
ಮೀನುಗಾರಿಕಾ ಜೆಟ್ಟಿ ಕುಸಿತದ ಚಿತ್ರ
ಬೆಂಗಳೂರು: ಉಡುಪಿ ಜಿಲ್ಲೆ ಗೊಂಗೊಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮೀನುಗಾರಿಕಾ ಜೆಟ್ಟಿ ಕುಸಿದು ಬಿದ್ದಿದೆ. ಈ ವಿಡಿಯೋವನ್ನು ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯ ಬಿಜೆಪಿ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದು, ತನಿಖೆಗೆ ಒತ್ತಾಯಿಸಿದೆ.
ಬಿಜೆಪಿಯ ಭ್ರಷ್ಟಾಚಾರಕ್ಕೆ, 40% ಕಮಿಷನ್ ಲೂಟಿಗೆ ಮತ್ತೊಂದು ಕಾಮಗಾರಿ ಕುಸಿಯುವ ಮೂಲಕ ಸಾಕ್ಷ್ಯ ಒದಗಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನಿರ್ಮಾಣ ಹಂತದಲ್ಲಿದ್ದ ಮೀನುಗಾರಿಕಾ ಜೆಟ್ಟಿ ಕುಸಿತ 40%ಕಮಿಷನ್ ಕರ್ಮದ ಸಾಕ್ಷಿಯಲ್ಲವೇ? ಪೇ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಇದರ ತನಿಖೆಯಾಗಬೇಕಲ್ಲವೇ ಎಂದು ಒತ್ತಾಯಿಸಿದ್ದಾರೆ.
40% ಬಿಜೆಪಿಗೆ
— Karnataka Congress (@INCKarnataka) September 29, 2022
60% ನೀರಿಗೆ
0% ಜನರಿಗೆ!
ಬಿಜೆಪಿಯ ಭ್ರಷ್ಟಾಚಾರಕ್ಕೆ, 40% ಕಮಿಷನ್ ಲೂಟಿಗೆ ಮತ್ತೊಂದು ಕಾಮಗಾರಿ ಕುಸಿಯುವ ಮೂಲಕ ಸಾಕ್ಷ್ಯ ಒದಗಿಸಿದೆ.
ನಿರ್ಮಾಣ ಹಂತದಲ್ಲಿದ್ದ ಗಂಗೊಳ್ಳಿಯ
ಮೀನುಗಾರಿಕಾ ಜೆಟ್ಟಿ ಕುಸಿತಗೊಂಡಿದ್ದು #40Percentsarkara ದ ಕಮಿಷನ್ ಕರ್ಮದ ಸಾಕ್ಷಿಯಲ್ಲವೇ #PayCM @BSBommai ಅವರೇ?
ಇದರ ತನಿಖೆಯಾಗಬೇಕಲ್ಲವೇ? pic.twitter.com/89xmDZbtQv