
ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರಿನ ಯುನಿಟಿ ಕಟ್ಟಡದಿಂದ ಮಹಿಳೆಯೊಬ್ಬರು ಜಿಗಿದು ಮೃತಪಟ್ಟಿದ್ದಾರೆ. ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತ ಮಹಿಳೆಯನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ನ ಡಿವಿಷನಲ್ ಆಫೀಸ್ ನ ಮ್ಯಾನೇಜರ್ ಅಪರ್ಣಕುಮಾರಿ ಎಂದು ಗುರುತಿಸಲಾಗಿದೆ. ಅಪರ್ಣಕುಮಾರಿ ಸಂಜೆ 7 ಗಂಟೆ ವೇಳೆಗೆ ಕಟ್ಟಡದಿಂದ ಜಿಗಿದಿದ್ದರು.
ಇದನ್ನೂ ಓದಿ: ಜಮೀನಿಗೆ ಲಿಫ್ಟ್ ಕೊಡುವ ನೆಪದಲ್ಲಿ ಕರೆದೊಯ್ದು ಮಹಿಳೆ ಕೊಲೆ, ಬಳಿಕ ಅತ್ಯಾಚಾರ ಎಸಗಿದ್ದ ಆರೋಪಿ ಬಂಧನ
ಅಪರ್ಣಕುಮಾರಿ ಕಟ್ಟಡದ ಕಿಟಕಿ ತೆರೆದು ಹೊರಗೆ ಹಾರಲು ಯತ್ನಿಸಿದಾಗ ಅವರನ್ನು ಸಿಬ್ಬಂದಿಯೊಬ್ಬರು ತಡೆಯಲು ಯತ್ನಿಸಿದ್ದರು. ಕೆಲ ನಿಮಿಷಗಳ ಕಾಲ ಅವರು ಮಹಿಳೆಯನ್ನು ಕೈಯನ್ನು ಹಿಡಿದುಕೊಂಡಿದ್ದರು. ಆದರೆ ಕೊನೆಗೆ ವ್ಯಕ್ತಿಯ ಕೈಜಾರಿ ಕೆಳಗೆಬಿದ್ದು ಆಕೆ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ ಜೆ ಪಾರ್ಕ್ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದರು. ನಂತರ ಅಪರ್ಣಕುಮಾರಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.