ಕೆಎಸ್‌ಆರ್‌ಟಿಸಿಗೆ 3,349 ಕೋಟಿ ರೂ ದಾಖಲೆಯ ಆದಾಯ

ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು 2022ರಲ್ಲಿ 3,349 ಕೋಟಿ ರೂಪಾಯಿ ದಾಖಲೆಯ ಆದಾಯವನ್ನು ಗಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು 2022ರಲ್ಲಿ 3,349 ಕೋಟಿ ರೂಪಾಯಿ ದಾಖಲೆಯ ಆದಾಯವನ್ನು ಗಳಿಸಿದೆ.

ಸಾಂಕ್ರಾಮಿಕ ರೋಗಕ್ಕೂ ಮುನ್ನ ಸಾರಿಗೆ ನಿಗವು 2019ರಲ್ಲಿ 3,182 ಕೋಟಿ ರೂ ಆದಾಯವನ್ನು ಗಳಿಸಿತ್ತು. 2020ರಲ್ಲಿ ಈ ಆದಾಯ 157 ಕೋಟಿ ರೂಗೆ ಇಳಿಕೆಯಾಗಿತ್ತು. 2022 ರಲ್ಲಿ 93 ಕೋಟಿ ರೂ ಗಳಿಸಿತ್ತು. ಇದರಿಂದ ಸಾರಿಗೆ ನಿಗಮವು ನಷ್ಟವನ್ನು ಎದುರಿಸುತ್ತಿತ್ತು. ಇದೀಗ ನಿಗಮಕ್ಕೆ 3,349 ಕೋಟಿ ರೂ ಆದಾಯ ಬಂದಿದ್ದು, ತುಸು ಚೇತರಿಸಿಕೊಂಡಂತಾಗಿದೆ. ಇದು ಈವರೆಗಿನ ದಾಖಲೆಯ ಆದಾಯವಾಗಿದೆ ಎಂದು ತಿಳಿದುಬಂದಿದೆ.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಮಾತನಾಡಿ, 2016 ರಲ್ಲಿ 2,738 ಕೋಟಿ ರೂಪಾಯಿ ಆದಾಯ ಬಂದಿತ್ತು. 2017 ರಲ್ಲಿ 2,975 ಕೋಟಿ ರೂಪಾಯಿ, 2018 ರಲ್ಲಿ 3,131 ಕೋಟಿ ರೂಪಾಯಿ ಮತ್ತು 2019 ರಲ್ಲಿ 3,182 ಕೋಟಿ ರೂಪಾಯಿಗಳ ಆದಾಯ ಬಂದಿತ್ತು. "ಕೋವಿಡ್ ಬಸ್ ನಿಗಮದ ಸೇವೆಗಳು ಮತ್ತು ಅದರ ಸಂಚಾರ ಆದಾಯದ ಮೇಲೆ ಪರಿಣಾಮ ಬೀರಿತ್ತು. ಆದಾಯವು 1,569 ಕೋಟಿಗೆ ಕುಸಿದು 2021ರಲ್ಲಿ ಮತ್ತೆ 2,037 ಕೋಟಿ ರೂ.ಗೆ ಹೆಚ್ಚಳವಾಗಿತ್ತು. 2022-23ರಲ್ಲಿ ಆದಾಯವು 3,349 ಕೋಟಿ ರೂ.ಗಳೊಂದಿಗೆ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಯಾವುದೇ ರೀತಿಯ ಟಿಕೆಟ್ ದರ ಪರಿಷ್ಕರಣೆ ಮಾಡದೆ ಆದಾಯವನ್ನು ಹೆಚ್ಚಳ ಮಾಡಲಾಗಿದೆ ಎಂದು ಹೇಳಿದ್ದಾರೆ.

ಆದಾಯ ಹೆಚ್ಚಳದ ಹೊರತಾಗಿಯೂ ಕೆಎಸ್‌ಆರ್‌ಟಿಸಿ ನಷ್ಟವನ್ನೇಕೆ ಅನುಭವಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಶೇ.35ರಷ್ಟು ಸಂಚಾರದಲ್ಲಿ ಬಸ್ ಗಳಲ್ಲಿ ಶೇ.50ಕ್ಕಿಂತ ಕಡಿಮೆ ಜನರಿರುತ್ತಾರೆ. ಪ್ರಮುಖವಾಗಿ ಗ್ರಾಮೀಣ ಭಾಗಗಳಲ್ಲಿ, ಪೀಕ್ ಆವರ್ ಅಲ್ಲದ ಸಮಯದಲ್ಲಿ ಕಡಿಮೆ ಸಂಖ್ಯೆಯ ಜನರು ಪ್ರಯಾಣಿಸುತ್ತಾರೆ. ಬಸ್ ಗಳಲ್ಲಿ ಯಾವಾಗಲೂ ಶೇ.70ರಷ್ಟು ಜನರು ಪ್ರಯಾಣಿಸುವಂತಿರಬೇಕು ಎಂದು ಹೇಳಿದ್ದಾರೆ.

ಬಸ್ ನಲ್ಲಿ 5-10 ಜನ ಪ್ರಯಾಣಿಕರಿದ್ದರೂ ಅವರನ್ನು ಗಮ್ಯ ಸ್ಥಳಕ್ಕೆ ಸೇರುವಂತೆ ಮಾಡುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಖಾಸಗಿ ಬಸ್ ಗಳಂತೆ ನಾವು ಪ್ರಯಾಣವನ್ನು ರದ್ದು ಮಾಡಲು ಸಾಧ್ಯವಿಲ್ಲ. ಮಡಿಕೇರಿ, ಹಾಸನ ಮತ್ತು ಇತರ ಪ್ರದೇಶಗಳಂತಹ ಗ್ರಾಮೀಣ ಮತ್ತು ದೂರದ ಪ್ರದೇಶಗಳ ಜನರು ನಮ್ಮ ಬಸ್‌ಗಳನ್ನು ಮಾತ್ರ ಅವಲಂಬಿಸಿದ್ದಾರೆ. ನಾವು ಈ ಕಾರ್ಯಾಚರಣೆಯನ್ನು ಲಾಭದ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್‌ಗಳನ್ನು ನೀಡುತ್ತಿದ್ದೇವೆ. ಇದರಿಂದ ಬಸ್ ನಿಗಮಕ್ಕೆ ನಷ್ಟವಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಸಾರಿಗೆ ನಿಗಮದ ಆದಾಯವನ್ನು ಹೆಚ್ಚಿಸಲು ಎಲ್ಲಾ ಆಯ್ಕೆಗಳನ್ನು ಅನ್ವೇಷಿಸಲಾಗುತ್ತಿದೆ. ಮಾರ್ಗಗಳನ್ನು ತರ್ಕಬದ್ಧಗೊಳಿಸಲಾಗುತ್ತಿದೆ. ಹೊಸ ಸ್ಥಳಗಳನ್ನು ಅನ್ವೇಷಿಸಲಾಗುತ್ತಿದ್ದು, ಆದಾಯದ ಕಳ್ಳತನಕ್ಕೂ ಕಡಿವಾಣ ಹಾಕಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com