ಬೆಂಗಳೂರು: ದುಬಾರಿ ಶಾಲಾ ಶುಲ್ಕ, ಹೋರಾಟಕ್ಕೆ ಪೋಷಕರು ಮುಂದು!

ಖಾಸಗಿ ಶಾಲೆಗಳಲ್ಲಿ ಶುಲ್ಕದ ವಿಚಾರದಲ್ಲಿ ಸರ್ಕಾರ ಮತ್ತು ನ್ಯಾಯಾಲಯಗಳಿಂದ ಯಾವುದೇ ನೆರವು ದೊರೆಯದ ಕಾರಣ ಪೋಷಕರು ಪರಸ್ಪರ ನೆರವಾಗುವ ಮೂಲಕ ಹೋರಾಟಕ್ಕೆ ಮುಂದಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಶುಲ್ಕದ ವಿಚಾರದಲ್ಲಿ ಸರ್ಕಾರ ಮತ್ತು ನ್ಯಾಯಾಲಯಗಳಿಂದ ಯಾವುದೇ ನೆರವು ದೊರೆಯದ ಕಾರಣ ಪೋಷಕರು ಪರಸ್ಪರ ನೆರವಾಗುವ ಮೂಲಕ ಹೋರಾಟಕ್ಕೆ ಮುಂದಾಗಿದ್ದಾರೆ. ಖಾಸಗಿ ಶಾಲೆಗಳ ಶುಲ್ಕವನ್ನು ಸರ್ಕಾರವು ಕ್ರಮಬದ್ಧಗೊಳಿಸದಂತೆ ಇತ್ತೀಚಿಗೆ ಜನವರಿ 5 ರಂದು ಹೈಕೋರ್ಟ್ ಆದೇಶ ಹೊರಡಿಸಿದ ನಂತರ ಅನಗತ್ಯವಾಗಿ ಶುಲ್ಕ ಹೆಚ್ಚಿಸಬಾರದು ಎಂದು ಖಚಿತಪಡಿಸಿಕೊಳ್ಳಲು ಪೋಷಕರು ಹೋರಾಟಕ್ಕಿಳಿದಿದ್ದಾರೆ. 

ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ (ಕೆಪಿಎಂಟಿಸಿಸಿ) ಸಹ ಈ ವಿಷಯದಲ್ಲಿ ನಿಲುವು ತಳೆಯುವುದರೊಂದಿಗೆ ಖಾಸಗಿ ಶಾಲೆಗಳು ಶುಲ್ಕವನ್ನು ಹೆಚ್ಚಿಸಿರುವ ಹಲವಾರು ಘಟನೆಗಳು ನಡೆದಿವೆ. ವಿದ್ಯಾರ್ಥಿಗಳು ಉನ್ನತ ಶ್ರೇಣಿಗೆ ಹೋಗುವುದರಿಂದ  ಶುಲ್ಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

 ಅಲ್ಲದೇ, ಶಾಲಾ ಶುಲ್ಕವನ್ನು ಶೇ. 27 ರಷ್ಟು ಅಂದರೆ ಬೋಧನಾ ಶುಲ್ಕವನ್ನು ರೂ. 1.2 ಲಕ್ಷದಿಂದ 52 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಪೋಷಕರು ಹೇಳುತ್ತಿದ್ದು, ಖಾಸಗಿ ಶಾಲೆಗಳ ಶುಲ್ಕಕ್ಕೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು  ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (RERA) ಮಾದರಿಯಲ್ಲಿ ನಿಯಂತ್ರಕ ಸಂಸ್ಥೆಯನ್ನು ಸ್ಥಾಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಆದರೆ, ಈ ಕುರಿತು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಸರಕಾರವು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಹಾಯ ಮಾಡಲು ಖಾಸಗಿ ಶಾಲೆಗಳ ವಿವರಗಳನ್ನು ಸಾರ್ವಜನಿಕವಾಗಿ ದೊರೆಯುವಂತೆ ಮಾಡಲು  ಸಾಫ್ಟ್‌ವೇರ್  ಹೊರತರಲು ಪ್ರಯತ್ನಿಸುತ್ತಿದೆ, ಆದರೆ ಇದು ಕಾರ್ಯರೂಪಕ್ಕೆ ಬರಲು ಇನ್ನೂ ಹಲವು ವರ್ಷಗಳೇ ಬೇಕಾಗಲಿದೆ. ಕಾನೂನು ಹೋರಾಟಕ್ಕೂ ವರ್ಷಗಳೇ ಬೇಕಾಗುವುದರಿಂದ ಖಾಸಗಿ ಶಾಲೆಗಳಿಗೆ ಹಣ ಮಾಡಲು ಸಮಯ ನೀಡುತ್ತದೆ. ಇದೀಗ, ದುಬಾರಿ ಶುಲ್ಕ ಏರಿಕೆಯಿಂದ ಪೋಷಕರು ಅಳುತ್ತಿದ್ದಾರೆ. ಈಗ ಏಲ್ಲಿಗೆ ಹೋಗುವುದು ಎಂದು ರಾಜ್ಯ ವಾಯ್ಸ್ ಆಫ್ ಪೇರೆಂಟ್ಸ್ ಅಧ್ಯಕ್ಷ ಮೊಹಮ್ಮದ್ ಶಕೀಲ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. 

ಇದೀಗ, ಭರವಸೆಯ ಕಿರಣವೆಂದರೆ ಅದು ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆ. ಇಲಾಖೆಯಿಂದ ಅನುಮೋದಿಸಲ್ಪಟ್ಟಂತೆ ಶುಲ್ಕವನ್ನು ಶಾಲೆಗಳು ವಿಧಿಸಬಹುದು ಎಂದು ಕಾಯ್ದೆ ಹೇಳುತ್ತದೆ, ನಿಗದಿಪಡಿಸಿದ  ಶಾಲೆಗಳು ಶುಲ್ಕವನ್ನು ಹೇಗೆ ಅನುಮೋದಿಸುತ್ತಾರೆ ಎಂಬುದರ ಕುರಿತು ಯಾವುದೇ ಪ್ರಸ್ತಾಪವಿಲ್ಲ ಎಂದು ಶಕೀಲ್ ತಿಳಿಸಿದರು. .

ಈ ಮಧ್ಯೆ,  ಪೋಷಕರು ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರವನ್ನು (ಡೆರಾ) ಸಂಪರ್ಕಿಸಬಹುದಾದರೂ ಅದು ಈ ವಿಷಯದ ಬಗ್ಗೆ ನಿರ್ಧರಿಸಲು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com