಆಸಕ್ತಿಯನ್ನು ಇಲಾಖೆಯ ಕೆಲಸದಲ್ಲಿ ತೋರಿದ್ರೆ ಈ ಸ್ಥಿತಿ ಬರುತ್ತಿರಲಿಲ್ಲ ಅಲ್ಲವೇ? ಎಂದು ಸುಧಾಕರ್ ಅವರ ವಿರುದ್ಧ ಕಿಡಿಕಾರಿದೆ.
ಡಕೋಟಾ ಇಂಜಿನ್‌ನಂತಿರುವ#40PercentSarkara ನಂಬಿದವರಿಗೆ ಮಸಣವೇ ಗತಿ.
— Karnataka Congress (@INCKarnataka) September 25, 2022
ಆಸ್ಪತ್ರೆಯಲ್ಲಿ ವಿದ್ಯುತ್, ವೆಂಟಿಲೇಟರ್, ಬೆಡ್, ಔಷಧಗಳ ಕೊರತೆಯ ನಂತರ ಈಗ 108 ಆಂಬುಲೆನ್ಸ್ ಸೇವೆ ಸ್ಥಗಿತವಾಗಿದೆ.
ಸಿಡಿಗೆ ತಡೆಯಾಜ್ಞೆ ತರುವಲ್ಲಿ ತೋರಿದ
ಆಸಕ್ತಿಯನ್ನು ಇಲಾಖೆಯ ಕೆಲಸದಲ್ಲಿ ತೋರಿದ್ರೆ ಈ ಸ್ಥಿತಿ ಬರುತ್ತಿರಲಿಲ್ಲ ಅಲ್ಲವೇ @mla_sudhakar ಅವರೇ?
ಭ್ರಷ್ಟಾಚಾರ ರಹಿತವಾಗಿ ಬದುಕುವುದು ಸುಲಭವಲ್ಲ, ಭ್ರಷ್ಟಾಚಾರ ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ ಎಂದು ಸಚಿವ ಮಾಧುಸ್ವಾಮಿ ಹೇಳುವ ಮೂಲಕ ಭ್ರಷ್ಟಾಚಾರವಿಲ್ಲದೆ ಬಿಜೆಪಿ ಸರ್ಕಾರವಿಲ್ಲ ಎಂಬುದನ್ನ ಒಪ್ಪಿದಂತಾಗಿದೆ! ಕಡಿಮೆ ಮಾಡಲು ಯತ್ನಿಸುತ್ತೇವೆ ಎಂದರೆ ಕಮಿಷನ್ ಪರ್ಸೆಂಟೇಜ್ ಕಡಿಮೆ ಮಾಡ್ಕೊತಿವಿ ಅಂತನಾ? ಇದೇನಾ ಪೇ ಸಿಎಂ ಎಫೆಕ್ಟ್ ಎಂದು ಟೀಕಿಸಿದೆ.