ಮರಗಳ ಕಂಟಕವಾಗಿ ಪರಿಣಮಿಸಿದ ಸಿಮೆಂಟ್'ಯುಕ್ತ ಗುಂಡಿಗಳು!

ಸಿಲಿಕಾನ್ ಸಿಟಿ ಬೆಂಗಳೂರು ಅಗಾಧವಾಗಿ ಬೆಳೆಯುತ್ತಿದ್ದು, ಅಭಿವೃದ್ಧಿಯ ಜೊತೆಗೆ ಹಸಿರು ಹೊದಿಕೆಗೆ ಕೊಡಲಿ ಪೆಟ್ಟುಗಳು ಬೀಳುತ್ತಲೇ ಇದೆ. ನಗರದ ಅಭಿವೃದ್ಧಿಗಾಗಿ ನಾನಾ ರೀತಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು. ಇದು ಮರಗಳ ಮೇಲೆ ಪರಿಣಾಮ ಬೀರುತ್ತಿವೆ. ರಸ್ತೆಗಳು ಅಭಿವೃದ್ಧಿಗೊಂಡಂತೆ ಮರಗಳು ಹಾನಿಗೊಳಗಾಗುತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಅಗಾಧವಾಗಿ ಬೆಳೆಯುತ್ತಿದ್ದು, ಅಭಿವೃದ್ಧಿಯ ಜೊತೆಗೆ ಹಸಿರು ಹೊದಿಕೆಗೆ ಕೊಡಲಿ ಪೆಟ್ಟುಗಳು ಬೀಳುತ್ತಲೇ ಇದೆ. ನಗರದ ಅಭಿವೃದ್ಧಿಗಾಗಿ ನಾನಾ ರೀತಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು. ಇದು ಮರಗಳ ಮೇಲೆ ಪರಿಣಾಮ ಬೀರುತ್ತಿವೆ. ರಸ್ತೆಗಳು ಅಭಿವೃದ್ಧಿಗೊಂಡಂತೆ ಮರಗಳು ಹಾನಿಗೊಳಗಾಗುತ್ತಿವೆ.
 
ಮಳೆಗಾಲ ಶುರುವಾಗುತ್ತಿದ್ದಂತೆಯೇ ನಗರದಲ್ಲಿ ಮರಗಳು ಧರೆಗುರುಳುವುದು ಸಾಮಾನ್ಯವಾಗಿ ಹೋಗುತ್ತವೆ. ಈ ಹಿಂದೆ ಕೂಡ ಜಯನಗರದ ಆರ್.ವಿ.ರಸ್ತೆ ಹಾಗೂ ಬಸವನಗುಡಿಯ ಕೆ.ಆರ್.ರಸ್ತೆಯಲ್ಲಿ ಇಂತಹ ಘಟನೆಗಳು ವರದಿಯಾಗಿದ್ದವು. ಈ ಮರಗಳ ಉರುಳುವಿಕೆಗೆ ಸಿಮೆಂಟ್ ಯುಕ್ತ ಗುಂಡಿಗಳು ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪಾದಚಾರಿ ಮಾರ್ಗದಲ್ಲಿರುವ ಮರಗಳ ಪಕ್ಕದಲ್ಲಿ ಗುಂಡಿಗಳನ್ನು ಅಗೆಯುತ್ತಿದ್ದು, ಅಲ್ಲಿ ವಿದ್ಯುತ್ ಕಂಬಗಳನ್ನು ನಿರ್ಮಿಸುತ್ತಿದೆ. ನಂತರ ಈ ಗುಂಡಿಗಳನ್ನು ಸಿಮೆಂಟ್ ನಿಂದ ಮುಚ್ಚುತ್ತಿದೆ.

ಸುಮಾರು 5 ಇಂಚುಗಳಷ್ಟು ಅಡಿಗೆ ಗುಂಡಿ ಅಗೆಯಲಾಗುತ್ತಿದೆ. ನಂತರ ಸಿಮೆಂಟ್ ನಿಂದ ಮುಚ್ಚಲಾಗುತ್ತಿದೆ. ಈ ಗುಂಡಿಗಳು ಮರಗಳ ಹತ್ತಿರದಲ್ಲೇ ತೋಡಿ, ಮುಚ್ಚುತ್ತಿರುವುದರಿಂದ ಇದು ಮರಗಳಿಗೆ ಕೊಡಲಿ ಏಟು ನೀಡಿದಂತಾಗುತ್ತಿದೆ. ಸಿಮೆಂಟ್ ಯುಕ್ತ ಈ ಗುಂಡಿಗಳು ಹೊಸ ಬೇರುಗಳಿಗೆ ಅವಕಾಶ ಮಾಡಿಕೊಡುವುದಿಲ್ಲ. ಇದರಿಂದ ಮರಗಳ ಬೆಳವಣಿಗೆಗೆ ಅಡ್ಡಿಯುಂಟಾಗುತ್ತಿದೆ. ಈ ಬಗ್ಗೆ ವೃಕ್ಷ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಪರಿಸರವಾದಿ ಯಲ್ಲಪ್ಪ ರೆಡ್ಡಿ ಮಾತನಾಡಿ, ಬೇರುಗಳಿಗೆ ಅತ್ಯಂತ ಸಮೀಪದಲ್ಲಿ ಸಿಮೆಂಟ್ ಹಾಕುವುದರಿಂದ ನೀರು ಬೇರುಗಳಿಗೆ ಸೇರಲು ಸಾಧ್ಯವಾಗದಂತೆ ಮಾಡುತ್ತದೆ. ಆಳವಾದ ಬೇರುಗಳಿದ್ದರೂ, ಕೊಂಬೆಗಳಿಗೆ ನೀರು ತಲುಪಲು ಸಹಾಯ ಮಾಡುವಲ್ಲಿ ಅಕ್ಕಪಕ್ಕದ ಬೇರುಗಳು ಪ್ರಮುಖ ಪಾತ್ರವಹಿಸುತ್ತವೆ. ಬೇರುಗಳು ಅರೋಗ್ಯಕರವಾಗಿರುವಂತೆ ಮಾಡಲು ಈ ಅಕ್ಕಪಕ್ಕದ ಬೇರುಗಳು ನಿರ್ಣಾಯಕವಾಗಿವೆ. ಬೇರುಗಳು ಹಾನಿಗೊಳಗಾದರೆ ಮರವು ಯಾವಾಗ ಬೇಕಾದರೂ ಬೀಳಬಹುದು ಮತ್ತು ಮರಗಳು ಮುಖ್ಯ ರಸ್ತೆಗಳಲ್ಲಿ ಇರುವುದರಿಂದ ಪಾದಚಾರಿಗಳಿಗೆ ಅಪಾಯ ಎದುರಾಗುತ್ತವೆ ಎಂದು ಹೇಳಿದ್ದಾರೆ.

ಜಯನಗರ ನಿವಾಸಿ ರಾಘವೇಂದ್ರ ಪಾಚ್ಚಾಪುರ ಮಾತನಾಡಿ, ‘ಈ ಕಂಬಗಳನ್ನೇಕೆ ಬೇರೆಡೆಗೆ ಸ್ಥಳಾಂತರಿಸಲು ಸಾಧ್ಯವಿಲ್ಲ? ಇದು ಬಿಬಿಎಂಪಿ ನಿರ್ಲಕ್ಷ್ಯವಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com