ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮಕ್ಕಳೊಂದಿಗೆ ನಟಿ ಶಿಲ್ಪಾ ಶೆಟ್ಟಿ ಭೇಟಿ
ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಕುಟುಂಬ ಸಮೇತ ಭೇಟಿ ನೀಡಿದರು. ಬಾಲಿವುಡ್ ನಟಿ ಮತ್ತು ಉದ್ಯಮಿ ತಮ್ಮ ಮಕ್ಕಳಿಗೆ ತಮ್ಮ ಮಂಗಳೂರಿನ ಪರಂಪರೆ ಮತ್ತು ಸಂಸ್ಕೃತಿಯನ್ನು ಪರಿಚಯಿಸಲು ಬಯಸುತ್ತಾರೆ. ನನಗೆ ತುಂಬಾ ಹೆಮ್ಮೆಯಿದೆ ಎಂದು ಹೇಳಿದ್ದಾರೆ.
Published: 23rd April 2023 01:41 PM | Last Updated: 23rd April 2023 01:41 PM | A+A A-

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ ಶಿಲ್ವಾ ಶೆಟ್ಟಿ
ಮುಂಬೈ: ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಕುಟುಂಬ ಸಮೇತ ಭೇಟಿ ನೀಡಿದರು. ಬಾಲಿವುಡ್ ನಟಿ ಮತ್ತು ಉದ್ಯಮಿ ತಮ್ಮ ಮಕ್ಕಳಿಗೆ ತಮ್ಮ ಮಂಗಳೂರಿನ ಪರಂಪರೆ ಮತ್ತು ಸಂಸ್ಕೃತಿಯನ್ನು ಪರಿಚಯಿಸಲು ಬಯಸುತ್ತಾರೆ. ನನಗೆ ತುಂಬಾ ಹೆಮ್ಮೆಯಿದೆ ಎಂದು ಹೇಳಿದ್ದಾರೆ.
ಶಿಲ್ಪಾ ಭಾನುವಾರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ತಮ್ಮ ತಾಯಿ, ಸಹೋದರಿ ಶಮಿತಾ ಮತ್ತು ಅವರ ಇಬ್ಬರು ಮಕ್ಕಳಾದ ವಿಯಾನ್ ಮತ್ತು ಸಮೀಶಾ ಅವರನ್ನೊಳಗೊಂಡ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
'ನನ್ನ ಮೂಲವಾದ ಮಂಗಳೂರಿಗೆ ಹಿಂತಿರುಗಿದ್ದೇನೆ. ನಮ್ಮ ಕುಲದೇವಿ ಕಟೀಲು ದುರ್ಗಾಪರಮೇಶ್ವರಿಗೆ ನನ್ನ ನಮನಗಳನ್ನು ಸಲ್ಲಿಸುತ್ತಿದ್ದೇನೆ. ಮಂಗಳೂರಿನ ಪರಂಪರೆ ಮತ್ತು ಸಂಸ್ಕೃತಿಯನ್ನು ನನ್ನ ಮಕ್ಕಳಿಗೆ ಪರಿಚಯಿಸುತ್ತಿದ್ದೇನೆ. ನಾನು ತುಂಬಾ ಹೆಮ್ಮೆಪಡುತ್ತೇನೆ' ಎಂದು ಅವರು ಶೀರ್ಷಿಕೆ ನೀಡಿದ್ದಾರೆ.
ಮುಂಬರುವ ಕಾಪ್ ಆಕ್ಷನ್ ಡ್ರಾಮಾ ಸ್ಟ್ರೀಮಿಂಗ್ ಸರಣಿಯಾದ ರೋಹಿತ್ ಶೆಟ್ಟಿ ಅವರ 'ಇಂಡಿಯನ್ ಪೊಲೀಸ್ ಫೋರ್ಸ್' ನಲ್ಲಿ ಶಿಲ್ಪಾ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವಿವೇಕ್ ಒಬೆರಾಯ್ ನಾಯಕರಾಗಿದ್ದಾರೆ.
ಅವರು ಕೊನೆಯದಾಗಿ 2022 ರಲ್ಲಿ 'ನಿಕಮ್ಮ' ಚಿತ್ರದಲ್ಲಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದರು. ಇದರಲ್ಲಿ ಅಭಿಮನ್ಯು ದಸ್ಸಾನಿ ಮತ್ತು ಶೆರ್ಲಿ ಸೆಟಿಯಾ ಕೂಡ ನಟಿಸಿದ್ದಾರೆ.